ನೆಮ್ಮದಿ ಕೇಂದ್ರದಿಂದ ಸಾರ್ವಜನಿಕರ ನೆಮ್ಮದಿ ಭಂಗ!
Team Udayavani, Jul 4, 2019, 5:55 AM IST
ಉಡುಪಿ: ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ದಾಖಲೆ ಪತ್ರಗಳಿಗಾಗಿ ಸಾರ್ವಜನಿಕರು ದಿನಪೂರ್ತಿ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ಉಡುಪಿ ತಾಲೂಕು ಕಚೇರಿಯಲ್ಲಿರುವ ನೆಮ್ಮದಿ ಕೇಂದ್ರದಲ್ಲಿ ಸರ್ವ ಸಾಮಾನ್ಯವಾಗಿದೆ.
ತಾಲೂಕು ಕಚೇರಿಯಲ್ಲಿರುವ ನೆಮ್ಮದಿ ಕೇಂದ್ರಕ್ಕೆ ದಾಖಲೆ ಪತ್ರಕ್ಕಾಗಿ ಬರುವ ಜನರಿಗೆ ಸರ್ವರ್ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೇಂದ್ರದಲ್ಲಿ ದಿನ ಪೂರ್ತಿ ಕಾದರೂ ಕೆಲಸವಾಗದೆ ಬರಿ ಕೈಯಲ್ಲಿ ಹಿಂದಿರುಗಬೇಕಾಗಿದೆ.
ಊಟ ಬಿಟ್ಟು ಕಾಯುವ ಪರಿಸ್ಥಿತಿ
ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕಾಗಿದೆ. ಆದ್ದರಿಂದ ಕಷ್ಟವಾದರೂ ಸರಿಯೇ ಕಾದು ಪ್ರಮಾಣ ಪತ್ರ ಬೇಕು ಅಂತ ಬೆಳಗ್ಗೆಯಿಂದ ಊಟಕ್ಕೂ ತೆರಳಿದರೆ ಸಾಲು ತಪ್ಪುತ್ತದೆ ಎನ್ನುವ ಭಯದಿಂದ ಊಟ ಬಿಟ್ಟು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಇದೀಗ ಸೂಕ್ತ ಸಮಯದಲ್ಲಿ ದಾಖಲೆಗಳನ್ನು ನೆಮ್ಮದಿ ಕೇಂದ್ರ ವಿಫಲವಾದ ಕಾರಣ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದೆ.
ಸಮಸ್ಯೆ ಕೇಳ್ಳೋರಿಲ್ಲ!
ನೆಮ್ಮದಿ ಕೇಂದ್ರದಲ್ಲಿ ನ ಸರ್ವರ್ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದ್ದರೂ ಅದನ್ನು ಕೇಳಿಸಿಕೊಳ್ಳಲು ಯಾವುದೇ ಅಧಿಕಾರಿ ಮುಂದೆ ಬರುತ್ತಿಲ್ಲ. ನಗರದಲ್ಲಿರುವ ನೆಮ್ಮದಿ ಕೇಂದ್ರದಲ್ಲಿ ನಿಗದಿತ ಸಮಯದ ಮಿತಿಯೊಳಗೆ ಕೆಲಸ ಕಾರ್ಯ ನಡೆಯುತ್ತಿಲ್ಲ.
ಎಲ್ಲ ಕೇಂದ್ರಗಳಲ್ಲಿ ಒಂದೇ ಗೋಳು!
ಜಿಲ್ಲೆಯ ಎಲ್ಲ ನೆಮ್ಮದಿ ಕೇಂದ್ರಗಳಲ್ಲಿ ಇದೇ ಸಮಸ್ಯೆ. ನೆಮ್ಮದಿ ಕೇಂದ್ರದಲ್ಲಿ ದಿನ ಪೂರ್ತಿ ಕಾದರೂ ಕೆಲಸವಾಗದೆ ಮತ್ತೆ ಮರುದಿನ ದಾಖಲೆ ಪಡೆಯಲು ಹೋದರೂ ನೆಮ್ಮದಿ ಕೇಂದ್ರದವರು ಒಂದಲ್ಲ ಒಂದು ನೆಪ ಹೇಳಿ ಬಂದವರನ್ನು ವಾಪಸ್ಸು ಕಳುಹಿಸುತ್ತಿದ್ದಾರೆ.
ಸರ್ವರ್ ಸಮಸ್ಯೆ, ಪ್ರಿಂಟ್ ಸರಿಯಿಲ್ಲ, ಮಧ್ಯಾಹ್ನ ಊಟದ ಸಮಯ ಎಂದೆಲ್ಲ ಸಬೂಬುಗಳನ್ನು ಹೇಳಿ ಬಂದವರನ್ನು ವಾಪಸ್ ಕಳಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.