ಕಾರ್ಕಳ: ಪರಶುರಾಮ ಕಂಚಿನ ಪ್ರತಿಮೆ ಜನವರಿಯಲ್ಲಿ ಲೋಕಾರ್ಪಣೆ

ಸಿದ್ಧತೆ ಅಪೂರ್ಣ, ಅಧಿವೇಶನ ಕಾರಣಗಳಿಂದ ಮುಂದೂಡಲ್ಪಟ್ಟಿತ್ತು

Team Udayavani, Dec 18, 2022, 5:00 AM IST

ಕಾರ್ಕಳ: ಪರಶುರಾಮ ಕಂಚಿನ ಪ್ರತಿಮೆ ಜನವರಿಯಲ್ಲಿ ಲೋಕಾರ್ಪಣೆ

ಕಾರ್ಕಳ: ಪರಶುರಾಮನ ಕಂಚಿನ ಪ್ರತಿಮೆ ಒಳಗೊಂಡ ಪಾರ್ಕ್‌ ಅನ್ನು ಕಾರ್ಕಳದ ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ನಿರ್ಮಿಸಲಾಗುತ್ತಿದ್ದು ಬಹುತೇಕ ಕಾಮಗಾರಿಗಳು ಅಂತಿಮ ಹಂತಕ್ಕೆ ತಲುಪಿವೆ. ಜನವರಿ ಯ‌ಲ್ಲಿ ಪ್ರತಿಮೆಯ ಲೋಕಾರ್ಪಣೆ ನಡೆಯಲಿದೆ.

ಉಡುಪಿ-ಕಾರ್ಕಳ ಹೆದ್ದಾರಿ ಮಧ್ಯೆ ಬರುವ ಬೈಲೂರಿನಲ್ಲಿ 10 ಕೋ.ರೂ. ಅಧಿಕ ವೆಚ್ಚದಲ್ಲಿ ಪರಶುರಾಮನ ಕಂಚಿನ ಪ್ರತಿಮೆ ಒಳಗೊಂಡ ಪಾರ್ಕ್‌ ರಚಿಸಲಾಗುತ್ತಿದೆ. ಪಾರ್ಕ್‌ ರಚನೆಗೆ ಸಂಬಂಧಿಸಿ ಕಟ್ಟಡಗಳ ಫೌಂಡೇಶನ್‌, ಗೋಡೆ ನಿರ್ಮಾಣ ಕೆಲಸ ಪೂರ್ಣಗೊಂಡು, ಆಡಿಯೋ ವಿಶುವಲ್‌ ಕೊಠಡಿಯೊಂದಿಗೆ ಸ್ಟೇಟ್‌ ಆಪ್‌ ದಿ ಆರ್ಟ್‌ ಮ್ಯೂಸಿಯಂ, ಪರಶುರಾಮನ ಕ್ಷೇತ್ರ ಆನಂದಿಸಲು ನೇಯ್ಗೆ ಡೆಕ್‌ ಗ್ಯಾಲರಿ, ಸಾವಿರ ಜನರ ಸಾಮರ್ಥ್ಯದ ಬಯಲು ಮಂದಿರ, ಭಜನ ಮಂದಿರ, ಹಾಲ್‌ ಪ್ರೇಂ ಕೆಲಸ, ಹಸುರು ಕೋಣೆಗಳ ಪಾಪ್‌ ಸಂಗ್ರಹಣೆ, ವೇದಿಕೆ, ನೈಸರ್ಗಿಕ ಸೈಟ್‌ ವೈಶಿಷ್ಟéಗಳಿಗೆ ಪೂರಕ ನಿರ್ಮಾಣ ಕಾರ್ಯ ಶೇ. 90ರಷ್ಟು ಪೂರ್ಣಗೊಂಡಿವೆ.

ಬೆಟ್ಟದ ಮೇಲೆ ಕಷ್ಟದ ಕಾಯಕ
ರಸ್ತೆಯಿಂದ 450 ಅಡಿ ಎತ್ತರದಲ್ಲಿ ಬೆಟ್ಟದಿಂದ 57 ಅಡಿ ಎತ್ತರದಲ್ಲಿ 33 ಅಡಿಯ ಕಂಚಿನ ಪ್ರತಿಮೆ ಸ್ಥಾಪನೆಯಾಗ ಲಿದೆ. 10 ಅಡಿ ಪೀಠ ಇರಲಿದೆ. ಕಾಮಗಾರಿ ನಡೆಯುವ
ಸ್ಥಳಕ್ಕೆ ಅಗತ್ಯ ವಸ್ತುಗಳನ್ನು ಕೊಂಡೊಯ್ದು ಕಾಮಗಾರಿ ನಡೆಸುವುದು ಸಾಹಸ ಕೆಲಸವಾಗಿತ್ತು. ಈ ನಡುವೆ ನಿರ್ಮಿತಿ ಕೇಂದ್ರವು ಆರಂಭದಿಂದಲೂ ತ್ವರಿತವಾಗಿ ಕಾಮಗಾರಿ
ನಡೆಸಿಕೊಂಡು ಬಂದಿತ್ತು. ಈ ಭಾಗದಲ್ಲಿ ನಿರಂತರ ಸುರಿದ ಮಳೆಯಿಂದ ಕಾಮಗಾರಿಗೆ ಕೊಂಚ ಹಿನ್ನಡೆ ಆಗಿತ್ತು.

ಆದರೂ ವೇಗವಾಗಿ ಕಾಮಗಾರಿ ಮುಂದುವರಿದು ಇದೀಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಅಂತಿಮ ಸ್ಪರ್ಶ ನೀಡುವ ಕೆಲಸವಾಗುತ್ತಿದ್ದು, ಕಂಚಿನ ಪ್ರತಿಮೆ ಯಿರುವ ಸ್ಥಳದ ಸುತ್ತಲ ಮೇಲ್ಛಾವಣಿ ಇನ್ನಿತರ ಶೇ.10ರಷ್ಟು ಕಾಮಗಾರಿಗಳಷ್ಟೇ ಇನ್ನು ಪೂರ್ಣವಾಗಲು ಬಾಕಿ ಉಳಿದಿವೆ. ಜ. 10ರ ವೇಳೆಗೆ ಪೂರ್ಣವಾಗಲಿದೆ.

ಶೀಘ್ರ ದಿನ ನಿಗದಿ
ಡಿಸೆಂಬರ್‌ನಲ್ಲಿ ಲೋಕಾರ್ಪಣೆ ಅಂತ ನಿರ್ಧರಿಸಲಾಗಿತ್ತು. ನಾನಾ ಕಾರಣಗಳಿಂದ ಹಾಗೂ ಉಡುಪಿಗೆ ಪ್ರಧಾನಿ ಮೋದಿ ಅಥವಾ ಯೋಗಿ ಆದಿತ್ಯನಾಥ್‌ ಇಬ್ಬರಲ್ಲಿ ಒಬ್ಬರು ಬರುವ ಕಾರಣವೂ ಸೇರಿ ಮುಂದೂಡಲ್ಪಟ್ಟು ಜನವರಿಯಲ್ಲಿ ಲೋಕಾರ್ಪಣೆಯಾಗಲಿದೆ. ಮುಂದಿನ ವಾರದಲ್ಲಿ ಕಂಚಿನ ಪ್ರತಿಮೆಯ ಮೊದಲ ಅರ್ಧ ಭಾಗ ಕಾರ್ಕಳ ತಲುಪಲಿದೆ. ಶೀಘ್ರ ದಿನ ಪ್ರಕಟಿಸಲಾಗುವುದು.
-ವಿ. ಸುನಿಲ್‌ ಕುಮಾರ್‌, ಸಚಿವ

ಜನವರಿ 10ರೊಳಗೆ ಪ್ರತಿಮೆ ಕಾರ್ಕಳಕ್ಕೆ
ಪರಶುರಾಮನ ಕಂಚಿನ ಪ್ರತಿಮೆ ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದ್ದು. ಅಲ್ಲಿಂದ ಕಾರ್ಕಳಕ್ಕೆ ಜನವರಿ ಆರಂಭದ ವಾರದಲ್ಲಿ ತರಲಾಗುತ್ತಿದೆ. ಅದಕ್ಕೂ ಮೊದಲು ಮುಂದಿನ ವಾರ ಪ್ರತಿಮೆ ನಿಲ್ಲುವ ಬೇಸ್‌, ಇತರ ಪಾರ್ಟ್‌ಗಳು ಒಂದೊಂದಾಗಿ ಬೆಟ್ಟ ತಲುಪಿ, ಜೋಡಿಸಲ್ಪಡಲಿದೆ. ಜ. 10ರೊಳಗೆ ಎಲ್ಲವೂ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.