ಫೋಟೋ ಎಡಿಟ್ ಮಾಡಿ ಮಹಿಳೆಗೆ ಅವಮಾನ: ಖಾಸಗಿ ಚಾನೆಲ್ ಮಾಲಕನ ವಿರುದ್ಧ ಕೇಸು
Team Udayavani, May 6, 2023, 6:10 AM IST
ಕಾರ್ಕಳ: ಖಾಸಗಿ ಚಾನೆಲ್‌ವೊಂದರ ಮಾಲಕ ಮಹಿಳೆಯೋರ್ವರ ಫೋಟೋ ಎಡಿಟ್ ಮಾಡಿ ಪ್ರಸರಣ ಮಾಡಿದ್ದಕ್ಕೆ ಸಂಬಂಧಿಸಿ ರಮಿತಾ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಬೆಂಬಲಿತ ಕೆಲವು ವ್ಯಕ್ತಿಗಳು ಮತ್ತು ಇತರರು ಸೇರಿ ರಮಿತಾ ಅವರ ಹಳೆಯ ಫೋಟೋವನ್ನು ಎಡಿಟ್ ಮಾಡಿ ಅವರ ಚಹರೆ ಇಟ್ಟು ಶೀಘ್ರದಲ್ಲಿ ವೀಡಿಯೋ ಬಿಡುಗಡೆ ಎಂದು ಹೇಳಿ ವಾಟ್ಸ್ ಆ್ಯಪ್ ಮತ್ತು ಫೇಸ್ ಬುಕ್‌ನಲ್ಲಿ ಹಾಕಿದ್ದರು. ಈ ಕುರಿತಂತೆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದಾದ ಬಳಿಕ ಈ ರೀತಿಯಲ್ಲಿ ಎಡಿಟ್ ಮಾಡಿರುವ ಫೋಟೋವನ್ನು ಹಾಕಿ ಮಾನಹಾನಿ ಆಗುತ್ತಿರುವ ಫೋಟೋಗಳನ್ನು ಪ್ರಸಾರ ಮಾಡದಂತೆ ಜಿಲ್ಲಾ ನ್ಯಾಯಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು. ಆದರೆ ಪವರ್ ಟಿವಿ ಎನ್ನುವ ಖಾಸಗಿ ನ್ಯೂಸ್ ಚಾನೆಲ್‌ನ ಮಾಲಕ ರಾಕೇಶ್ ಶೆಟ್ಟಿ ಅವರು ಫೇಸ್‌ಬುಕ್‌ನಲ್ಲಿ ಹರಿದಾಡಿದ್ದ ಅದೇ ಹಳೆಯ ಫೋಟೋವನ್ನು ತನ್ನ ಚಾನೆಲ್‌ನಲ್ಲಿ ಪ್ರಸರಣ ಮಾಡಿದ್ದು, ಅಲ್ಲದೇ ಅದರ ಸಣ್ಣ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಮಾಜದಲ್ಲಿ ತಿರುಗಾಡದಂತೆ ಸಾರ್ವಜನಿಕವಾಗಿ ಅವಮಾನಿಸಿರುತ್ತಾರೆ ಎಂದು ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.