Parashurama Statue; ಧಾರ್ಮಿಕ ಭಾವನೆಗೆ ಧಕ್ಕೆ ತಂದವರನ್ನು ಸಮಾಜ ಬಹಿಷ್ಕರಿಸಬೇಕು

ಮುಂದಿನ ದಿನಗಳಲ್ಲಿ ಅಪಾಯ ಗ್ಯಾರಂಟಿ : ಮುನಿಯಾಲು ಉದಯ ಕುಮಾರ್ ಶೆಟ್ಟಿ

Team Udayavani, Sep 18, 2024, 11:58 AM IST

muniyal (2)

ಉಡುಪಿ : ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣದ ಹೆಸರಿನಲ್ಲಿ ಭ್ರಷ್ಟಾಚಾರ ಎಸಗಿದ್ದು ಮಾತ್ರವಲ್ಲದೆ ದಿನಕ್ಕೊಂದು ಸುಳ್ಳು ಹೇಳುತ್ತಾ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧರ್ಮವಿರೋಧಿ ಜನಪ್ರತಿನಿಧಿಯನ್ನು ಸಮಾಜ ಬಹಿಷ್ಕರಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಗ್ಯಾರಂಟಿ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾರು ಉದಯ ಶೆಟ್ಟಿ ಬುಧವಾರ(ಸೆ18) ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದ್ದು ಅಲ್ಲದೆ ಪರಶುರಾಮ ಮೂರ್ತಿಯ ಮೇಲ್ಬಾಗ ನಕಲಿ ಎಂದು ಗೊತ್ತಿದ್ದರೂ ಮೇಲ್ಮಾಗವನ್ನ ಎಲ್ಲಿಯೂ ಜನರಿಗೆ ಕಾಣಿಸದೆ ರಾತ್ರಿ ಕದ್ದು ನಿರಂತರವಾಗಿ ಜನರಿಗೆ ಸುಳ್ಳು ಹೇಳುತ್ತಾ ತಾನು ಮಾಡಿದ್ರೆ ಸರಿ ಎಂದು ಅಪಪ್ರಚಾರ ಮಾಡುತ್ತಿದ್ದ ಕಾರ್ಕಳ ಶಾಸಕರ ನಿಜ ಬಣ್ಣ ಬಯಲಾಗಿದೆ. ಇಷ್ಟಿದ್ದರೂ ಕೂಡ ಅಸಲಿ ಮೂರ್ತಿ ಎಂದು ಕೋರ್ಟಿಗೆ ಮತ್ತೆ ದಾಖಲೆಗಳನ್ನು ತಯಾರು ಮಾಡುತ್ತಿರುವ ಶಾಸಕರ ವರ್ತನೆ ನೋಡಿದರೆ ಅಚ್ಚರಿ ಎನಿಸುತ್ತಿದೆ. ಕೇವಲ ರಾಜಕೀಯ ಲಾಭ ಗೋಸ್ಕರ ಪರಶುರಾಮ ಥೀಮ್ ಪಾರ್ಕ್ ಬಳಸಿಕೊಂಡು ಜನರ ಭಾವನ ಜತೆ ಚೆಲ್ಲಾಟ ಕೂಡಲೇ ಸಮಾಜ ಬಹಿಷ್ಕರಿಸಬೇಕು ಮತ್ತು ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಿ ಶಿಕ್ಷೆ ಆಗಬೇಕು ಎಂದರು. ಪರಿಣತರಿಗೆ ನೀಡಿ ಪರಶುರಾಮ ಮೂರ್ತಿಯನ್ನು ತಯಾರು ಮಾಡಿದ ಕೃಷ್ಣ ನಾಯ್ಕ ಎಂಬವರಿಗೆ ಸರಿಯಾದ ಜ್ಞಾನ ಇಲ್ಲ. ಅವರು ಕೂಡ ದಿನಕೊಂದು ಕಥೆಗಳನ್ನ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಪ್ರತಿಮೆ ನಿರ್ಮಾಣವಾಗಬೇಕಾದರೆ ಯಾವುದೇ ಕಾರಣಕ್ಕೂ ಮೂರ್ತಿಯ ಮರು ರಚನೆಗೆ ಕೃಷ್ಣನಾಯಕ್ ಅವರಿಗೆ ನೀಡದೆ ಬೇರೆ ಪರಿಣಿತ ತಂಡಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪುಚಂಡ ಸುಳ್ಳುಗಾರ
ನಿರಂತರ ಸುಳ್ಳು ಹೇಳಿ ಜನರನ್ನ ಮರಳು ಮಾಡುವ ಶಾಸಕರಿದ್ದರೆ ಅದು ಕಾರ್ಕಳದಲ್ಲಿ ಮಾತ್ರ. ರಾಜ್ಯ ಹಾಗೂ ಕೇಂದ್ರದಲ್ಲಿ ಕೂಡ ಇಂತಹ ಶಾಸಕ ಸಿಗಲಿಕ್ಕಿಲ್ಲ. ಇವರಿಗೆ ಪ್ರಚಂಡ ಸುಳ್ಳುಗಾರ ಎಂದು ಬಿರುದು ನೀಡಿದರೂ ತಪ್ಪಾಗಲಾರದು. ತಪ್ಪು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಚಾಳಿ : ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕೆಂದು ಜನರನ್ನು ಮರಳು ಮಾಡುತ್ತಾ ತನ್ನ ಅಭಿವೃದ್ಧಿ ಮಾಡಿಕೊಂಡ ಕಾರ್ಕಳ ಶಾಸಕ ಈಗ ಪರಶುರಾಮ ತೀನ್ ಪಾರ್ಕ್ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಎಂದು ಸುಳ್ಳು ಆರೋಪ ಮಾಡಿ ತನ್ನ ಭ್ರಷ್ಟಾಚಾರವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಪ್ರವಾಸೋದ್ಯಮಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಕಾರ್ಕಳ ಮಸ್ತಕಾಭಿಷೇಕ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಪ್ರವಾಸೋದ್ಯಮಕ್ಕೆ ನೀಡಿ ಕಾರ್ಕಳ ಅಭಿರುದ್ದಿ ಪಡಿಸಿದ್ದು ಕಾಂಗ್ರೆಸ್. ಆದರೆ ಕಾರ್ಕಳ ಶಾಸಕ ಎಣ್ಣೆ ಹೊಳೆ, ಕಾರ್ಕಳೋತ್ಸವ ಮೊದಲಾದ ಕಾರ್ಯಕ್ರಮವನ್ನು ಮಾಡಿ ಹಣ ಮಾಡಿದರೆ ವಿನಹ ಪ್ರವಾಸೋದ್ಯಮಕ್ಕೆ ಕೊಡುಗೆ ಏನು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸ್ತೂರಿ ರಂಗನ್ ವರದಿ ಜಾರಿಯಾಗಲು ಬಿಡುವುದಿಲ್ಲ

ಹುಲಿ ಯೋಜನೆ,ಕಸ್ತೂರಿ ರಂಗನ್ ವರದಿ ಮೊದಲಾದ ವಿಚಾರಗಳನ್ನು ಜನರಿಗೆ ಭಯಪಡಿಸುತ್ತಾ ಈ ಹಿಂದೆ ಅಧಿಕಾರ ಬಂದ ಬಿಜೆಪಿ ಜನರಿಗೆ ಮೋಸ ಮಾಡುತ್ತಿದೆ. ಈಗ ಮತ್ತೆ ರಾಜ್ಯದಲ್ಲಿ ವರದಿಯನ್ನು ಕೇಳಲು ಮುಂದಾಗಿದೆ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಮತ್ತು ಹುಲಿ ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದರು.

ಮುಖಂಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ, ರಮೇಶ್ ಕಾಂಚನ್, ವಿನಯ ಕುಮಾರ್ ಕಬ್ಯಾಡಿ, ಯೋಗೀಶ್ ಇನ್ನಾ ಪತ್ರಿಕಾಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

22-bantwala-5

Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ

7

BBK11: ತಾಯಿಯನ್ನು ನೆನೆದು ಬಿಗ್‌ ಬಾಸ್‌ ವೇದಿಕೆಯಲ್ಲೇ ಕಣ್ಣೀರಿಟ್ಟ ಕಿಚ್ಚ ಸುದೀಪ್

21-ptr

Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!

20-kadaba

ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

Jammu Kashmir: Two terrorists hit in an encounter

Jammu Kashmir: ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

14-malpe

Malpe: ನಿರಂತರ ರಜೆ: ಬೀಚ್‌ಗಳಲ್ಲಿ ಪ್ರವಾಸಿಗರ ದಟ್ಟಣೆ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ

Online Trading: ಉಡುಪಿ ಮೂಲದ ವ್ಯಕ್ತಿಗೆ 27 ಲಕ್ಷ ರೂ. ವಂಚನೆ

Online Trading: ಆನ್‌ಲೈನ್‌ ಲಿಂಕ್‌ ಅಪ್ಲಿಕೇಶನ್‌ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

Padubidri: ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್‌ ಢಿಕ್ಕಿ… ಮಹಿಳೆಗೆ ಗಾಯ

Padubidri: ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್‌ ಢಿಕ್ಕಿ… ಮಹಿಳೆಗೆ ಗಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

23-balindra

Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

22-bantwala-5

Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.