ಬಹುಮತವಿಲ್ಲದಿದ್ದಾಗ ಸರ್ವಪಕ್ಷಗಳ ಸರಕಾರ: ಪೇಜಾವರ ಸ್ವಾಮೀಜಿ ಸಲಹೆ
Team Udayavani, Jul 6, 2019, 9:49 AM IST
ಉಡುಪಿ: ಬಹುಮತವಿಲ್ಲದಿದ್ದಾಗ ಸರ್ವಪಕ್ಷಗಳ ಸರಕಾರ ರಚಿಸುವುದು ಉತ್ತಮ ಮಾರ್ಗ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಬಿಜೆಪಿಯ ಆಪರೇಶನ್ ಕಮಲದ ಕುರಿತು ಪ್ರಶ್ನಿಸಿದಾಗ, ಆಪರೇಶನ್ ಕಮಲ ಸರಿಯಲ್ಲ. ಬಹುಮತವಿಲ್ಲದೆ ಡೋಲಾಯಮಾನ ಸ್ಥಿತಿ ಇದ್ದಾಗ ಅಥವಾ ಗೊಂದಲ ಏರ್ಪಟ್ಟಾಗ ರಾಷ್ಟ್ರಪತಿಗಳ ಆಡಳಿತ ಹೇರಿಕೆ ಅಥವಾ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಚುನಾವಣೆ ನಡೆಸಬೇಕಾಗುತ್ತದೆ. ಇದು ವೆಚ್ಚ ದಾಯಕ. ರಾಜ್ಯದ ಹಿತದೃಷ್ಟಿಯಿಂದ ಸರ್ವ ಪಕ್ಷಗಳ ಸರಕಾರ ಸಮಯೋಚಿತ ಎಂದರು.
ನಾನು ಈ ಹಿಂದೆಯೇ ಈ ಸಲಹೆ ಕೊಟ್ಟಾಗ ಕೆಲವರು ಗೇಲಿ ಮಾಡಿದ್ದರು. 2ನೇ ಮಹಾಯುದ್ಧದ ವೇಳೆ ಇಂಗ್ಲೆಂಡ್‌ನಲ್ಲಿ ಚರ್ಚಿಲ್ ಸರ್ವಪಕ್ಷಗಳ ಸರಕಾರ ರಚಿಸಿದ್ದರು. ಯುದ್ಧ ಮುಗಿದ ಬಳಿಕ ಚುನಾವಣೆ ನಡೆಯಿತು. ಆಗ ಚರ್ಚಿಲ್ ಸೋತರು. ಮಹಾಯುದ್ಧದ ವೇಳೆ ಮಾತ್ರ ಸರ್ವಪಕ್ಷಗಳ ಸರಕಾರವಿತ್ತು ಎಂಬುದನ್ನು ನೆನಪಿಸಿಕೊಂಡರು.
ಲಿಂಗಪೂಜಕರು ಹಿಂದುಗಳೇ
ಲಿಂಗಾಯತ ಧರ್ಮ ಹಿಂದೂ ಧರ್ಮದ ಅಂಗವಾಗಿದ್ದರೆ ನೀವು ಲಿಂಗಾಯತ ಸಂಪ್ರ ದಾಯವನ್ನು ಆಚರಿಸುತ್ತೀರಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದ್ವೆ„ತ, ದ್ವೆ„ತ ಸಂಪ್ರ ದಾಯಗಳು ಹಿಂದೂ ಧರ್ಮದ ಅಂಗವಾ ಗಿದ್ದರೂ ಒಬ್ಬರು ಇನ್ನೊಂದನ್ನು ಆಚರಿಸ ಬೇಕೆಂದಿಲ್ಲ. ತಮ್ಮ ಸಂಪ್ರದಾಯಗಳನ್ನು ಆಚರಿಸಿಕೊಂಡು ಸ್ನೇಹ ಸೌಹಾರ್ದದಿಂದ ಸಮಾನ ಅಂಶಗಳಲ್ಲಿ ಸಹಕರಿಸಿಕೊಂಡು ಹೋಗಬೇಕು. ಇಷ್ಟಲಿಂಗ ಪೂಜೆ, ಶಿವಾರಾಧನೆಯನ್ನು ಒಪ್ಪಿದ ಮೇಲೆ ಲಿಂಗಾಯತ ಧರ್ಮವು ಹಿಂದೂ ಧರ್ಮದಿಂದ ಬೇರೆಯಾಗುವುದು ಹೇಗೆ? ಶಿವನ ಸ್ವರೂಪದ ಬಗ್ಗೆ ಶೈವರಲ್ಲಿ ಭಿನ್ನಾಭಿ ಪ್ರಾಯವಿರಬಹುದು. ಪರಬ್ರಹ್ಮನನ್ನು ದ್ವೆ„ತಿ ಗಳು, ವಿಶಿಷ್ಟಾದ್ವೆ„ತಿಗಳು ಸಗುಣ, ಸಾಕಾರ ಎಂದೂ, ಅದ್ವೆ„ತಿಗಳು ನಿರ್ಗುಣ, ನಿರಾಕಾರ ಎಂದೂ ಹೇಳುತ್ತಾರೆ. ಆದರೂ ತ್ರಿಮತಸ್ಥರು ಹಿಂದೂಗಳಲ್ಲವೆ? ಶಿವನ ಸ್ವರೂಪದಲ್ಲಿ ಭಿನ್ನ ಅಭಿಪ್ರಾಯಗಳಿದ್ದರೂ ಎಲ್ಲ ಶೈವರು ಹಿಂದೂಗಳೇ ಆಗಿದ್ದಾರೆ ಎಂದರು.
ವಿವಾದವನ್ನು ರಾಜಕಾರಣಿಗಳು ಹುಟ್ಟು ಹಾಕಿದ್ದಲ್ಲವೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಅನೇಕ ಮಠಾಧಿಪತಿಗಳು ಪರ ವಿರೋಧ ನಿರ್ಣಯವನ್ನು ತಾಳಿದ್ದಾರಲ್ಲ ಎಂದರು.
ಶೀರೂರು ಮಠ: ಉತ್ತರಾಧಿಕಾರಿ ಪ್ರಶ್ನೆ
ಶೀರೂರು ಮಠದ ಉತ್ತರಾಧಿಕಾರಿ ನೇಮಕದ ಕುರಿತು ಪ್ರಶ್ನಿಸಿದಾಗ ಮಠಕ್ಕೆ ದೊಡ್ಡ ಮೊತ್ತದ ಸಾಲವಿದೆ. ಇದನ್ನು ಸರಿಪಡಿಸಿ ಉತ್ತರಾಧಿಕಾರಿ ನೇಮಕ ನಡೆಸಬೇಕಾಗುತ್ತದೆ. ಇದನ್ನು ಸರಿಪಡಿಸದೆ ವಟುಗಳೂ ದೊರಕುವುದಿಲ್ಲ ಎಂದರು. ವೃಂದಾವನವನ್ನು ನಿರ್ಮಿಸಿಲ್ಲವಂತೆ ಎಂದಾಗ ಆರಾಧನೆ ಸಮಯದ ಬಳಿಕ ನಿರ್ಮಿಸುತ್ತಾರೆ ಎಂದು ತಿಳಿಸಿದರು.
ವೀರಶೈವ-ಲಿಂಗಾಯತ: ಸಂವಾದಕ್ಕೆ ಸಿದ್ಧ
ವೀರಶೈವ ಲಿಂಗಾಯತ ಧರ್ಮವು ಹಿಂದೂ ಧರ್ಮದಿಂದ ಪ್ರತ್ಯೇಕವಲ್ಲವೆಂದು ನಾನು ಹೇಳಿರುವುದಕ್ಕೆ ವಿವಿಧ ಪ್ರತಿಕ್ರಿಯೆಗಳು ಬಂದವು. ಹಿಂದೂ ಧರ್ಮ ದುರ್ಬಲವಾಗ ಬಾರದು. ವೀರಶೈವರು, ಲಿಂಗಾಯತರು ಒಟ್ಟಾಗಿದ್ದರೆ ಲಿಂಗಾಯತ ಧರ್ಮವೂ ಬಲಿಷ್ಠವಾಗಿರುತ್ತದೆ. ನಾವೆಲ್ಲ ಒಟ್ಟಾಗಿರಬೇಕು ಎಂಬ ಉದ್ದೇಶದಿಂದ ಹೇಳಿಕೆ ನೀಡಿದ್ದೇನೆ. ಇದಕ್ಕಾಗಿ ಸಂವಾದಕ್ಕೂ ಸಿದ್ಧ ಎಂದು ಶ್ರೀಗಳು ತಿಳಿಸಿದರು. ಆದರೆ ಸಂವಾದವು ಶಾಂತ ವಾತಾವರಣದಲ್ಲಿ ಸೌಹಾರ್ದ ದಿಂದ ನಡೆಯಬೇಕು. ಬೆಂಗಳೂರಿನಲ್ಲಿ ಜು. 28ರೊಳಗೆ ಇಬ್ಬರಿಗೂ ಅನುಕೂಲವಾದ ದಿನ ಅಥವಾ ಅನಂತರ ಮೈಸೂರಿನಲ್ಲಿ ಚಾತುರ್ಮಾಸ್ಯವ್ರತ ಕೈಗೊಳ್ಳುವುದರಿಂದ ಮೈಸೂರಿನಲ್ಲಿ ಸಂವಾದದ ಏರ್ಪಾಡು ಮಾಡಬಹುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.