ಉಡುಪಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ


Team Udayavani, Nov 24, 2017, 11:00 AM IST

24-24.jpg

ಉಡುಪಿ:ಧರ್ಮ ಸಂಸದ್‌ನ ಅಂಗವಾಗಿ ನ. 26ರಂದು ಕುಂಜಿಬೆಟ್ಟುವಿನಲ್ಲಿರುವ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಬೃಹತ್‌ ಹಿಂದೂ ಸಮಾಜೋತ್ಸವ ಹಾಗೂ ಉಡುಪಿಯ ಜೋಡುಕಟ್ಟೆಯಿಂದ ಎಂಜಿಎಂ ವರೆಗೆ ಸಾಗುವ ಬೃಹತ್‌ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಹಿಂದೂ ಕಾರ್ಯಕರ್ತರು ಬರುವ ವಾಹನಗಳನ್ನು ನಿಲುಗಡೆಗೊಳಿಸಲು ಸ್ಥಳಗಳನ್ನು ಗೊತ್ತುಪಡಿಸಲಾಗಿದೆ. ಅವುಗಳ ವಿವರ ಈ ಕೆಳಗಿನಂತೆ ಇದೆ.

ಕಾರ್ಕಳ ಕಡೆಯಿಂದ ಬರುವವರಿಗೆ ಕಾರ್ಕಳದಿಂದ ಬರುವ ಕಾರ್ಯಕರ್ತರಿಗೆ ಹಿರಿಯಡಕ ವೀರಭದ್ರ ದೇವಸ್ಥಾನದ ಪಕ್ಕದಲ್ಲಿ ಆಹಾರದ ವ್ಯವಸ್ಥೆ ಇರುತ್ತದೆ. ಇಲ್ಲಿಗೆ ಬಂದಂತಹ ವಾಹನಗಳು ಅನಂತರ ಮಣಿಪಾಲ ಸಿಂಡಿಕೇಟ್‌ ವೃತ್ತದಲ್ಲಿ ಡಿಸಿ ಕಚೇರಿ ರಸ್ತೆ ಮೂಲಕ ಪೆರಂಪಳ್ಳಿ ರಸ್ತೆ-ಅಂಬಾಗಿಲು-ಕರಾವಳಿ ಜಂಕ್ಷನ್‌  ಆಗಿ ಅಂಬಲಪಾಡಿ-ಬ್ರಹ್ಮಗಿರಿ-ಡಯಾನ ಹೊಟೇಲ್‌ ಬಳಿಗೆ ಬಂದು ಭುಜಂಜ ಪಾರ್ಕ್‌ ರಸ್ತೆಯಲ್ಲಿ ಜನರನ್ನು ಇಳಿಸಬೇಕು. ಬಳಿಕ ಖಾಲಿ ವಾಹನಗಳು ಪಾರ್ಕ್‌ ರಸ್ತೆಯಲ್ಲಿ ಮುಂದುವರಿದು ಕಿನ್ನಿಮೂಲ್ಕಿ-ಬಲಾಯಿಪಾದೆ -ಕೊರಂಗ್ರಪಾಡಿ ರಸ್ತೆ ಮುಖಾಂತರ ಬೈಲೂರು ಮುದ್ದಣ್ಣ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡುವುದು. ಇಲ್ಲಿ ನಿಲುಗಡೆಯಾದ ವಾಹನಗಳು ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಎಂಜಿಎಂ ಮೈದಾನದ ಮುಂಭಾಗದ ರಸ್ತೆಯ ಬದಿಯಲ್ಲಿ ನಿಲುಗಡೆಗೆ ಅವಕಾಶ ಇದ್ದಷ್ಟು ವಾಹನಗಳನ್ನು ನಿಲ್ಲಿಸಿ ಜನರನ್ನು ಕಾರ್ಕಳ ಕಡೆಗೆ ಕರೆದುಕೊಂಡು ಹೋಗಬೇಕು.

ಮಂಗಳೂರಿನಿಂದ ಬರುವವರಿಗೆ ಮಂಗಳೂರಿನಿಂದ ಬರುವವರಿಗೆ ಉದ್ಯಾವರದಲ್ಲಿ ಆಹಾರ ಮತ್ತು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಅನಂತರ ಸರ್ವೀಸ್‌ ರಸ್ತೆಯ ಮೂಲಕ ಸ್ವಾಗತ ಗೋಪುರ-ಕಿನ್ನಿಮೂಲ್ಕಿಗೆ ಬಂದು ಅಲ್ಲಿ ಇಳಿಯುವುದು. ಅಲ್ಲಿಂದ ಜೋಡು ಕಟ್ಟೆಗೆ ನಡೆದುಕೊಂಡು  ಬರುವುದು. ಕಿನ್ನಿಮೂಲ್ಕಿ ಯಲ್ಲಿ ಜನರು ಇಳಿದ ಅನಂತರ ಖಾಲಿ ವಾಹನಗಳು ಬಲಾಯಿಪಾದೆ ಮುಖಾಂತರ- ಅಲೆವೂರು ರಸ್ತೆಯಿಂದಾಗಿ ಮಣಿಪಾಲ ಎಂಜೆಸಿ ಮೈದಾನದಲ್ಲಿ ನಿಲುಗಡೆ ಮಾಡಬೇಕು. ಇಲ್ಲಿ ನಿಲುಗಡೆ ಮಾಡಿದ ಬಸ್‌ಗಳು ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಮಣಿಪಾಲ ಮುಖ್ಯ ರಸ್ತೆ ಮುಖಾಂತರ ಇಂದ್ರಾಳಿ ಮಾರ್ಗವಾಗಿ ಎಂಜಿಎಂ ಮೈದಾನದ ಮುಖ್ಯ ರಸ್ತೆಯ ಎಡಭಾಗದಲ್ಲಿ ಸ್ಥಳಾವಕಾಶ ಇರುವಷ್ಟು ಮಾತ್ರ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗದಂತೆ ಒಂದರ ಹಿಂದೆ ಒಂದರಂತೆ ನಿಲ್ಲಿಸಿ ಜನರನ್ನು ಹಿಂದೆ ಕರೆದುಕೊಂಡು ಹೋಗಬೇಕು.

ಕುಂದಾಪುರದಿಂದ ಬರುವವರಿಗೆ
ಕುಂದಾಪುರ ಕಡೆಯಿಂದ ಬಂದ‌ವರಿಗೆ ಎಲ್‌ವಿಟಿ ಶಾಲೆಯ ಆವರಣದಲ್ಲಿ ಊಟದ ವ್ಯವಸ್ಥೆ ಇದೆ. ಜನರನ್ನು ಕರೆದುಕೊಂಡು ಬರುವಂತಹ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆಯನ್ನು ಕರಾವಳಿ ಹೈವೆ ಬಳಿ ಕಲ್ಪಿಸಲಾಗಿದೆ. ಅನಂತರ ಈ ವಾಹನಗಳು ಜನರನ್ನು ಕರೆದುಕೊಂಡು ಅಂಬಲಪಾಡಿ -ಬ್ರಹ್ಮಗಿರಿಯಾಗಿ -ಡಯಾನಾ ಹೊಟೇಲ್‌ ಹತ್ತಿರ ಪಾರ್ಕ್‌ ರಸ್ತೆಯಲ್ಲಿ ಜನರನ್ನು ಇಳಿಸಿ ಖಾಲಿ ವಾಹನಗಳು ಮಿಶನ್‌ ಕಾಂಪೌಂಡ್‌ ವೃತ್ತ, ಕೊಳಂಬೆ ಜಂಕ್ಷನ್‌ ಮೂಲಕ ಬೀಡಿನಗುಡ್ಡೆಯಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು. ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಈ ವಾಹನಗಳು ಎಸ್‌ಕೆಎಂ ಜಂಕ್ಷನ್‌ ಆಗಿ ಉಡುಪಿ-ಮಣಿಪಾಲ ಕಡೆಗೆ ರಸ್ತೆ ಬದಿಯಲ್ಲಿ ಸಂಚಾರಕ್ಕೆ ಅಡೆತಡೆ ಉಂಟಾಗದಂತೆ ನಿಲುಗಡೆಗೆ ಅವಕಾಶ ಇದ್ದಷ್ಟು ವಾಹನಗಳನ್ನು ನಿಲ್ಲಿಸಿ ಜನರನ್ನು ಕರೆದುಕೊಂಡು ಮಣಿಪಾಲ ಸಿಂಡಿಕೇಟ್‌ ವೃತ್ತದ ಮೂಲಕ ಪೆರಂಪಳ್ಳಿ ಮಾರ್ಗವಾಗಿ ಕುಂದಾಪುರ ಕಡೆಗೆ ತೆರಳಬೇಕು.

ಮಣಿಪಾಲಕ್ಕೆ ಹೋಗುವವರು; ಉಡುಪಿಗೆ ಬರುವವರು ಒಳರಸ್ತೆ ಬಳಸಿ ಹೀಗೆ ಬನ್ನಿ
ಉಡುಪಿ: ಮಂಗಳೂರು,  ಕುಂದಾಪುರ ಕಡೆಗಳಿಂದ ಮಣಿಪಾಲ ಕಡೆಗೆ ತೆರಳುವ ವಾಹನ ಚಾಲಕರು/ಸವಾರರಿಗೆ ನ. 24, 25ರಂದು ಸಂಚಾರಕ್ಕೆ ತೊಂದರೆಯುಂಟಾಗದು. ನ. 26ರಂದು ಮಾತ್ರ  ಎಂಜಿಎಂ ಮೈದಾನದಲ್ಲಿ ಬೃಹತ್‌ ಹಿಂದೂ ಸಮಾಜೋತ್ಸವ ನಡೆಯುವ ಕಾರಣ ಅಲ್ಲಿಗೆ ಲಕ್ಷ ಮಿಕ್ಕಿ ಜನ ಬರುತ್ತಾರೆ. ಈ ಸಂದರ್ಭ ಉಡುಪಿ-ಮಣಿಪಾಲ ಹೆದ್ದಾರಿಯಲ್ಲಿ ಸಾಗುವವರಿಗೆ ಸಂಚಾರ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ ಒಳರಸ್ತೆಯನ್ನು ಬಳಸಿಕೊಂಡರೆ ಉತ್ತಮ. ಮಂಗಳೂರು-ಮೂಲ್ಕಿ-ಪಡುಬಿದ್ರಿ- ಕಾಪು ಕಡೆಯಿಂದ ರಾ.ಹೆ. 66ರಲ್ಲಿ ಬರುವವರು ಮಣಿಪಾಲಕ್ಕೆ ತೆರಳಲು ಉಡುಪಿ ನಗರಕ್ಕೆ ಬಾರದೆ ಉದ್ಯಾವರದಲ್ಲಿ ಬಲಬದಿಗೆ ಇರುವ ಒಳರಸ್ತೆ ಸಂಪರ್ಕಿಸಿ ಕೊರಂಗ್ರಪಾಡಿ-ಅಲೆವೂರು ರಸ್ತೆ ಮೂಲಕ ಮಣಿಪಾಲಕ್ಕೆ ಹೋಗಬಹುದು. ಅದೇ ರೀತಿ ಮರಳಿ. ಹಾಗೆಯೇ ಕುಂದಾಪುರ, ಬ್ರಹ್ಮಾವರ, ಬೈಂದೂರು ಕಡೆಯಿಂದ ಮಣಿಪಾಲಕ್ಕೆ ಬರುವವರು ಅಂಬಾಗಿಲು ಜಂಕ್ಷನ್‌ನಲ್ಲಿ ಎಡಕ್ಕೆ ಅಂಬಾಗಿಲು-ಕಲ್ಸಂಕ ರಸ್ತೆಯಲ್ಲಿ ಬಂದು, ಮತ್ತೆ ಎಡಕ್ಕೆ ತಿರುಗಿ ಪೆರಂಪಳ್ಳಿ ರಸ್ತೆಯ ಮೂಲಕ ಮಣಿಪಾಲ ಸಂಪರ್ಕಿಸಬಹುದು. ಹಿಂದೆ ಹೋಗುವವರು ಸಹ ಅದೇ ಮಾರ್ಗ ಬಳಸಬೇಕು. ಮಣಿಪಾಲ-ಉಡುಪಿ ರಸ್ತೆಯನ್ನು ಉಪಯೋಗಿಸಲು ಮುಂದಾದರೆ ವಾಹನ ದಟ್ಟಣೆಯಲ್ಲಿ ಸಿಲುಕಿ ಸಮಯ ವ್ಯರ್ಥವಾಗುವುದು ನಿಶ್ಚಿತ.

ಮಾರ್ಗ ಬದಲಾವಣೆ
ಸವಾರರು/ಚಾಲಕರು ಗಮನಿಸಿ

l ಕರಾವಳಿ ಜಂಕ್ಷನ್‌ನಿಂದ ಮಣಿಪಾಲ ಸಿಂಡಿಕೇಟ್‌ ವೃತ್ತದ ವರೆಗಿನ ಮಾರ್ಗದಲ್ಲಿ ಯಾವುದೇ ವಾಹನವನ್ನು ನಿಲುಗಡೆ ಮಾಡಲು ಅವಕಾಶ ಇರುವುದಿಲ್ಲ.

l ನ. 26ರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 6.30ರ ವರೆಗೆ ಉಡುಪಿ ಸಿಟಿ ಬಸ್‌ ನಿಲ್ದಾಣ ದಿಂದ ಇಂದ್ರಾಳಿ ಜಂಕ್ಷನ್‌ವರೆಗೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ.

l ವಾಹನಗಳು ಬದಲಿ ರಸ್ತೆಯಾಗಿ ಕರಾವಳಿ ಜಂಕ್ಷನ್‌ ಆಗಿ ಮುಂದಕ್ಕೆ ಬಂದು ಬನ್ನಂಜೆ ವೃತ್ತದ ಮುಖಾಂತರ ಬಲಕ್ಕೆ ತಿರುಗಿ ನಗರಕ್ಕೆ ಹೋಗಬಹುದು.

ವಾಹನ ನಿಲುಗಡೆ- ನಿರ್ದಿಷ್ಟ ಸ್ಥಳಗಳು
1    ಎಂಜೆಸಿ ಮಣಿಪಾಲ:  ಮಂಗಳೂರು ಕಡೆಯಿಂದ ಬರುವ ಬಸ್ಸುಗಳು ಮಾತ್ರ.

2    ಮುದ್ದಣ್ಣ ಎಸ್ಟೇಟ್‌ ಬೈಲೂರು :  ಕಾರ್ಕಳ ಕಡೆಯಿಂದ ಬರುವ  ಬಸ್ಸುಗಳಿಗೆ ಮಾತ್ರ.

3    ಬೀಡಿನಗುಡ್ಡೆ ಮೈದಾನ: ಕುಂದಾಪುರ ಕಡೆಯಿಂದ ಬರುವ ಬಸ್ಸುಗಳಿಗೆ ಮಾತ್ರ.

4    ಶ್ರೀಕೃಷ್ಣ ಮಠದ ರಾಜಾಂಗಣ: ಲಘು ವಾಹನ  ಮತ್ತು ಸ್ವಾಮಿಗಳ ವಾಹನಕ್ಕೆ ಮಾತ್ರ.

5    ಕ್ರಿಶ್ಚಿಯನ್‌ ಹೈಸ್ಕೂಲ್ ಮೈದಾನ: ದ್ವಿಚಕ್ರ ವಾಹನ ಮಾತ್ರ

6    ಕ್ರಿಶ್ಚಿಯನ್‌ ಪಿಯು ಕಾಲೇಜು ಮೈದಾನ: ಲಘು ವಾಹನ ಮಾತ್ರ

7    ಅತೀಫ್ ಎಸ್ಟೇಟ್‌ ಕಲ್ಸಂಕ : ಲಘು ಮತ್ತು ದ್ವಿಚಕ್ರ ವಾಹನಗಳಿಗೆ.

8    ಮುಕುಂದಕೃಪಾ ಶಾಲೆ ಮೈದಾನ: ಲಘು ಮತ್ತು ದ್ವಿಚಕ್ರವಾಹನಗಳಿಗೆ.

9    ಬನ್ನಂಜೆ ನಾಗಬನದ ಹತ್ತಿರದ ಮೈದಾನ: ಲಘು ಮತ್ತು ದ್ವಿಚಕ್ರ ವಾಹನ ಮಾತ್ರ

ಧರ್ಮಸಂಸದ್‌: ವಾಹನ ನಿಲುಗಡೆ ಸೌಲಭ್ಯ
ಉಡುಪಿ: ಇಂದು (ನ. 24) ಮತ್ತು ನಾಳೆ (ನ. 25) ಉಡುಪಿಯ ರೋಯಲ್‌ ಗಾರ್ಡನ್‌ನಲ್ಲಿ ಧರ್ಮಸಂಸದ್‌ ಸಮಾವೇಶ ನಡೆಯಲಿದ್ದು, ಈ ಎರಡೂ ದಿನ ಇಲ್ಲಿಗೆ ಸಾಧು, ಸಂತರಿಗೆ ಮಾತ್ರ ಪ್ರವೇಶ, ಸಾರ್ವಜನಿಕರಿಗೆ ಪ್ರವೇಶವಿಲ್ಲ. ಪಕ್ಕದಲ್ಲೇ ಇರುವ ವಸ್ತುಪ್ರದರ್ಶನ ಮಳಿಗೆಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಇಲ್ಲಿಗೆ ಬರುವವರು ವಾಹನಗಳನ್ನು ಸ್ವಲ್ಪ ದೂರವೇ ನಿಲುಗಡೆ ಮಾಡಿ ಬರಬೇಕಿದೆ. ದ್ವಿಚಕ್ರ, ಚತುಷcಕ್ರ ವಾಹನಗಳಿಗೆ ಕಲ್ಸಂಕ ರೋಯಲ್‌ ಗಾರ್ಡನ್‌ ಪಕ್ಕ, ಅಂಬಾಗಿಲು ಕಡೆ ಸಾಗುವ ರಸ್ತೆಯ ಅಂಚಿನ ಸುಮಾರು 5 ಎಕರೆ ವಿಸ್ತೀರ್ಣದ ಆಸೀಫ್ ಕಾಂಪೌಂಡ್‌ನ‌ಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. 

ಕೆಲವು ವಾಹನಗಳಿಗೆ ರಾಜಾಂಗಣದ ಪಾರ್ಕಿಂಗ್‌ ಪ್ರದೇಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿಐಪಿ ವಾಹನಗಳಿಗೆ ಮಾತ್ರ ಸಂತ ಸಮಾವೇಶ ನಡೆಯುವ ಸ್ಥಳದ ಮುಂಭಾಗ ಪಾರ್ಕಿಂಗ್‌ ಅವಕಾಶ. ಬಸ್ಸಿನಲ್ಲಿ ಬರುವವರು ಕಲ್ಸಂಕ ರೋಯಲ್‌ ಗಾರ್ಡನ್‌ ನಿಲ್ದಾಣದಲ್ಲಿ ಇಳಿಯಬಹುದು. ಉಡುಪಿ ಸಿಟಿ/ಸರ್ವೀಸ್‌ ಬಸ್‌ ನಿಲ್ದಾಣದಿಂದ ನಡೆದು ಬರಲು 10 ನಿಮಿಷ ಸಾಕು. ಕಲ್ಸಂಕ ಪ್ರದೇಶದಲ್ಲಿ ಸಂಚಾರಕ್ಕೆ ತೊಡಕುಂಟಾಗುವಂತೆ ವಾಹನ ನಿಲ್ಲಿಸಬಾರದು. ನಿಲ್ಲಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಇಲಾಖೆ ಹೇಳಿದೆ.

ರಸ್ತೆ ಬದಿ ವಾಹನ ನಿಲ್ಲಿಸದಂತೆ ಎಸ್‌ಪಿ ಸೂಚನೆ
ಉಡುಪಿ: ಉಡುಪಿ- ಮಣಿಪಾಲ ಹೆದ್ದಾರಿಯ ಕಲ್ಸಂಕ ವ್ಯಾಪ್ತಿಯಲ್ಲಿ ಬರುವ ರಸ್ತೆಯ ಇಕ್ಕೆಲಗಳಲ್ಲಿ ನ. 24, 25, 26ರಂದು ಯಾರು ಕೂಡ ವಾಹನ ಪಾರ್ಕ್‌ ಮಾಡಬಾರದು. ಸಂಚಾರ ಹಾಗೂ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್‌  ತಿಳಿಸಿದ್ದಾರೆ.ಒಂದು ವೇಳೆ ರಸ್ತೆ ಬದಿ ಪಾರ್ಕ್‌ ಮಾಡಿದಲ್ಲಿ  ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದವರು ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

1-jpc

One Nation, One Election: ಸಂಸದರಿಗೆ ಜೆಪಿಸಿ ಸಭೆಯಲ್ಲಿ 52 ಕೆ.ಜಿ. ತೂಕದ ಸೂಟ್‌ಕೇಸ್‌!

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನKaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನKaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Padubidri ಪಾದೆಬೆಟ್ಟು: ನೇಣು ಬಿಗಿದು ಯುವಕ ಆತ್ಮಹತ್ಯೆ

Padubidri ಪಾದೆಬೆಟ್ಟು: ನೇಣು ಬಿಗಿದು ಯುವಕ ಆತ್ಮಹತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

1-jpc

One Nation, One Election: ಸಂಸದರಿಗೆ ಜೆಪಿಸಿ ಸಭೆಯಲ್ಲಿ 52 ಕೆ.ಜಿ. ತೂಕದ ಸೂಟ್‌ಕೇಸ್‌!

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.