ಉಡುಪಿಗೆ ಬರಲಿದೆ ಪಾಸ್‌ಪೋರ್ಟ್ ಕಚೇರಿ
Team Udayavani, Jun 22, 2017, 11:42 AM IST
ಉಡುಪಿ: ದೇಶದ 189 ಕಡೆ ಹೆಚ್ಚುವರಿಯಾಗಿ ಅಂಚೆ ಇಲಾಖೆ ಸಹಯೋಗದಲ್ಲಿ ಆರಂಭಿಸುವ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಉಡುಪಿಯೂ ಒಂದಾಗಿದೆ.
ಇದುವರೆಗೆ ಮಂಗಳೂರು ಪಾಸ್‌ಪೋರ್ಟ್ ಕಚೇರಿ ವ್ಯಾಪ್ತಿಯಲ್ಲಿ ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉ.ಕ., ದ.ಕ. ಜಿಲ್ಲೆಗಳಿದ್ದು ಇವರು ಮಂಗಳೂರು ಕಚೇರಿಗೆ ಪಾಸ್‌ಪೋರ್ಟ್ ಕೆಲಸಕ್ಕೆ ಹೋಗಬೇಕಿತ್ತು. ಇನ್ನು ಮುಂದೆ ಉಡುಪಿ ಜಿಲ್ಲೆಯವರಿಗೆ ಉಡುಪಿ ಯಲ್ಲಿಯೇ ಪಾಸ್‌ಪೋರ್ಟ್ ಕೆಲಸಗಳು ಆಗಲಿವೆ. ಕೆಲವು ವರ್ಷಗಳ ಹಿಂದೆ ಉಡುಪಿ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್ ದಾಖಲೆ ಗಳನ್ನು ಸ್ವೀಕರಿಸಿ ಬೆಂಗಳೂರು ಪಾಸ್ ಪೋರ್ಟ್ ಕಚೇರಿಗೆ ಕಳುಹಿಸುವ ಸೌಲಭ್ಯ ವಿತ್ತು. ಆದರೆ ಬಯೋಮೆಟ್ರಿಕ್ ವ್ಯವಸ್ಥೆ ಬಂದ ಬಳಿಕ ಇದು ನಿಂತು ಹೋಗಿ ಮತ್ತೆ ಮಂಗಳೂರಿನತ್ತ ಪ್ರಯಾಣ ಬೆಳೆಸಬೇಕಾ ಯಿತು. ಮಂಗಳೂರು ಕಚೇರಿಯಲ್ಲಿ ವಿವಿಧ ಜಿಲ್ಲೆಗಳಿಂದ ಜನರು ಬರುತ್ತಿರುವುದರಿಂದ ಜನರಿಗೆ ಕಾಯಬೇಕಾದ ತೊಂದರೆ ಆಗುತ್ತಿದೆ. ಈಗ ಪೂರ್ಣಪ್ರಮಾಣದ ಪಾಸ್ ಪೋರ್ಟ್ ಸೌಲಭ್ಯದ ಕಚೇರಿಯೇ ಉಡುಪಿಗೆ ಬರುತ್ತಿರುವುದರಿಂದ ಹಲವು ತೊಂದರೆ ಗಳು ನಿವಾರಣೆಯಾಗಲಿವೆ.
ಉಡುಪಿ ಅಂಚೆ ವಿಭಾಗಕ್ಕೆ ಪಾಸ್‌ಪೋರ್ಟ್ ಕಚೇರಿ ತೆರೆಯುವ ಕುರಿತು ಇದು ವರೆಗೆ ದಿಲ್ಲಿಯಿಂದ ಯಾವುದೇ ಮಾಹಿತಿ ಬಂದಿಲ್ಲ.
ಅಂಚೆ ಇಲಾಖೆ ಸಹಯೋಗದಲ್ಲಿ ಪಾಸ್ ಪೋರ್ಟ್ ಕಚೇರಿ ತೆರೆಯುವ ಮೊದಲ ಹಂತ ದಲ್ಲಿ ಇತ್ತೀಚೆಗೆ ಮೈಸೂರಿನಲ್ಲಿ ಆರಂಭಿಸ ಲಾಗಿದೆ. ಎರಡನೆಯ ಹಂತದಲ್ಲಿ ಹಾಸನ, ದಾವಣಗೆರೆ, ಬೆಳಗಾವಿ, ಕಲಬುರಗಿ ಯಲ್ಲಿ ಆರಂಭಿಸ ಲಾಗುತ್ತಿದೆ. ಮೂರನೆಯ ಹಂತದಲ್ಲಿ ಉಡುಪಿ ಯಲ್ಲಿ ಆರಂಭಿಸ ಲಾಗುವುದು. ಪಾಸ್‌ಪೋರ್ಟ್ ಕಚೇರಿ ತೆರೆಯಲು 1,000 ಚದರಡಿ ಕಚೇರಿ ಯನ್ನು ಪಾಸ್‌ಪೋರ್ಟ್ ಸೇವಾ ವಿಭಾಗ ದವರು ಕೇಳಿದ್ದಾರೆ. ಜಾಗದ ಲಭ್ಯತೆ ಬೇಕು. ಸುಮಾರು ಮೂರು ತಿಂಗಳಲ್ಲಿ ಉಡುಪಿ ಯಲ್ಲಿ ಆರಂಭಿಸ ಲಾಗುವುದು ಎಂದು ಕರ್ನಾಟಕದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೋ “ಉದಯವಾಣಿ’ಗೆ ತಿಳಿಸಿದ್ದಾರೆ.
ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಉಡುಪಿ ಮತ್ತು ಕುಂದಾಪುರ ತಾಲೂಕು ಮಾತ್ರ ಇದೆ. ಕಾರ್ಕಳ ತಾಲೂಕು
ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿದೆ. ಹೀಗಿರು ವಾಗ ಕಾರ್ಕಳ ತಾಲೂಕು ಉಡುಪಿಯಲ್ಲಿ ತೆರೆ ಯುವ ಪಾಸ್‌ಪೋರ್ಟ್ ಕಚೇರಿ ಸೌಲಭ್ಯಕ್ಕೆ ಬರುತ್ತದೋ ಇಲ್ಲವೋ ನೋಡ ಬೇಕು.
ಸ್ಥಳಾವಕಾಶ ನೋಡಿಕೊಂಡು ಉಡುಪಿ ಅಥವಾ ಮಣಿಪಾಲದಲ್ಲಿ ಕಚೇರಿಯನ್ನು ತೆರೆಯುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.