ಪೆರ್ಡೂರು ಅನಂತಪದ್ಮನಾಭ ದೇಗುಲ: ವಾರ್ಷಿಕ ಜಾತ್ರೆ
Team Udayavani, Mar 17, 2018, 6:45 AM IST
ಪೆರ್ಡೂರು: ಉಡುಪಿ ತಾಲೂಕಿನ ಪೆರ್ಡೂರು ಕದಳೀಪ್ರಿಯ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.12ರಂದು ಆರಂಭಗೊಂಡಿದ್ದು 19ರ ವರೆಗೆ ಕ್ಷೇತ್ರದ ತಂತ್ರಿಗಳಾದ ಕೆ.ಜಿ. ರಾಘವೇಂದ್ರ ತಂತ್ರಿಗಳ ಧಾರ್ಮಿಕ ನೇತೃತ್ವದಲ್ಲಿ ವಿವಿಧ ವಿಧಿ ವಿಧಾನಗಳೊಂದಿಗೆ ನಡೆಯುತ್ತಿದ್ದು ಮಾ.14ರಂದು ಮೀನ ಸಂಕ್ರಮಣ ಆಚರಣೆ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಸಾವಿರ ಹಣ್ಣು ಸೇವೆ ಮೊದಲಾದ ಸೇವೆ ಸಲ್ಲಿಸಿದರು.
ಮಧ್ಯಾಹ್ನ ಪ್ರಧಾನ ಹೋಮ, ಕಲಶಾಭಿಷೇಕ,ಮಹಾಪೂಜೆ, ರಾತ್ರಿ ದೀವಟಿಕೆ ಸಲಾಮ್,ಕೊಡಿಪೂಜೆ, ಉತ್ಸವ ಬಲಿ, ಗರುಡವಾಹನ, ತೆಪ್ಪೋತ್ಸವ, ರಥೋತ್ಸವ, ವಾಲಗಮಂಟಪ ಪೂಜೆ, ವೇದಪಾರಾಯಣ, ಸಂಗೀತ,ವಾದ್ಯ, ನರ್ತನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ, ಕಂಚಲ ಸೇವೆ,ದೊಡ್ಡರಂಗಪೂಜೆ, ರಂಗಪೂಜೆ ಬಲಿ, ಕೆರೆದೀಪ ಮೊದಲಾದ ಕಾರ್ಯಕ್ರಮಗಳು ನಡೆಯಿತು.
ಮಾ.15ರಂದು ರಾತ್ರಿ ಉತ್ಸವ ಬಲಿ, ಬಯ್ಯದ ಬಲಿ, ವಸಂತೋತ್ಸವ, ಬೆಳ್ಳಿ ಪಲ್ಲಕ್ಕಿ, ಚಂದ್ರಮಂಡಲ ರಥ, ಇಡಿಗಾಯಿ,ವಾಲಗಮಂಟಪ ಪೂಜೆ, ಸವಾರಿ ಬಲಿ, ಕಟ್ಟೆಪೂಜೆ, ಭುಜಂಗ ಬಲಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅರ್ಚಕ ಪಿ.ಸುಧಾಕರ ಅಡಿಗ,ರಾಜ್ ಕುಮಾರ್ ಶೆಟ್ಟಿ ದೊಡ್ಡಮನೆ ,ಬುಕ್ಕಿಗುಡ್ಡೆ ಶಿವರಾಮ ಶೆಟ್ಟಿ, ಶುಭಲಕ್ಷ್ಮೀ ಭಂಡಾರ್‌ಕರ್,ರಾಮಯ್ಯ ನಾಯ್ಕ, ,ಆಶಾ ಗಣೇಶ್ ಭಂಡಿ, ರಾಜು ಮೂಲ್ಯ, ದಿನೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.