ಕಂಬದಕೋಣೆ: ಸುಂಟರ ಗಾಳಿಗೆ ಮನೆ, ಕೊಟ್ಟಿಗೆಗೆ ಹಾನಿ
Team Udayavani, Aug 5, 2019, 5:28 AM IST
ಉಪ್ಪುಂದ: ಕಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಂಟರಗಾಳಿ ಬೀಸಿದ ಪರಿಣಾಮ ತೆಂಕಬೆಟ್ಟು ಕಡೆಮನೆ ಅಣ್ಣಪ್ಪ ಬಳೆಗಾರ ಎಂಬವರ ಟೆರೇಸ್ ಮೇಲೆ ಮರವೊಂದು ಬಿದ್ದ ಪರಿಣಾಮ ಮನೆಗೆ ಹಾನಿ ಉಂಟಾಗಿದೆ.
ರಾತ್ರಿ ಹೊತ್ತು ದಿಢೀರನೆ ಬೀಸಿದ ಸುಂಟರಗಾಳಿಯಿಂದಾಗಿ ಮನೆಯೊಳಗೆ ಲಘು ಕಂಪನ ಕಾಣಿಸಿಕೊಂಡು ಮನೆಯ ಮೇಲೆ ಮರಬಿದ್ದ ಪರಿಣಾಮ ಗೋಡೆ ಬಿರುಕು ಬಿಟ್ಟಿತಲ್ಲದೇ ಮೇಲ್ಛಾವಣಿ ಹಾನಿಗೀಡಾಗಿದೆ.
ಕೊಟ್ಟಿಗೆಯೂ ಹಾನಿ
ಸುಂಟರ ಗಾಳಿಯ ಆರ್ಭಟಕ್ಕೆ ಅವರ ಮನೆಯ ದನದ ಕೊಟ್ಟಿಗೆಯು ಕುಸಿದು ಸಂಪೂರ್ಣ ಹಾನಿಗೀಡಾಗಿದೆ. ಇದು ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬವಾಗಿದ್ದು ಮನೆ, ಕೊಟ್ಟಿಗೆಗೆ ಹಾನಿಗೀಡಾದ ಹಿನ್ನೆಲೆಯಲ್ಲಿ ಅವರು ಆತಂಕ ಗೊಂಡಿದ್ದು, ಜಿಲ್ಲಾಡಳಿತ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.