Udupi ಸ್ಥಳೀಯ ಕೆಂಪಕ್ಕಿಯ ಭತ್ತ ಖರೀದಿಗೆ ಇನ್ನೂ ಲಭಿಸದ ಅನುಮತಿ
ಸಾಮಾನ್ಯ ಭತ್ತ ಖರೀದಿಗೆ ನೋಂದಣಿ ಆರಂಭ
Team Udayavani, Dec 3, 2023, 6:45 AM IST
ಉಡುಪಿ: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಮುಂಗಾರು ಭತ್ತದ ಕೊçಲು ಪೂರ್ಣಗೊಂಡು, ಹಿಂಗಾರು ಬಿತ್ತನೆಗೆ ಸಜ್ಜಾಗುತ್ತಿದ್ದರೂ ಸರಕಾರ ಮಾತ್ರ ಸ್ಥಳೀಯ ಕೆಂಪಕ್ಕಿಯ (ಕುಚ್ಚಲಕ್ಕಿ) ಭತ್ತದ ಖರೀದಿಯ ನೋಂದಣಿ ಕೇಂದ್ರ ತೆರೆಯಲು ಇನ್ನೂ ಅನುಮತಿ ನೀಡಿಲ್ಲ.
ಕೊಯ್ಲಿನ ಸಂದರ್ಭದಲ್ಲೇ ಭತ್ತ ಖರೀದಿಯ ನೋಂದಣಿ ಆರಂಭಿಸಬೇಕು ಎಂಬ ಸ್ಥಳೀಯ ರೈತರ ಬೇಡಿಕೆ ಈ ವರ್ಷವೂ ಈಡೇರಿಲ್ಲ. ಪರಿಣಾಮ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ (ಪಿಡಿಎಸ್) ಸ್ಥಳೀಯ ಕುಚ್ಚಲಕ್ಕಿ ವಿತರಣೆ ಮರೀಚಿಕೆಯಾಗಿಯೇ ಉಳಿಯಲಿದೆ.
ಪಿಡಿಎಸ್ ಮೂಲಕ ಕರಾವಳಿಯ ಫಲಾನುಭವಿಗಳಿಗೆ ಸ್ಥಳೀಯ ಕುಚ್ಚಲಕ್ಕಿ ವಿತರಣೆಗೆ ಕಳೆದ 2 ವರ್ಷ ಕೇಂದ್ರ ಸರಕಾರ ಅನುಮತಿ ನೀಡಿತ್ತಾದರೂ ಅಕ್ಕಿಯ ಕೊರತೆಯಿಂದ ವಿತರಣೆ ಸಾಧ್ಯವಾಗಿಲ್ಲ. ನೋಂದಾಯಿಸಿದ ರೈತರ ಸಂಖ್ಯೆಯೂ ತೀರ ಕಡಿಮೆಯಿತ್ತು. ಪ್ರತೀ ತಿಂಗಳು ಉಭಯ ಜಿಲ್ಲೆಗೆ ಸರಿಸುಮಾರು 1.20 ಲಕ್ಷ ಕ್ವಿಂಟಾಲ್ ಅಕ್ಕಿಯ ಬೇಡಿಕೆಯಿದೆ. ಈ ವರ್ಷ ರಾಜ್ಯ ಸರಕಾರದಿಂದ ಕ್ಲಪ ಸಮಯದಲ್ಲಿ ಪ್ರಸ್ತಾವನೆ ಹೋಗದೇ ಇರುವುದರಿಂದ ಇನ್ನೂ ಅನುಮತಿಯೇ ಸಿಕ್ಕಿಲ್ಲ. ಹೀಗಾಗಿ ರೈತರು ಯಥಾ ಪ್ರಕಾರ ತಾವು ಬೆಳೆದ ಭತ್ತವನ್ನು ಖಾಸಗಿ ಮಿಲ್‌ಗಳಿಗೆ ಕೊಡಲಾರಂಭಿಸಿದ್ದಾರೆ.
ಸಾಮಾನ್ಯ ಭತ್ತ ಖರೀದಿ ಆರಂಭ
ಸರಕಾರವೇ ರೈತರಿಂದ ನೇರವಾಗಿ ಭತ್ತ ಖರೀದಿಗೆ ಅನುಕೂಲವಾಗುವಂತೆ ರಾಜ್ಯದ ಎಲ್ಲೆಡೆ ಭತ್ತ ಖರೀದಿ ಕೇಂದ್ರ ಆರಂಭಿಸಿದೆ. ಅದರಂತೆ ಉಭಯ ಜಿಲ್ಲೆಯ 8 ಕಡೆಗಳಲ್ಲಿ (ದ.ಕ. ಜಿಲ್ಲೆಯ ಮಂಗಳೂರಿನ ಶಕ್ತಿನಗರ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯದ ಕೆಎಫ್ಸಿಎಸ್‌ಸಿ ಗೋದಾಮು ಮತ್ತು ಉಡುಪಿ ಜಿಲ್ಲೆಯ ಉಡುಪಿ ಎಪಿಎಂಸಿ ಆವರಣ, ಕುಂದಾಪುರ ಕೋಟೇಶ್ವರದ ಕೆಎಫ್ಸಿಎಸ್‌ಸಿ ಗೋದಾಮು ಮತ್ತು ಕಾರ್ಕಳದ ಎಪಿಎಂಸಿ ಆವರಣ) ಸಾಮಾನ್ಯ ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ. ಬೆಳ್ತಿಗೆ ಅಕ್ಕಿ ಮಾಡಬಹುದಾದ ಭತ್ತ ನೀಡಲು ಯಾವೊಬ್ಬ ರೈತನೂ ಈವರೆಗೆ ಇಲ್ಲಿ ನೋಂದಣಿ ಮಾಡಿಲ್ಲ. 2023-24ನೇ ಸಾಲಿನಲ್ಲಿ ಕೇಂದ್ರ ಸರಕಾರವು ಘೋಷಿಸಿರುವ ಬೆಂಬಲ ಬೆಲೆಯಂತೆ ಸಾಮಾನ್ಯ ಭತ್ತಕ್ಕೆ ಪ್ರತೀ ಕ್ವಿಂಟಾಲ್‌ಗೆ 2,183 ರೂ. ನೀಡಿ ಖರೀದಿ ಮಾಡಲಾಗುತ್ತದೆ. ಕಳೆದ ವರ್ಷ ರಾಜ್ಯ ಸರಾಕರದ ಕುಚ್ಚಲಕ್ಕಿಗೆ ಹೆಚ್ಚುವರಿಯಾಗಿ 500 ರೂ. ಬೆಂಬಲ ಬೆಲೆ ಘೋಷಣೆ ಮಾಡಿತ್ತು. ಈ ಬಾರಿ ರಾಜ್ಯ ಸರಕಾರ ಆ ನಿರ್ಧಾರ ಇನ್ನೂ ಪ್ರಕಟಿಸಿಲ್ಲ.
ಗುಣಮಟ್ಟ ಪರೀಕ್ಷೆ
ರೈತರು ಖರೀದಿ ಕೇಂದ್ರಕ್ಕೆ ತಂದ ಸ್ಯಾಂಪಲ್ ಭತ್ತದ ಗುಣಮಟ್ಟವನ್ನು ತಜ್ಞರಿಂದ ವೈಜ್ಞಾನಿಕವಾಗಿ ಪರೀಕ್ಷಿಸಲಾಗುತ್ತದೆ. ಭತ್ತದ ತೇವಾಂಶದ ಗರಿಷ್ಠ ಮಿತಿ ಶೇ. 17ರಷ್ಟು ದಾಟಿರಬಾರದು. ಶೇ. 3ಕ್ಕಿಂತ ಹೆಚ್ಚು ಜೊಳ್ಳು ಇರಬಾರದು. ಬಣ್ಣ ಮಾಸಿದ, ಮುರಿದ, ಮೊಳಕೆಯೊಡೆದ ಮತ್ತು ಹುಳು ಹಿಡಿದ ಕಾಳು ಶೇ. 4ಕ್ಕಿಂತ ಹೆಚ್ಚಿರಬಾರದು. ಇತರ ಮಿಶ್ರಣ (ಸಾವಯವ, ನಿರವಯವ) ಶೇ. 1ಕ್ಕಿಂತ ಹೆಚ್ಚಿರಬಾರದು ಎಂಬ ನಿಯಮವಿದೆ. ಈ ಎಲ್ಲ ಪರೀಕ್ಷೆಯ ಅನಂತರದಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದೆ.
ನೋಂದಣಿ ಹೇಗೆ?
ಭತ್ತ ಬೆಳೆದಿರುವ ರೈತರು ಕೃಷಿ ಇಲಾಖೆಯಿಂದ ನೀಡಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ(ಫ್ರೂಟ್ಸ್)ಯ ಗುರುತಿನ ಸಂಖ್ಯೆಯೊಂದಿಗೆ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಫ್ರೂಟ್ಸ್ ಐಡಿ ಜತೆಗೆ ಬ್ಯಾಂಕ್ ಖಾತೆ ಲಿಂಕ್ ಆಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಅನಂತರ ಫ್ರೂಟ್ಸ್ ತಂತ್ರಾಂಶದಲ್ಲಿ ಪರಿಶೀಲಿಸಿ, ಭತ್ತದ ಸ್ಯಾಂಪಲ್ ತರಲು ಸೂಚನೆ ನೀಡಲಾಗುತ್ತದೆ. ಕೃಷಿ ಇಲಾಖೆಯ ಗುಣಮಟ್ಟ ಪರೀಕ್ಷಕರು (ಗ್ರೇಡರ್) ಭತ್ತ ಪರೀಕ್ಷಿಸಿ ಗುಣಮಟ್ಟ ಸೂಕ್ತವಾಗಿದೆಯೆಂದು ದೃಢೀಕರಿಸಿದ ಅನಂತರದಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ನೀಡಿದ ರೈತರ ಬ್ಯಾಂಕ್ ಖಾತೆಗೆ ನೆರವಾಗಿ ಹಣ ಜಮಾ ಆಗಲಿದೆ.
ಸಾಮಾನ್ಯ ಭತ್ತ ಖರೀದಿಗೆ ನೋಂದಣಿ ಕೇಂದ್ರವನ್ನು ಉಭಯ ಜಿಲ್ಲೆಯ 8 ಕಡೆಗಳಲ್ಲಿ ತೆರೆಯ ಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಇನ್ನಷ್ಟು ಕೇಂದ್ರ ತೆರೆಯಲು ಅವಕಾಶವಿದೆ. ಈವರೆಗೆ ಯಾವುದೇ ರೈತರು ನೋಂದಣಿ ಮಾಡಿಸಿಕೊಂಡಿಲ್ಲ. ಆದರೆ ಕುಚ್ಚಲು ಅಕ್ಕಿ ಮಾಡಬಹುದಾದ ಎಂಒ4, ಕಜೆ, ಜಯ, ಪಂಚಮುಖೀ, ಸಹ್ಯಾದ್ರಿ, ಉಮಾ, ಜ್ಯೋತಿ ಮೊದಲಾದ ತಳಿಗಳ ಖರೀದಿಗೆ ಇನ್ನೂ ಸರಕಾರದಿಂದ ಅನುಮತಿ ಬಂದಿಲ್ಲ.
– ಅನುರಾಧಾ, ಜಿಲ್ಲಾ ವ್ಯವಸ್ಥಾಪಕಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ದ.ಕ., ಉಡುಪಿ
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ
Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ
Udupi: ಗೀತಾರ್ಥ ಚಿಂತನೆ-83: ಅಪೇಕ್ಷಿತ-ಅನಪೇಕ್ಷಿತ ವಂಶವಾಹಿಗಳು
Congress Govt.,: ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.