ಇಲಾಖಾ ತನಿಖೆಯಲ್ಲಿ ಛಾಯಾಚಿತ್ರ ಮಹತ್ತರ ಪಾತ್ರ: ಲಕ್ಷ್ಮಣ ನಿಂಬರಗಿ
Team Udayavani, Aug 23, 2018, 6:20 AM IST
ಮಲ್ಪೆ: ಪೊಲೀಸ್‌ಇಲಾಖೆ ಹಾಗೂ ಛಾಯಾಗ್ರಾಹಕರಿಗೆ ಅವಿನಾಭಾವ ಸಂಬಂಧ. ವಿವಿಧ ಅಪರಾಧಗಳ ಇಲಾಖಾ ತನಿಖೆಯಲ್ಲಿ ಛಾಯಾಚಿತ್ರ ಮಹತ್ತರ ಪಾತ್ರವಹಿಸುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹೇಳಿದರು.
ಅವರು ಮಂಗಳವಾರ ಕೆಮ್ಮಣ್ಣು ಹಂಪನಕಟ್ಟೆಯ ಆದರ್ಶ್‌ನಲ್ಲಿ ಜರಗಿದ ವಿಶ್ವಛಾಯಾಚಿತ್ರಗ್ರಹಣ ದಿನಾಚರಣೆ ಅಂಗವಾಗಿ ದಶ ಮಾನೋತ್ಸವ ಸಂಭ್ರಮದಲ್ಲಿರುವ ಉಡುಪಿ ಪ್ರಸ್ ಫೋಟೋ ಗ್ರಾಪರ್ ಅಸೋಸಿಯೇಶನ್ಸ್ ಕೊಡಮಾಡಲ್ಪಡುವ ಉಪ್ಪಾ ಪುರಸ್ಕಾರವನ್ನು ಆದರ್ಶ ಸ್ಟುಡಿಯೋ ಮಾಲಕ ಶಿವ ಕೆ. ಅಮೀನ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಸೌತ್ ಕೆನರಾ ಫೋಟೋಗ್ರಾಫರ್ ಅಸೋಶಿಯೇಶನ್ ಮಂಗಳೂರು, ಉಡುಪಿ ಇದರ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಶೆಟ್ಟಿ ಮಾತನಾಡಿ ಹಿರಿಯ ಹಾಗೂ ಪತ್ರಿಕೆ ಯೊಂದಿಗೆ ಸಂಬಂಧವಿರುವ ಛಾಯಾಚಿತ್ರ ಗ್ರಾಹಕರನ್ನು ಹುಡುಕಿ ಅವರ ಸೇವಾ ಹಿರಿಮೆಯನ್ನು ಮನಗಂಡು ಛಾಯಾಸ್ಫೂರ್ತಿ ಬಿರುದು ನೀಡುತ್ತಿರುವ ಉಪ್ಪಾ ಸಂಘಟನೆ ಆಯೋಜಿಸುತ್ತಿರುವ ಈ ಕಾರ್ಯಕ್ರಮ ಅಭಿನಂದನಾರ್ಹ ಎಂದರು.
ಈ ಸಂದರ್ಭದಲ್ಲಿ ಶಿವಣ್ಣ ಅವರ ಅಭಿಮಾನಿ ಬಳಗ ಕೆಮ್ಮಣ್ಣು ತಂಡದವರು ಪೋಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರನ್ನು ಅಭಿನಂದಿಸಿದರು. ಸಂಜೀವ ಕೆ.ಅಮೀನ್ ಉಪಸ್ಥಿತರಿದ್ದರು. ಉಪ್ಪಾ ಅಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಆಸ್ಟ್ರೋ ಮೋಹನ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.