ಪೆರಂಪಳ್ಳಿ: ಶಿಲಾಯುಗದ ಗುಹಾ ಸಮಾಧಿ ಪತ್ತೆ
Team Udayavani, May 22, 2018, 8:31 AM IST
ಉಡುಪಿ: ಪೆರಂಪಳ್ಳಿಯ ಶಿವತ್ತಾಯ ಅವರ ಮನೆಯ ಹಿಂಭಾಗದ ಹಡಿಲು ಗದ್ದೆಯಲ್ಲಿ ಬೃಹತ್ ಶಿಲಾಯುಗದ ಗುಹಾ ಸಮಾಧಿ ಪತ್ತೆಯಾಗಿದೆ.
ಗುಹೆಯನ್ನು ಪರಿಶೀಲಿಸಿದ ಇತಿಹಾಸ ತಜ್ಞ ಪ್ರೊ| ಟಿ. ಮುರುಗೇಶಿಯವರು ಇದು ಬೃಹತ್ ಶಿಲಾಯುಗದ ಸಮಾಧಿ ಎಂದು ಹೇಳಿದ್ದಾರೆ. ಕೊಡಪಾನದ ಆಕೃತಿಯಲ್ಲಿ ಕೊರೆದು ರಚಿಸಿರುವ ಈ ಸಮಾಧಿಯಲ್ಲಿ ವಿವಿಧ ರೀತಿಯ ಮಡಕೆ ಅವಶೇಷಗಳು ಕಂಡುಬಂದಿವೆ. ಅಸ್ಥಿ ಅವಶೇಷಗಳನ್ನು ತುಂಬಿಸಿದ ಮಡಕೆ ಸುಮಾರು 2 ಮೀ. ಆಳದಲ್ಲಿ ಇತ್ತು. ಕಡು ಕೆಂಪು ಬಣ್ಣದ ಮಡಕೆ, ಕಪ್ಪು ಬಣ್ಣದ ಮಡಕೆ, ಕಪ್ಪು ಮತ್ತು ಕೆಂಪು ಬಣ್ಣದ ಮಡಕೆ, ನಸುಗೆಂಪು ಬಣ್ಣದ ಮಡಕೆ ಅವಶೇಷಗಳು ಸಮಾಧಿಯಲ್ಲಿ ಪತ್ತೆಯಾಗಿವೆೆ.
ಕಲ್ಲಿನ ಆಯುಧಗಳೂ ಪತ್ತೆ
ಉಡುಪಿ ಜಿಲ್ಲೆಯ ಕನ್ನರ್ಪಾಡಿ, ಕೊರಂಗ್ರಪಾಡಿ, ಕಪ್ಪೆಟ್ಟು, ಉಪ್ಪೂರು, ಶಿರ್ವ, ಬಂಟಕಲ್ಲು, ಸಾಂತೂರು ಕೊಪ್ಲ, ಹೆಬ್ರಿ, ಸೂಡಾ ಮೊದಲಾದ ಕಡೆ ಈ ರೀತಿ ಸಮಾಧಿಗಳು ಈಗಾಗಲೇ ಕಂಡುಬಂದಿವೆ. ಅವೆಲ್ಲವೂ ಕೆಂಪು ಮುರಕಲ್ಲಿನಲ್ಲಿ ಮಾಡಿದ್ದಾಗಿತ್ತು. ವಿಶೇಷವೆಂದರೆ ಪೆರಂಪಳ್ಳಿಯಲ್ಲಿ ಪತ್ತೆಯಾಗಿರುವ ಸಮಾಧಿಯು ಮಣ್ಣಿನಲ್ಲಿಯೇ ಕೊರೆದು ಮಾಡಿದ ಸಮಾಧಿಯಾಗಿದೆ. ಈ ಸಮಾಧಿ ರಚನೆಗೆ ಉಪಯೋಗಿಸಿದ ಕಲ್ಲಿನ ಆಯುಧಗಳೂ ಸಹ ಸಮಾಧಿಯಲ್ಲಿ ದೊರಕಿವೆ.
2,500 ವರ್ಷ ಹಿಂದಿನದ್ದೇ?
ಪೆರಂಪಳ್ಳಿ ಶಿವಳ್ಳಿಯ ಒಂದು ಭಾಗವಾಗಿದೆ. ಶಿವಳ್ಳಿಯನ್ನು 7 ಮತ್ತು 8ನೇ ಶತಮಾನದ ಶಾಸನಗಳಲ್ಲಿ ಉಲ್ಲೇಖೀಸಲಾಗಿದೆ. ಈ ಗುಹಾ ಸಮಾಧಿಯ ಸಂಶೋಧನೆ ಶಿವಳ್ಳಿಯ ಪ್ರಾಚೀನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸರಿಸುಮಾರು ಕ್ರಿ.ಪೂ. 800ರಷ್ಟು ಪ್ರಾಚೀನ ಸಮಾಧಿಯೆಂದು ಅಂದಾಜಿಸಲಾಗಿದೆ. ಇದು ನಿಜವೇ ಆಗಿದ್ದಲ್ಲಿ ಶಿವಳ್ಳಿಯ ಪರಿಸರವು ಸುಮಾರು 2,500 ವರ್ಷಗಳಷ್ಟು ಮೊದಲೇ ಜನವಸತಿ ಪ್ರದೇಶವಾಗಿತ್ತೆಂಬುದಕ್ಕೆ ಈ ಸಮಾಧಿಯ ಶೋಧ ಮಹತ್ತರ ಸಾಕ್ಷಿಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.