ಪೆಟ್ರೋಲ್ ದರ ಏರಿಕೆ: ಲಾಟೀನು, ಎತ್ತಿನ ಗಾಡಿಯಲ್ಲಿ ಪ್ರತಿಭಟನೆ
Team Udayavani, Jul 11, 2018, 6:00 AM IST
ಉಡುಪಿ: ರಾಜ್ಯ ಬಜೆಟ್‌ನಲ್ಲಿ ಕರಾವಳಿಯನ್ನು ನಿರ್ಲಕ್ಷ್ಯ ಮಾಡಿರುವುದನ್ನು, ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ನಾಗರಿಕ ಹೋರಾಟ ಸಮಿತಿಯಿಂದ ಮಂಗಳವಾರ ವಿಶಿಷ್ಟವಾಗಿ ಪ್ರತಿಭಟನೆ ನಡೆಯಿತು.
ಸಾಂಕೇತಿಕವಾಗಿ ಲಾಟೀನು, ಅಕ್ಕಿಚೀಲ, ಎತ್ತಿನಗಾಡಿ ಕೈಗಾಡಿಯೊಂದಿಗೆ ಹಳೆ ಡಯನಾ ವೃತ್ತದಿಂದ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಚಿತ್ತರಂಜನ್ ವೃತ್ತದವರೆಗೆ ತಮಟೆ ಬಾರಿಸಿಕೊಂಡು ಪ್ರತಿಭಟನೆ ನಡೆಸಿದರು.
ಬಜೆಟ್‌ನಲ್ಲಿ ಕರಾವಳಿಗೆ ಅನ್ಯಾಯ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ನಿತ್ಯಾನಂದ ವಳಕಾಡು, ರಾಜ್ಯದಲ್ಲಿನ ಸಮ್ಮಿಶ್ರ ಸರಕಾರ ಬಜೆಟ್‌ನಲ್ಲಿ ದಿನನಿತ್ಯದ ಆವಶ್ಯಕ ವಸ್ತುಗಳಾದ ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ದರವನ್ನು ಏರಿಸಿದೆ. ಅಲ್ಲದೆ ಬಡವರಿಗೆ ನೀಡುತ್ತಿದ್ದ ಅನ್ನ ಭಾಗ್ಯದ ಅಕ್ಕಿಯನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಿದೆ. ಈ ಹಿಂದೆ ಕೇಂದ್ರ ಸರಕಾರ ಪೆಟ್ರೋಲ್ ಡಿಸೇಲ್ ದರ ಏರಿಸಿದ ಸಂದರ್ಭ ಪ್ರತಿಭಟನೆ ನಡೆಸಿದವರು. ಈಗ ರಾಜ್ಯದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಸಿ ಜನರಿಗೆ ಅನ್ಯಾಯ ಮಾಡಿದ್ದಾರೆ. ಬಜೆಟ್‌ನಲ್ಲಿ ಕರಾವಳಿಯನ್ನು ಕಡೆಗಣಿಸಿ ಕರಾವಳಿಗರಿಗೆ ಅನ್ಯಾಯ ಮಾಡಿದ್ದಾರೆ. ಸರಕಾರ ಈ ಅನ್ಯಾಯವನ್ನು ಸರಿಪಡಿಸದೇ ಇದಲ್ಲಿ ಮುಂದಿನ ದಿನಗಳಲ್ಲಿ ಉಡುಪಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ತಾರಾನಾಥ ಮೇಸ್ತ, ವಿನಯಚಂದ್ರ, ಆಟೋ ಯೂನಿಯನ್ , ಟೆಂಪೋ ಯೂನಿಯನ್ ಸದಸ್ಯರು ಮತ್ತು ನಾಗರಿಕ ಹೋರಾಟ ಸಮಿತಿಯ ಸದಸ್ಯರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.