ಹೂಗಳ ರಾಶಿಯಿಂದ ಕಂಗೊಳಿಸಿದ ದರ್ಬಾರ್‌ ವೇದಿಕೆ


Team Udayavani, Jan 18, 2020, 12:32 AM IST

17012020ASTRO10

ಉಡುಪಿ: ಬಣ್ಣ ಬಣ್ಣದ ಸಾವಿರಾರು ಹೂವು ಹಾಗೂ ಹಸಿರು ಸಿರಿಯ ಎಲೆಗಳನ್ನು ಸೇರಿಸಿ ರಾಜಾಂಗಣದಲ್ಲಿ ನಿರ್ಮಿಸಲಾದ ಅದಮಾರು ಮಠದ ದರ್ಬಾರ್‌ ವೇದಿಕೆ ಸಂಪೂರ್ಣವಾಗಿ ದೇಸೀ ಕಲಾತ್ಮಕತೆಯಿಂದ ಕೂಡಿದ್ದು ಕಣ್ಮನ ಸೆಳೆಯುತ್ತಿದೆ. ವೇದಿಕೆಯಲ್ಲಿ ಎಲ್ಲಿಯೂ ಪ್ಲಾಸ್ಟಿಕ್‌ ವಸ್ತುಗಳ ಬಳಕೆಗೆ ಅವಕಾಶ ನೀಡಿಲ್ಲ.

ಜಾಜಿ, ಕಾಡು ಮಲ್ಲಿಗೆ, ಗೊಂಡೆ, ಲಿಲ್ಲಿ, ಡೇಲಿಯಾ, ಗುಲಾಬಿ, ಕೆಂಪು ಹಾಗೂ ಹಳದಿ ಕಣಗಿಲೆ, ಸೇವಂತಿಗೆ, ಸಿಂಗಾರ, ಗುಲಾಬಿ ಜತೆಗೆ ಸೇರಿಸಿ ಕೂಡಿದ ಹಸಿರು ಎಲೆಗಳಿಂದ ಕಂಗೊಳಿಸುತ್ತಿರುವ ವೇದಿಕೆ ಆಕರ್ಷಕವಾಗಿದೆ. ತೆಂಗಿನ ಗರಿ, ಅಡಿಕೆ, ಕೆಂದಾಳೆ ಸೀಯಾಳದ ಸಾಲು ವೇದಿಕೆ ಅಂದಕ್ಕೆ ಸಾಂಪ್ರದಾಯಿಕ ಮೆರುಗು ನೀಡಿದೆ.

ಸೆಲ್ಫಿ ಕ್ರೇಜ್‌
ನೈಸರ್ಗಿಕ ಹೂವಿನ ಪರಿಮಳ ಮಠದ ಪರಿಸರದಲ್ಲಿ ಜನರನ್ನು ಆಕರ್ಷಿಸುತ್ತಿದೆ. ಮಠಕ್ಕೆ ಬಂದ ಭಕ್ತರು ದರ್ಬಾರ್‌ ವೇದಿಕೆಯ ಆಲಂಕಾರವನ್ನು ತಮ್ಮ ಮೊಬೈಲ್‌ಗ‌ಳಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬಂದಿತ್ತು. ರಾಜಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ಕೃಷ್ಣ ಪ್ರಸಾದ ಸ್ವೀಕರಿಸುವ ಭಕ್ತರು ದರ್ಬಾರ್‌ ವೇದಿಕೆ ಅಲಂಕಾರವನ್ನು ನೋಡಿ ಆನಂದಿಸುತ್ತಿರುವ ದೃಶ್ಯ ಕಂಡು ಬಂತು.

ಅನುಭವಿ ತಂಡ
ವೇದಿಕೆಯನ್ನು ನಿರ್ಮಾಣಕ್ಕೆ ಪಡುಬಿದ್ರಿಯ ರಾಘವೇಂದ್ರ ಬೈಲ ನೇತೃತ್ವದ 50 ಜನರ ತಂಡ ಜ. 17ರ ಬೆಳಗ್ಗೆಯಿಂದ ಜ. 18ರ ಬೆಳಗ್ಗೆವರೆಗೆ ಅಲಂಕಾರವನ್ನು ನಡೆಸಲಿದೆ. ಈ ತಂಡ ಪಲಿಮಾರು ಪರ್ಯಾಯ ಸೇರಿದಂತೆ ಒಟ್ಟು 10 ಪರ್ಯಾಯದ ದರ್ಬಾರ್‌ ವೇದಿಕೆ ನಿರ್ಮಿಸಿದೆ.

ಸಾಂಪ್ರದಾಯಿಕ ಶೈಲಿ
ದರ್ಬಾರ್‌ ವೇದಿಕೆ ಹಾಗೂ ರಾಜಾಂಗಣ ಆವರಣವನ್ನು ಬುಡಕಟ್ಟು ಜನರ ಸಾಂಪ್ರಾದಾಯಿಕ ಶೈಲಿ ನಿರ್ಮಿಸಲಾಗಿದೆ. ಕಾರ್ಕಳ ಮಾಳದ ಶ್ರೀನಿವಾಸ ಮತ್ತವರ ತಂಡ ಇದರ ನೇತೃತ್ವ ವಹಿಸಿಕೊಂಡಿದೆ. ಸುಮಾರು 250 ಹೆಚ್ಚು ತೆಂಗಿನ ಗರಿಗಳಿಂದ ಹಣೆದ ಮಡಿಲು, ಸಿರಿ ಗರಿ ಬಳಿಸಿ ವಿವಿಧ ಕಲಾಕೃತಿ ರಚಿಸಿ ರಾಜಾಂಗಣವನ್ನು ಸಿಂಗರಿಸಿದ್ದಾರೆ.

3.5 ಲ.ರೂ. ಹೂವುಗಳು
ದರ್ಬಾರ್‌ ವೇದಿಕೆಯ ನಿರ್ಮಾಣ ಕೂಡ ಸಾಂಪ್ರದಾಯಿಕ ಶೈಲಿಯಲ್ಲಿ ರೂಪುಗೊಂಡಿದೆ. ತುಮಕೂರು, ಶಿವಮೊಗ್ಗ, ಬೆಂಗಳೂರಿನಿಂದ ತರಿಸಿದ ಸುಮಾರು 3.5 ಲ.ರೂ. ಹೂವು ಹಾಗೂ ಸ್ಥಳೀಯವಾಗಿ 250ಕ್ಕೂ ಅಧಿಕ ಸೀಯಾಳ, 50,000 ಅಡಿಕೆಯಿಂದ ಅಲಂಕರಿಸಲಾಗಿದೆ. ಇವುಗಳನ್ನು ಅದಮಾರು ಮಠ, ಕೃಷ್ಣ ಮಠ ಹಾಗೂ ರಾಜಾಂಗಣದ ದರ್ಬಾರ್‌ ವೇದಿಕೆಯ ಸಿಂಗಾರಕ್ಕೆ ಬಳಸಲಾಗಿದೆ.

ಟಾಪ್ ನ್ಯೂಸ್

Israel, Hamas agree to ceasefire?

Ceasefire: ಇಸ್ರೇಲ್‌, ಹಮಾಸ್‌ ಕದನ ವಿರಾಮಕ್ಕೆ ಒಪ್ಪಿಗೆ?

MC-Sudhakar

Objection: ಕುಲಪತಿ ನೇಮಕದಲ್ಲಿ ಬದಲಾವಣೆ: ಕೇಂದ್ರಕ್ಕೆ ಉನ್ನತ ಶಿಕ್ಷಣ ಸಚಿವ ಪತ್ರ

Bangladesh crisis: Tax exemption for textile sector?

Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?

Los Angeles wildfires: Fears for hosting the Olympics?

Los Angeles wildfires: ಒಲಿಂಪಿಕ್ಸ್‌ ಆಯೋಜನೆಗೆ ಭೀತಿ?

Congress Vs AAP: Kejriwal said Delhi will become Paris, but did nothing: Rahul

CongressVsAAP: ದಿಲ್ಲಿ ಪ್ಯಾರಿಸ್‌ ಆಗುತ್ತದೆ ಎಂದಿದ್ದ ಕೇಜ್ರಿ, ಏನೂ ಮಾಡಲಿಲ್ಲ: ರಾಹುಲ್‌

Bumrah named ICC Cricketer of the Month; Annabelle wins women’s award

ICC: ಬುಮ್ರಾ “ಐಸಿಸಿ ತಿಂಗಳ ಕ್ರಿಕೆಟಿಗ’; ಅನ್ನಾಬೆಲ್‌ಗೆ ವನಿತಾ ವಿಭಾಗದ ಪ್ರಶಸ್ತಿ

School Threat: Student has ties to terrorist-backed organization!

School Threat: ಉಗ್ರನ ಬೆಂಬಲಿಸಿದ್ದ ಸಂಸ್ಥೆ ಜತೆ ವಿದ್ಯಾರ್ಥಿಗೆ ನಂಟು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಡುಬಿದ್ರಿ ಬ್ರಹ್ಮಸ್ಥಾನದ ವರ್ಣಚಿತ್ರ: ಕೃಪೆ ಕಲಾವಿದ ದಾಮೋದರ ರಾಯರು

ಇಂದಿನಿಂದ ಪಡುಬಿದ್ರಿ ಢಕ್ಕೆಬಲಿ ಸೇವೆಗಳ ಆರಂಭ

Udupi ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Udupi: ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

Udupi: ಬೋಟ್‌ ಮುಳುಗಡೆ: 70 ಲ.ರೂ.ನಷ್ಟ

Udupi: ಬೋಟ್‌ ಮುಳುಗಡೆ: 70 ಲ.ರೂ.ನಷ್ಟ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Israel, Hamas agree to ceasefire?

Ceasefire: ಇಸ್ರೇಲ್‌, ಹಮಾಸ್‌ ಕದನ ವಿರಾಮಕ್ಕೆ ಒಪ್ಪಿಗೆ?

MC-Sudhakar

Objection: ಕುಲಪತಿ ನೇಮಕದಲ್ಲಿ ಬದಲಾವಣೆ: ಕೇಂದ್ರಕ್ಕೆ ಉನ್ನತ ಶಿಕ್ಷಣ ಸಚಿವ ಪತ್ರ

Bangladesh crisis: Tax exemption for textile sector?

Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?

Dina Bhavishya

Daily Horoscope;ಹಿತಶತ್ರುಗಳ ಹುನ್ನಾರದ ಕುರಿತು ಎಚ್ಚರ,ರಾತ್ರಿ ಪ್ರಯಾಣದಿಂದ ದೂರವಿರಿ…

Los Angeles wildfires: Fears for hosting the Olympics?

Los Angeles wildfires: ಒಲಿಂಪಿಕ್ಸ್‌ ಆಯೋಜನೆಗೆ ಭೀತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.