“ದುಡಿಮೆಯ ಸ್ವಲ್ಪ ಅಂಶ ಬಡಜನರ ಸೇವೆಗೆ ಮೀಸಲಿಡಿ’
Team Udayavani, Sep 2, 2017, 7:25 AM IST
ಉಡುಪಿ: ಗಣಪತಿಯ ಸೇವೆ ಯೊಂದಿಗೆ ಸಮಾಜಕ್ಕೆ ಪ್ರಯೋಜನ ಕಾರಿಯಾಗುವಂತ ಕೆಲಸವಾಗಬೇಕು.ಮಾತ್ರವಲ್ಲದೆ ತಮ್ಮ ದುಡಿಮೆಯಲ್ಲಿ ಸ್ವಲ್ಪ ಅಂಶವನ್ನು ಬಡಜನರ ಸೇವೆಗೆ ಮೀಸಲು ಇಡಬೇಕು. ಆಗ ಗಣಪತಿಯ ಪರಿಪೂರ್ಣ ಅನುಗ್ರಹ ನಮ್ಮ ಮೇಲೆ ಇರುತ್ತದೆ ಎಂದು ಮೈಸೂರಿನ ಖ್ಯಾತ ಹೃದ್ರೋಗ ತಜ್ಞ ಡಾ| ಪಿ.ಹರಿದಾಸ ಉಪಾಧ್ಯ ಹೇಳಿದರು.
ಅವರು ಸೆ. 31ರಂದು ಪರ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಸುವರ್ಣ ಮಹೋತ್ಸವದ ಸುವರ್ಣ ಸಂಗಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಣಿಪಾಲ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಜಿ.ಕೆ.ಪ್ರಭು ಅಧ್ಯಕ್ಷತೆ ವಹಿಸಿದರು.
ಮಾಜಿ ಶಾಸಕ ಲಾಲಾಜಿ ಮೆಂಡನ್, ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ , ಬೆಂಗಳೂರು ಉದ್ಯಮಿ ಪಿ. ಕೃಷ್ಣಮೂರ್ತಿ ಉಪಾಧ್ಯ, ರೋಟರಿಯ ಬಾಲಕೃಷ್ಣ ಮಧ್ದೋಡಿ, ಸುವರ್ಣ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯ, ಕಬ್ಯಾಡಿ ಜಯರಾಮ ಆಚಾರ್ಯ, ಪಿ.ಬಾಲಕೃಷ್ಣ ನಾಯಕ್, ದಿನೇಶ ಶೆಟ್ಟಿ ಹೆರ್ಗ, ಸಂಚಾಲಕ ದಿಲೀಪ್ ರಾಜ್ ಹೆಗ್ಡೆ, ಉಪಾಧ್ಯಕ್ಷ ಸುಬ್ರಾಯ ಆಚಾರ್ಯ, ಕೋಶಾಧಿಕಾರಿ ಪ್ರಮೋದ ಕುಮಾರ್, ಆಚರಣಾ ಸಮಿತಿಯ ಕಾರ್ಯದರ್ಶಿ ಮನೋ ಜ್ ಹೆಗ್ಡೆ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ಉಪಾಧ್ಯಕ್ಷ ಶಿವರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ದಿನೇಶ ಹೆಗ್ಡೆ ಆತ್ರಾಡಿ ಪ್ರಸ್ತಾವನೆ ಗೈದರು. ಅಧ್ಯಕ್ಷ ಮಹೇಶ ಠಾಕೂರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.