ಮಂದಿರ ನಿರ್ಮಾಣಕ್ಕೆ ಕೇಂದ್ರ ಅಧ್ಯಾದೇಶ
Team Udayavani, Nov 26, 2018, 8:57 AM IST
ಮಂಗಳೂರು: ರಾಮ ಮಂದಿರ ನಿರ್ಮಾಣ ದೇಶದ ಸಮಗ್ರ ಹಿಂದೂಗಳ ಅಪೇಕ್ಷೆ ಮತ್ತು ಎಲ್ಲ ಸಂತರ
ಏಕಾಭಿಪ್ರಾಯ. ಕೇಂದ್ರ ಸರಕಾರವು ಅಧ್ಯಾದೇಶ ಅಥವಾ ಸಂಸತ್‌ನಲ್ಲಿ ಬಹುಮತ ಪಡೆದು ಇದಕ್ಕಾಗಿ ಕಾರ್ಯ
ಪ್ರವೃತ್ತವಾಗಬೇಕು ಎಂದು ಪೇಜಾವರ ಶ್ರೀಗಳು ಆಗ್ರಹಿಸಿದ್ದಾರೆ.
ವಿಹಿಂಪ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದ ಕೇಂದ್ರ ಮೈದಾನದಲ್ಲಿ ರವಿವಾರ ಆಯೋಜಿಸಿದ್ದ ಬೃಹತ್ ಜನಾಗ್ರಹ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ಕೂಡಲೇ ಹಿಂದೂಗಳ ಈ ಅಪೇಕ್ಷೆ ಈಡೇರಿಸಬೇಕು. ಸರಕಾರ ವಿಫಲವಾದರೆ ಬಿಜೆಪಿ ಸಂಸದರು ರಾಜೀನಾಮೆ ನೀಡಬೇಕು ಎಂದು ಕರೆ ನೀಡಿದರು.
ಮಂದಿರ ನಿರ್ಮಾಣ ವಿಚಾರವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಪಡಿಸಿದರೂ ಆಗಬಹುದು. ಆದರೆ ಶ್ರೀರಾಮ ಜನ್ಮಭೂಮಿಯಲ್ಲೇ ಮಂದಿರ ನಿರ್ಮಾಣ ಆಗಬೇಕು ಎಂಬುದು ನಮ್ಮೆಲ್ಲರ ಆಗ್ರಹ, ಇದರಲ್ಲಿ ರಾಜಿ ಇಲ್ಲ ಎಂದರು.
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಸದವಕಾಶ ಒದಗಿದೆ. ಮುಸ್ಲಿಮರೂ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ. ಮಂದಿರ ನಿರ್ಮಾಣದ ವಿರುದ್ಧ ಯಾವ ಪಕ್ಷದವರೂ ಆಕ್ಷೇಪಿಸಲಾರರು. ಹಾಗೆ ಮಾಡಿದರೆ ಚುನಾವಣೆಯಲ್ಲಿ ಹಾನಿಯಾಗಬಹುದು ಎಂಬ ವಿಚಾರ ಅವರಿಗೂ ತಿಳಿದಿದೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಸರಕಾರದ ಜವಾಬ್ದಾರಿ: ಸೋಲಂಕಿ
ದಿಕ್ಸೂಚಿ ಭಾಷಣ ಮಾಡಿದ ಬಜರಂಗದಳದ ರಾಷ್ಟ್ರೀಯ ಸಂಯೋಜಕ್ ಸೋಹನ್ ಸಿಂಗ್ ಸೋಲಂಕಿ, ಕಳೆದ ವರ್ಷ ಉಡುಪಿಯಲ್ಲಿ ಜರಗಿದ್ದ ಧರ್ಮ ಸಂಸದ್‌ನಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಂದೋಲನದ ನಿರ್ಣಯ ಮಾಡಲಾಗಿತ್ತು. ದೇಶದ 500 ಸಂಸದೀಯ ಕ್ಷೇತ್ರಗಳಲ್ಲೂ ಜನಾಗ್ರಹ ಸಭೆ ನಡೆಯಲಿದೆ. ಪೇಜಾವರ ಸ್ವಾಮೀಜಿ ಜತೆ ಸಂತರು ಸೇರಿ ಶ್ರೀರಾಮ ಮಂದಿರ ನಿರ್ಮಾಣವಾಗಲಿದೆ ಎಂದರು. ನ್ಯಾಯಾಲಯವು ಶ್ರೀರಾಮ ಮಂದಿರ ನಿರ್ಮಾಣ ವಿಚಾರ ಇತ್ಯರ್ಥ ಪಡಿಸಲು ಸಮಯವಿಲ್ಲ ಎನ್ನುವುದು ಸಮಂಜಸವಲ್ಲ ಎಂದರು.
ಆರೆಸ್ಸೆಸ್ ಮಂಗಳೂರು ವಿಭಾಗ ಸಹಕಾರ್ಯವಾಹ ನಾ. ಸೀತಾ ರಾಮ, ಶ್ರೀರಾಮ ಮಂದಿರ ಶೀಘ್ರ ನಿರ್ಮಾಣವಾಗಬೇಕು ಎಂದರು. ಗುರುಪುರ ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಆದಿಚುಂಚನಗಿರಿ ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ, ಕದ್ರಿ ಜೋಗಿಮಠದ ಶ್ರೀ ನಿರ್ಮಲನಾಥ ಸ್ವಾಮೀಜಿ, ಬಾಳೆಕೋಡಿ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ, ಕನ್ಯಾನ ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಶ್ರೀ ಸಾಯಿ ಮಠದ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ವಿಹಿಂಪ ಮುಖಂಡರಾದ ಕೃಷ್ಣಮೂರ್ತಿ, ಗೋಪಾಲ್ ಕುತ್ತಾರು, ಕೃಷ್ಣ ಪ್ರಸನ್ನ, ಶಿವಾನಂದ ಮೆಂಡನ್, ಸತೀಶ್, ಬಜರಂಗ ದಳ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ, ಪ್ರವೀಣ್ ಕುತ್ತಾರು, ಭುಜಂಗ ಕುಲಾಲ್, ಶ್ರೀಧರ್ ತೆಂಕಿಲ, ಮಾತೃಶಕ್ತಿ ಪ್ರಮುಖ್ ಪ್ರೇಮಲತಾ ಆಚಾರ್, ದುರ್ಗಾ ವಾಹಿನಿ ವಿಭಾಗ ಸಂಯೋಜಕಿ ವಿದ್ಯಾ ಮಲ್ಯ ಉಪಸ್ಥಿತರಿದ್ದರು. ಪ್ರೊ| ಎಂ.ಬಿ. ಪುರಾಣಿಕ್ ಪ್ರಸ್ತಾವನೆಗೈದರು. ಜಗದೀಶ ಶೇಣವ ಸ್ವಾಗತಿಸಿದರು. ಶರಣ್ ಪಂಪ್‌ವೆಲ್ ಮನವಿ ಪತ್ರ ವಾಚಿಸಿದರು. ಸಭೆಗೆ ಮುನ್ನ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬಸ್ ಅವಘಡದಲ್ಲಿ ಮೃತಪಟ್ಟವರು ಮತ್ತು ಅಂಬರೀಷ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜನಾಗ್ರಹ
ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಲು ಅಧಿವೇಶನದಲ್ಲಿ ವಿಷಯ ಪ್ರಸ್ತಾವಿಸಬೇಕು. ವಿಷಯ ಚರ್ಚೆಗೆ ಬಂದಾಗ ಬೆಂಬಲಿಸಿ ಸರ್ವಾನುಮತದಿಂದ ಶಾಸನ ರೂಪಿಸಲು ಅನುಕೂಲ ಮಾಡಿಕೊಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ ನೀಡಿ ಆಗ್ರಹಿಸಲಾಯಿತು. ಮನವಿ ಸ್ವೀಕರಿಸಿದ ನಳಿನ್, ಚಳಿಗಾಲದ ಅಧಿವೇಶನದಲ್ಲಿ ಮಂದಿರ ನಿರ್ಮಾಣದ ಬಗ್ಗೆ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಶೋಭಾ ಯಾತ್ರೆ
ಜನಾಗ್ರಹ ಸಭೆಯ ಅಂಗವಾಗಿ ಮಧ್ಯಾಹ್ನ 3.30 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಬೃಹತ್ ಶೋಭಾಯಾತ್ರೆ ಕೇಂದ್ರ ಮೈದಾನದ ವರೆಗೆ ನಡೆಯಿತು. ಧಾರ್ಮಿಕ ಮುಖಂಡರು, ಹಿಂದೂ ಸಂಘಟನೆಗಳ ನಾಯಕರು, ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಜನಾಗ್ರಹ ಸಭೆಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಹಾಗೂ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ರವಿವಾರ ಬಿಗು ಪೊಲೀಸ್ ಬಂದೋಬಸ್ತು ಕೈಗೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.