ಪರ್ಕಳದಲ್ಲಿ ನನೆಗುದಿಗೆ ಬಿದ್ದಿದೆ ರೇಡಿಯೋ ಟವರ್‌’


Team Udayavani, May 3, 2018, 6:30 AM IST

2804kdua1.jpg

ಪರ್ಕಳ: ಗ್ರಾಮೀಣ ಪ್ರದೇಶದಲ್ಲಿ ಮನೋರಂಜನೆ ಅಭಾವವಿದ್ದ ಆ ದಿನಗಳಲ್ಲಿ ರೇಡಿಯೋ ಮಾಹಿತಿ, ಮನೋರಂಜನೆ ಒದಗಿಸುವ ಮಾಧ್ಯಮವಾಗಿತ್ತು. ಅಂದು ಜನರಿಗೆ ಪ್ರಯೋಜನಕಾರಿಯಾಗಿದ್ದ, ಪರ್ಕಳದ ನಗರಸಭೆ ಉಪಕಚೇರಿ ಪಕ್ಕದಲ್ಲಿದ್ದ ರೇಡಿಯೋ ಕೇಂದ್ರ ಪಳೆಯುಳಿಕೆಯಾಗಿ ಉಳಿದಿದೆ.  

ರೇಡಿಯೋ ಪುನರಾರಂಭಿಸಿ
ಸುಮಾರು 50 ವರ್ಷಗಳ ಹಿಂದೆ ಅಂದಿನ ರಾಜ್ಯಪಾಲ ಧರ್ಮವೀರ ಅವರಿಂದ ಉದ್ಘಾಟನೆಗೊಂಡ ರೇಡಿಯೋ ಕೇಂದ್ರ ಕಾರಣಾಂತರಗಳಿಂದ ಅಂತ್ಯ ಕಂಡಿದ್ದರೂ ಅದನ್ನು ಪುನರಾರಂಭಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆ.  

ಜನಾಕರ್ಷಣೆಯ ಕೇಂದ್ರ
ಈ ರೇಡಿಯೋ ಕೇಂದ್ರದ ಬಳಿ ಸಾರ್ವಜನಿಕರಿಗೆ ಕುಳಿತು ಕೇಳಲು ಅನುಕೂಲವಾಗುವಂತೆ ಕಲ್ಲು ಹಾಸುಗಳನ್ನು, ಜಗುಲಿಗಳನ್ನು ನಿರ್ಮಿಸಲಾಗಿತ್ತು. ಅಲ್ಲದೇ ಸಣ್ಣ ಪ್ರಮಾಣದ ವೇದಿಕೆಯನ್ನೂ ನಿರ್ಮಿಸಲಾಗಿತ್ತು. ಈಗ ಅವೆಲ್ಲ ನಿಷ್ಪ್ರಯೋಜಕವಾಗಿವೆ. ಆ ದಿನಗಳಲ್ಲಿ ಪರ್ಕಳ ಹಾಗೂ ಸುತ್ತಮುತ್ತಲಿನ ಜನರು ನಿಗದಿತ ಸಮಯದಲ್ಲಿ ಇಲ್ಲಿಗೆ ಬಂದು ಕೃಷಿ, ಪ್ರಾದೇಶಿಕ ಸಮಾಚಾರ, ಮನೋರಂಜನೆ ಪಡೆಯುತ್ತಿದ್ದರು. ಈಗ ಆಧುನಿಕ ಪ್ರಭಾವದಿಂದಾಗಿ ಶ್ರೋತೃಗಳೇ ಇಲ್ಲ ಎಂಬಂತಾಗಿದೆ. ಮುಖ್ಯ ರೇಡಿಯೋ ಉಪಕರಣಗಳೂ ಕಳವಾಗಿವೆ.  ಸಂಸ್ಕೃತಿ, ಸಮಾರಂಭಗಳ ಬಗ್ಗೆ ವಿಷಯ ತಿಳಿಯುತ್ತಿದ್ದರಲ್ಲದೇ, ಅನಂತರದ ದಿನಗಳಲ್ಲಿ ಇದರ ಅಭಿವೃದ್ಧಿ ಕಡೆಗೆ ಯಾವುದೇ ಚಿಂತನೆ ನಡೆಸದ್ದರಿಂದ ಹಾಳುಬಿದ್ದಿದೆ.  

ಜನ ಮೆಚ್ಚುವಂತಿರಲಿ 
ಕೃಷಿಕರಾದ ನಮಗೆ ಕೃಷಿ ವಿಚಾರಗಳು, ರೈತರಿಗೆ ಸಲಹೆ ಮೊದಲಾದ ಸಮಕಾಲೀನ ಮಾಹಿತಿಗಳು ರೇಡಿಯೋ ಕೇಂದ್ರದಿಂದ ದೊರಕುತ್ತಿತ್ತು. ಅಂದಿನ ಕಾಲಕ್ಕೆ ನಮಗೆ ಅದೇ ದೊಡ್ಡ ಮಾಹಿತಿ ಕಣಜದೊಂದಿಗೆ ಮನೋರಂಜನೆಯಾಗಿತ್ತು. ಹೊಸ ತಾಂತ್ರಿಕತೆಯೊಂದಿಗೆ ಯುವ ಜನತೆಗೆ ಮೆಚ್ಚುಗೆಯಾಗಬಲ್ಲ ಕಾರ್ಯಕ್ರಮಗಳನ್ನು ಬಿತ್ತರಿಸುವ ಮೂಲಕ ಈ ಕೇಂದ್ರಕ್ಕೆ ಮರು ಚಾಲನೆ ನೀಡಬೇಕು. 
-ಪದ್ಮನಾಭ ನಾಯಕ್‌, 
ಕೃಷಿಕರು ಪರ್ಕಳ

ಆಧುನಿಕ ಮಾಧ್ಯಮಗಳ ಭರಾಟೆ 
ಅಂದು ಬಾನುಲಿಯಲ್ಲಿ ಪ್ರಸಾರವಾಗುತ್ತಿದ್ದ ಕೃಷಿರಂಗ, ಪ್ರಾದೇಶಿಕ ಸಮಾಚಾರಗಳನ್ನು ಕೇಳುವುದಕೋಸ್ಕರ ದೂರಗಳಿಂದ ಜನರು ಇಲ್ಲಿಗೆ ಬರುತ್ತಿದ್ದರು. ಆದರೆ ಕಾಲಕ್ರಮೇಣ ಜನರು ಟಿವಿ, ಇಂಟರ್‌ನೆಟ್‌, ಫೇಸ್‌ಬುಕ್‌, ವಾಟ್ಸಾéಪ್‌ಗ್ಳಿಂದಾಗಿ ಇಲ್ಲಿಗೆ ಬರುತ್ತಿಲ್ಲ. ರೇಡಿಯೋ ಕೇಂದ್ರವನ್ನು ಪ್ರಸ್ತುತ ಕಾಲಘಟ್ಟಕ್ಕೆ ಸರಿಯಾಗಿ ಹೊಂದಿಸಿಕೊಂಡು ಪರಿಸರದ ಜನರ ಆಕರ್ಷಣೆಯ ಕೇಂದ್ರವನ್ನಾಗಿಸಬೇಕಿದೆ.
– ದೇವರಾಯ ಕಾಮತ್‌, 
ಸ್ಥಳೀಯರು

– ಉದಯ ಆಚಾರ್‌ ಸಾಸ್ತಾನ

ಟಾಪ್ ನ್ಯೂಸ್

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

Shettar (3)

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

10

Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್‌ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

9

Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್‌ ಸ್ಪೋರ್ಟ್ಸ್ ಮತ್ತೆ ಆರಂಭ

8

Udupi: ಸಾಲು-ಸಾಲು ರಜೆ; ನವರಾತ್ರಿ ಸಂಭ್ರಮ; ಎಲ್ಲೆಡೆ ವಾಹನ ದಟ್ಟಣೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

crimebb

Kasaragod ಅಪರಾಧ ಸುದ್ದಿಗಳು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.