ಯಡ್ತಾಡಿ: ಕೋರೆಗೆ ಬಿದ್ದು ಕಾರ್ಮಿಕ ನಾಪತ್ತೆ
Team Udayavani, Jan 27, 2020, 1:14 AM IST
ಕೋಟ: ಸಾೖಬ್ರಕಟ್ಟೆ ಸಮೀಪ ಯಡ್ತಾಡಿ ಹೋರ್ವರ ಬೆಟ್ಟಿನಲ್ಲಿ ಕಲ್ಲುಕೋರೆಗೆ ಬಿದ್ದು ಕೂಲಿ ಕಾರ್ಮಿಕ, ಮಠದಬೆಟ್ಟು ನಿವಾಸಿ ಶಂಕರ ನಾಯ್ಕ (45) ನಾಪತ್ತೆಯಾದ ಘಟನೆ ಜ. 25ರಂದು ಸಂಭವಿಸಿದೆ.
ಈತ ಹಲವು ವರ್ಷದಿಂದ ಸಾೖಬ್ರಕಟ್ಟೆ, ಯಡ್ತಾಡಿ ಮುಂತಾದೆಡೆ ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ವಿಪರೀತ ಮದ್ಯ ವ್ಯಸನಿಯಾಗಿದ್ದ ಕಾರಣ ಮನೆಯಿಂದ ದೂರವಾಗಿದ್ದ ಎನ್ನಲಾಗಿದೆ.
ಶನಿವಾರ ಅಪರಾಹ್ನ ಈತ ಕೋರೆಗೆ ಬಿದ್ದಿರುವುದನ್ನು ಸ್ಥಳೀ ಯರು ಗಮನಿಸಿದ್ದು, ಬಳಿಕ ಸ್ಥಳೀಯ ಈಜುಗಾರರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಅನಂತರ ಅಗ್ನಿ ಶಾಮಕ ದಳದವರು ಆಗಮಿಸಿ ಹುಡುಕಿದರೂ ಪ್ರಯೋ ಜನವಾಗಲಿಲ್ಲ. ರವಿವಾರ ಕೂಡ ಶೋಧ ಮುಂದುವರಿಸಿದರೂ ಪತ್ತೆ ಹಚ್ಚಲಾಗಿಲ್ಲ. ಈತ ಆಕಸ್ಮಿಕವಾಗಿ ಬಿದ್ದಿದ್ದಾನೋ ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದಾನೋ ಎಂಬುದು ಖಚಿತವಾಗಿಲ್ಲ.
ಬ್ರಹ್ಮಾವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಪ್ರತಿವರ್ಷ ಮರುಕಳಿಸುವ ಘಟನೆ
ಈ ಕೋರೆ ಸರಿಯಾದ ಪರವಾನಿಗೆ ಇಲ್ಲದೆ ಸ್ಥಳೀಯ ಉದ್ಯಮಿಗಳ ಮೂಲಕ ಹತ್ತಾರು ವರ್ಷ ಕಾರ್ಯನಿರ್ವಹಿಸಲಾಗಿದ್ದು, ಸುಮಾರು 40-50 ಅಡಿ ಆಳವಿದೆ. ಅಪಾಯಕಾರಿ ನೀರಿನ ಹೊಂಡಗಳ ಸುತ್ತ ಕಡ್ಡಾಯವಾಗಿ ಬೇಲಿ ಅಳವಡಿಸಬೇಕು ಎನ್ನುವ ಕಟ್ಟುನಿಟ್ಟಿನ ಆದೇಶವಿದ್ದರೂ ಇಲ್ಲಿ ಮೂರು ದಿಕ್ಕುಗಳಲ್ಲಿ ತೆರೆದ ಸ್ಥಿತಿಯಲ್ಲಿದೆ. ಇದರ ಸಮೀಪದಲ್ಲೇ ಹಲವಾರು ಮನೆಗಳಿವೆ. ಸಾೖಬ್ರಕಟ್ಟೆ ಸುತ್ತಮುತ್ತ ಪ್ರತಿ ವರ್ಷ ಈ ರೀತಿಯ ಕೋರೆಗೆ ಬಿದ್ದು ಮೃತರಾಗುವ ಪ್ರಕರಣ ಮರುಕಳಿಸುತ್ತಿದ್ದು, ಮೂರ್‍ನಾಲ್ಕು ವರ್ಷದಲ್ಲಿ ಸುಮಾರು 8-10 ಮಂದಿ ಈ ರೀತಿ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.