ಆಕರ್ಷಣೆಯ ಕೇಂದ್ರವಾದ ಮಲ್ಪೆ ಸೀ ವಾಕ್ ಉದ್ಯಾನ
ವಾರಾಂತ್ಯದಲ್ಲಿ ಹೆಚ್ಚಿದ ಜನಸಂದಣಿ
Team Udayavani, Dec 7, 2020, 1:43 PM IST
ಮಲ್ಪೆ, ಡಿ. 6: ಇಲ್ಲಿನ ಸೀ ವಾಕ್ ಬಳಿ ಹೊಸದಾಗಿ ರೂಪುಗೊಂಡ ಉದ್ಯಾನ ಜನಾಕರ್ಷಣೆಯ ಕೇಂದ್ರವಾಗಿದ್ದು, ಪ್ರವಾಸಿಗರು ಸೇರಿದಂತೆ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ :
ಮಲ್ಪೆ ಸೀ ವಾಕ್ ವೇ ಸಮೀಪ ಉಡುಪಿ ಜಿಲ್ಲಾಡಳಿತ ಮತ್ತು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಅನುದಾನದಲ್ಲಿ ಸುಮಾರು 2 ಕೋ.ರೂ. ವೆಚ್ಚದಲ್ಲಿ ಸುಂದರ ಕಲಾಕೃತಿಗಳೊಂದಿಗೆ ಉದ್ಯಾನ ನಿರ್ಮಾಣವಾಗಿದ್ದು, ಡಿ. 3ರಂದು ಲೋಕಾರ್ಪಣೆಗೊಂಡಿದೆ. ಆರಂಭದಿಂದಲೇ ಪ್ರತಿದಿನ ಜನರು ಇಲ್ಲಿ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ವಾರಾಂತ್ಯದಲ್ಲಿ ಇಲ್ಲಿಗೆ ಆಗಮಿಸುವವರ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ.
ಆಕರ್ಷಣೀಯ :
ಉದ್ಯಾನ ಆರಂಭಕ್ಕೆ ಮೊದಲು ಸೀ ವಾಕ್‌ಗೆ ಜನರು ಅಪಾರ ಸಂಖ್ಯೆಯಲ್ಲಿ ಬರುತ್ತಿದ್ದರು. ಇದೀಗ ಉದ್ಯಾನ ನಿರ್ಮಾಣಗೊಂಡ ಬಳಿಕ ಇಲ್ಲಿಗೆ ಭೇಟಿ ನೀಡುವ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಪ್ರದೇಶ ಎಲ್ಲ ವಯೋಮಾನದವರನ್ನೂ ಸೆಳೆಯುತ್ತಿದೆ. ಮಕ್ಕಳು ಜಾರುಬಂಡಿಯಲ್ಲಿ ಆಟವಾಡುವುದು, ಯುವ ಜನತೆ ವಿವಿಧ ಕಲಾಕೃತಿಗಳ ಎದುರು ಸೆಲ್ಫಿ ತೆಗೆಯುತ್ತ ಸಂಭ್ರಮಿಸುತ್ತಿದ್ದಾರೆ. ಆದರೆ ಕತ್ತಲಾದ ಮೇಲೆ ಇಲ್ಲಿ ಬೆಳಕಿನ ವ್ಯವಸ್ಥೆ ಕಡಿಮೆ ಇದೆ.
ಪಾರ್ಕ್‌ನಲ್ಲಿ ಹೆಚ್ಚುವರಿ ದೀಪದ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿ ಸೈಕಲ್ ಟ್ರಾÂಕ್ ಕೂಡ ನಿರ್ಮಾಣವಾಗಲಿದೆ ಎಂದು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಉಸ್ತುವಾರಿ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಜನರ ಪ್ರಶಂಸೆ :
ಒಂದು ಕಾಲದಲ್ಲಿ ಜನ ಸಾಮಾನ್ಯರು ನಡೆದಾಡಲು ಭಯಪಡುತ್ತಿದ್ದ ಬ್ರೇಕ್‌ವಾಟರ್ ಪ್ರದೇಶದಲ್ಲಿ, ಸೀ ವಾಕ್ ರೂಪಿಸುವ ಮೂಲಕ ಈ ಪ್ರದೇಶವನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಿದ್ದರಿಂದ ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡಿ, ವಾಯು ವಿಹಾರದೊಂದಿಗೆ ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಇದೀಗ ಅಲ್ಲಿಯೇ ಉದ್ಯಾನ ನಿರ್ಮಿಸಿ ಮತ್ತಷ್ಟು ಅಭಿವೃದ್ಧಿಪಡಿಸಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ.
ಉದ್ಯಾನದಲ್ಲಿ ಏನೇನಿದೆ? : ಸಾಂಸ್ಕೃತಿಕ ಕಲಾ ಪ್ರದರ್ಶನಕ್ಕಾಗಿ ಅರ್ಧ ಚಂದ್ರಾಕಾರದ ಆ್ಯಂಫಿಥಿಯೇಟರ್, 15 ಅಡಿ ಎತ್ತರದ ಸಿಮೆಂಟ್ ಕಲಾಕೃತಿ ಜಟಾಯು ಪ್ರತಿಮೆ, ಮೀನುಗಾರರು ಪಾತಿದೋಣಿಯನ್ನು ತೀರಕ್ಕೆ ಎಳೆಯುವ ಕಲಾಕೃತಿ, ಪಾತಿದೋಣಿಯಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರ, 250 ವಾಹನಗಳ ನಿಲುಗಡೆಗೆ ಅನುಕೂಲವಾದ 50 ಸಾವಿರ ಚದರಡಿ ವಿಸ್ತೀರ್ಣದ ಪಾರ್ಕಿಂಗ್, ಮಕ್ಕಳ ಆಕರ್ಷಣೆಗಾಗಿ ಬೃಹತ್ ಗಾತ್ರದ ಕಲರ್ ಫುಲ್ ಬೆಕ್ಕು ಮತ್ತು ಮೀನು, ವಾಕಿಂಗ್ ಟ್ರ್ಯಾಕ್, ಮಕ್ಕಳ ಆಟಕ್ಕೆ ಸಂಬಂಧಿಸಿದಂತೆ, ಜಾರುಬಂಡಿ, ಸ್ಯಾಂಡ್‌ಪಿಟ್, ಕುಳಿತು ಕೊಳ್ಳಲು ಕಲ್ಲು ಬೆಂಚುಗಳು, ಲೈಟಿಂಗ್ ಆಕರ್ಷಣೀಯವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.