Pejawar Swamiji ಷಷ್ಠ್ಯಬ್ದಿ: ”ಪ್ರಸನ್ನಾಭಿವಂದನಮ್” ಗುರುವಂದನೋತ್ಸವಕ್ಕೆ ಚಾಲನೆ
ನಾಳೆ ಭಗವದ್ಗೀತಾ ಜೀವನ್ಮಾರ್ಗದರ್ಶಿನಿ ವಿಚಾರಗೋಷ್ಠಿ
Team Udayavani, Oct 30, 2023, 6:44 PM IST
ಹೊಸದಿಲ್ಲಿ : ಅಯೋಧ್ಯಾ ರಾಮಮಂದಿರದ ವಿಶ್ವಸ್ಥರೂ ಆಗಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಠ್ಯಬ್ದಿ ಪ್ರಯುಕ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಭಿಮಾನಿಗಳು ಮತ್ತು ಶಿಷ್ಯರು ಸಂಯೋಜಿಸಿರುವ ಮೂರುದಿನಗಳ ಪ್ರಸನ್ನಾಭಿವಂದನಮ್ ಅಭಿವಂದನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಕೇಂದ್ರ ಸರಕಾರದ ಭಾರತೀಯ ಭಾಷಾ ಅಧ್ಯಯನ ಸಮಿತಿ ಅಧ್ಯಕ್ಷ ಪ್ರೊ.ಚ. ಮೂ. ಕೃಷ್ಣಶಾಸ್ತ್ರಿಯವರು ದೀಪಬೆಳಗಿಸಿ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ ಅಲೋಕ್ ಕುಮಾರ್ , ಉದ್ಯಮಿ ರಮೇಶ್ ವಿಗ್ , ಗುವಾಹಟಿಯ ಕುಮಾರ ಭಾಸ್ಕರ ವರ್ಮ ಸಂಸ್ಕೃತ ಮತ್ತು ಪುರಾತನ ಅಧ್ಯಯನ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಪ್ರಹ್ಲಾದ್ ಜೋಶಿ , ನವದೆಹಲಿಯ, ಬೆಂಗಳೂರು ಪೂರ್ಣಪ್ರಜ್ಞ ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಎ.ವಿ.ನಾಗಸಂಪಿಗೆ, ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಕೃತ ವಿವಿ ಉಪಕುಲಪತಿ ಡಾ ಮುರಲಿಮನೋಹರ ಪಾಠಕ್, ಶಶಾಂಕ್ ಭಟ್, ದೆಹಲಿ ಪೇಜಾವರ ಮಠದ ಪ್ರಧಾನ ವ್ಯವಸ್ಥಾಪಕ ಮತ್ತು ಗುರುಕುಲದ ಪ್ರಾಚಾರ್ಯ ವಿದ್ವಾನ್ ವಿಠೋಬಾಚಾರ್ಯ, ವಿದ್ವಾನ್ ಆನಂದತೀರ್ಥಾಚಾರ್ಯ ಸದಾಶಿವ ಭಟ್, ಡಿ.ಪಿ. ಅನಂತ್ ದೆಹಲಿ ವಿಹಿಂಪ ಪ್ರಾಂತ ಕಾರ್ಯದರ್ಶಿ ಸುರೇಂದ್ರ ಗುಪ್ತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೇಂದ್ರೀಯ ಸಂಸ್ಕೃತ ವಿವಿ ಉಪಕುಲಪತಿ ಹಾಗೂ ಉತ್ಸವ ಸಮಿತಿ ಪ್ರಧಾನಕಾರ್ಯದರ್ಶಿ ಡಾ ಶ್ರೀನಿವಾಸಾಚಾರ್ಯ ವರಖೇಡಿಯವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿರು .ವಿದ್ವಾನ್ ನಾರಾಯಣಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು . ಅಶುತೋಷ್ ತಿವಾರಿ ವೇದಘೋಷಗೈದರು.
ಕಾರ್ಯಕ್ರಮಕ್ಕೆ ಮೊದಲು ಶ್ರೀಗಳವರನ್ನು ನಗರದಲ್ಲಿ ಶ್ರೀಹರಿ ಭಟ್ , ನವನೀತ್ ಕಠಾನಾ ಮೊದಲಾದವರ ಸಂಯೋಜನೆಯಲ್ಲಿ ಶೋಭಾಯಾತ್ರೆಯ ಮೂಲಕ ಬರಮಾಡಿಕೊಳ್ಳಲಾಯಿತು.ಮಠದ ಆವರಣದಲ್ಲಿ ಶ್ರೀಗಳು ಮತ್ತು ಗಣ್ಯರು ಸಸಿಗಳನ್ನು ನೆಟ್ಟರು.
ಮಂಗಳವಾರ ಸಂಸ್ಕೃತ ವಿಚಾರಗೋಷ್ಠಿ
ಸಮಾರಂಭದ ಅಂಗವಾಗಿ ಮಂಗಳವಾರ ದಿನಪೂರ್ತಿ ಕೇಂದ್ರೀಯ ಸಂಸ್ಕೃತ ವಿವಿ ಭಗವದ್ಗೀತಾ ಜೀವನ್ಮಾರ್ಗದರ್ಶಿನಿ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದ್ದು ಅನೇಕ ವಿದ್ಯಾಪೀಠ ಹಾಗೂ ಸಂಸ್ಕೃತ ವಿವಿಗಳ ಪ್ರಾಧ್ಯಾಪಕರು ವಿದ್ವಾಂಸರು ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.