Parashurama Statue; ನಿಜವಾದ ಕಂಚಿನ ಮೂರ್ತಿ ಸ್ಥಾಪನೆಯಾಗಲಿ: ಉದಯ ಶೆಟ್ಟಿ
Team Udayavani, Oct 15, 2023, 12:00 AM IST
ಕಾರ್ಕಳ: ಬೈಲೂರಿನ ಉಮಿಕಲ್ಲು ಬೆಟ್ಟದಲ್ಲಿ ಪರಶುರಾಮನ ಮೂರ್ತಿಯ ಕಾಮಗಾರಿ ನಡೆಯುತ್ತಿರುವ ಜಾಗಕ್ಕೆ ಕಾಂಗ್ರೆಸ್ ನಾಯಕರು ಶನಿವಾರ ಭೇಟಿ ನೀಡಿದರು.
ಈ ಸಂದರ್ಭ ಕಾಂಗ್ರೆಸ್ ನಾಯಕ ಉದಯ್ ಶೆಟ್ಟಿ ಮುನಿಯಾಲು ಮಾತನಾಡಿ, ಪರಶುರಾಮನ ಪಾದ ಹಾಗೂ ಗಂಟಿನ ತನಕದ ಭಾಗ ಮಾತ್ರ ಇಲ್ಲಿ ಉಳಿದಿದೆ. ಬೇರೆ ಯಾವ ಅಂಗವೂ ಇಲ್ಲಿಲ್ಲ. ಅಧಿಕಾರಿಗಳು ಕೊಟ್ಟ ಮಾಹಿತಿ ಪ್ರಕಾರ 15 ಟನ್ ಭಾರ ಹಾಗೂ 33 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲು ಕನಿಷ್ಠ 2 ವರ್ಷ ಬೇಕಾಗುತ್ತದೆ. ಆದರೆ ಇದು ಕೇವಲ ಮೂರು ತಿಂಗಳಲ್ಲಿ ಆದ ಮೂರ್ತಿಯಾಗಿದೆ. ನವೆಂಬರ್ 30ರೊಳಗೆ ಕಾಮಗಾರಿ ಮುಗಿಸಲಿಕ್ಕೆ ಇದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ನಮಗೆ ಯಾವುದೇ ಅವಸರವಿಲ್ಲ. ನಿಧಾನಗತಿಯಲ್ಲಿ ಹಂತ ಹಂತವಾಗಿ ಕಾಮಗಾರಿ ನಡೆದು ನಿಜವಾದ ಕಂಚಿನ ಮೂರ್ತಿಯ ನಿರ್ಮಾಣವಾಗಲಿ ಎಂದು ಆಗ್ರಹಿಸಿದ್ದಾ ರೆ.
ಬೈಲೂರಿನಲ್ಲಿ ಪ್ರವಾಸೋದ್ಯಮ ಬೆಳೆಯಬೇಕು, ಕಂಚಿನ ಪ್ರತಿಮೆ ಇಲ್ಲಿ ಪ್ರತಿಷ್ಠಾಪನೆ ಆಗಬೇಕು, ಅನ್ಯ ರಾಜ್ಯದ ಜನರು ಬಂದು ಪರಶುರಾಮರ ಪ್ರತಿಮೆಯನ್ನು ನೋಡಬೇಕು ಎನ್ನುವುದು ನಮ್ಮ ಆಸೆ ಕೂಡ ಎಂದವರು ತಿಳಿಸಿದರು.
ಉಡುಪಿಯ ನಿರ್ಮಿತಿ ಕೇಂದ್ರ ಕಾಮಗಾರಿಯನ್ನು ವಹಿಸಿಕೊಂಡಿದೆ. ಆದರೆ ಅವರು ತಾಂತ್ರಿಕವಾಗಿ ಯೋಗ್ಯರಲ್ಲ. ಹಾಗಾಗಿ ಏಜೆನ್ಸಿಯನ್ನು ಬದಲಾಯಿಸಿ ಎಂದರು.
ಊರಿನವರು ಹಾಗೂ ಹಿರಿಯರ ಜತೆ ಸೇರಿಕೊಂಡು ಸತ್ಯ ಶೋಧನ ತಂಡವನ್ನು ರಚಿಸಿ ಅದರ ಮೂಲಕ ಕಾಮಗಾರಿಯಾಗಲಿ ಎಂದವರು ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.