Padubidri: ಕಂಬಳ ಬಗ್ಗೆ ಅರಿಯದೇ ಪೆಟಾ ವಿವಾದ: ಡಾ| ದೇವಿಪ್ರಸಾದ್ ಶೆಟ್ಟಿ
Team Udayavani, Oct 25, 2024, 6:45 AM IST
ಪಡುಬಿದ್ರಿ: ರಾಜ್ಯ ಸರಕಾರದ ಸಂಪೂರ್ಣ ಬೆಂಬಲದೊಂದಿಗೆ ಗ್ರಾಮೀಣ ಭಾಗದ ಜನರ ಕ್ರೀಡೆಯಾದ, ರಾಷ್ಟ್ರವ್ಯಾಪಿ ಮನ್ನಣೆ ಗಳಿಸಿರುವ ಕಂಬಳ ಕ್ರೀಡೆಯ ಬಗೆಗೆ ಸರಿಯಾಗಿ ಮಾಹಿತಿ ಹೊಂದಿರದ ಪ್ರಾಣಿದಯಾ ಸಂಘ(ಪೆಟಾ) ವಿನಾಕಾರಣವಾಗಿ ವಿವಾದವನ್ನು ಸೃಷ್ಟಿಸುತ್ತಿದೆ ಎಂದು ಉಡುಪಿ, ದ.ಕ., ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ ಶೆಟ್ಟಿ ಹೇಳಿದ್ದಾರೆ.
ಕಂಬಳದ ಕೋಣಗಳನ್ನು ಹಿಂಸಿಸಲು ಕೋಣಗಳ ಯಜಮಾನರು ಸಾಕುತ್ತಿಲ್ಲ. ಅವುಗಳನ್ನು ಮಕ್ಕಳಿಂದಲೂ ಅಧಿಕ ಪ್ರೀತಿಯಿಂದ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಾಕುತ್ತಿದ್ದಾರೆ.
ಬೆಂಗಳೂರು ಕಂಬಳಕ್ಕೆ ತೆರಳುವ ದಾರಿ ಮಧ್ಯೆ ಅವುಗಳ ಊಟೋಪಹಾರಗಳಿಗಾಗಿಯೇ ಪ್ರತ್ಯೇಕ ತಂಡವು ಬಹಳಷ್ಟು ಶ್ರಮಿಸಿದ್ದು ಜನಮನ್ನಣೆ ಪಡೆದಿದೆ.
ಹಾಗಾಗಿ ಕೇವಲ ಪ್ರಾಣಿ ಹಿಂಸೆ ಎಂಬ ಕಾರಣ ನೀಡಿ ಉಚ್ಚ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಯನ್ನು ಸಲ್ಲಿಸಿರುವುದು ಸರಿಯಲ್ಲ ಎಂದು ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.