ಪಿಲ್ಲರ್‌ಗಳ ಕಲ್ಲು ಕುಸಿತ, ಆತಂಕದಲ್ಲಿ ಗ್ರಾಮಸ್ಥರು
ಅಪಾಯದಲ್ಲಿ ಹೆಬ್ರಿ -ಬೇಳಂಜೆ ಸೇತುವೆ
Team Udayavani, Apr 29, 2019, 6:30 AM IST
ಹೆಬ್ರಿ: ಚಾರ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಹೆಬ್ರಿ ಕುಂದಾಪುರ ಮಾರ್ಗದ ನವೋದಯ ಶಾಲೆ ಬಳಿ ಇರುವ ಹೆಬ್ರಿ ಬೇಳಂಜೆ ಸೇತುವೆ ಕುಸಿಯುವ ಭೀತಿಯಲ್ಲಿದೆ.
1958ರಲ್ಲಿ ನಿರ್ಮಾಣವಾದ ಈ ಸೇತುವೆಯ ಪ್ರಮುಖ ಪಿಲ್ಲರ್‌ಗಳ ತಳದಲ್ಲೇ ಕಲ್ಲುಗಳು ಕುಸಿದಿದ್ದು ಅಪಾಯದಲ್ಲಿದೆ. ನಿರ್ಮಾಣವಾದ ಸಂದರ್ಭದಲ್ಲೇ ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿದ್ದು ಸ್ಥಳೀಯರಾದ ಬೇಳಂಜೆ ರಮಾನಂದ ಹೆಗ್ಡೆ ಅವರು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಈ ಬಗ್ಗೆ ಹೋರಾಟವನ್ನೂ ನಡೆಸಿದ್ದರು.
1980ರಲ್ಲಿ ಸೇತುವೆ ಒಂದು ಪಿಲ್ಲರ್‌ನ ಕಲ್ಲುಗಳು ಕುಸಿದಿದ್ದು ಬಳಿಕ ಇದಕ್ಕೆ ತೇಪೆ ಹಾಕಲಾಗಿತ್ತು. ಈಗ ಈ ತೇಪೆ ಹಾಕಿದ ಪಿಲ್ಲರ್ ಸಿಮೆಂಟ್ ಎದ್ದಿದೆ. ಜತೆಗೆ ಇನ್ನೊಂದು ಪ್ರಮುಖ ಪಿಲ್ಲರ್‌ನ ಕಲ್ಲುಗಳು ಕುಸಿದಿವೆ. ಮಳೆಗಾಲದಲ್ಲಿ ನೀರಿನ ರಭಸಕ್ಕೆ ಇಡೀ ಸೇತುವೆ ಕುಸಿಯುವ ಆತಂಕ ಎದುರಾಗಿದೆ.
ದುರಸ್ತಿಗೆ ಸೂಕ್ತ ಕಾಲ
ಮಳೆಗಾಲದಲ್ಲಿ ಉಕ್ಕಿ ಹರಿಯುವ ಸೀತಾನದಿ ಈಗ ಬತ್ತಿ ಹೋಗಿದೆ. ಈ ಸಮಯದಲ್ಲಿ ತಾತ್ಕಲಿಕ ದುರಸ್ತಿ ಕಾರ್ಯ ಮಾಡಲು ಅನುಕೂಲವಾಗಿದ್ದು, ಕ್ರಮ ಕೈಗೊಂಡಲ್ಲಿ ಸಂಭಾವ್ಯ ಅಪಾಯವನ್ನು ತಪ್ಪಿಸಬಹುದು.
ಸಂಪರ್ಕ ಕಡಿತಗೊಳ್ಳುವ ಭೀತಿ
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ದುರಸ್ಥಿ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೆಬ್ರಿ ಬೇಳಂಜೆ ಸಂಪರ್ಕ ಕಡಿತಗೊಳ್ಳುವ ಭೀತಿ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ದುರಸ್ತಿ ಮಾಡಲಾಗುವುದು
ಪರಿಶೀಲಿಸಿದ್ದೇವೆ. ಯಾವುದೇ ಭಯ ಪಡುವ ಅಪಾಯ ಇಲ್ಲ. ಪಿಲ್ಲರ್‌ನ ಕೆಲವೊಂದು ಕಲ್ಲುಗಳು ಜಾರಿಹೋಗಿದ್ದು 15 ದಿನಗಳ ಒಳಗೆ ತಾತ್ಕಾಲಿಕ ದುರಸ್ತಿ ಕಾರ್ಯ ಆರಂಭವಾಗಲಿದೆ. ಅಲ್ಲದೆ ಬೆಂಗಳೂರಿನಿಂದ ತಜ್ಞರನ್ನು ಕರೆಯಿಸಿ ಸೇತುವೆಯ ಗುಣಮಟ್ಟವನ್ನು ಪರೀಕ್ಷಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು. ಅಂತಹ ಯಾವುದೇ ಅಪಾಯವಿಲ್ಲ.
-ಲಾಯೆಡ್, ಲೋಕೋಪಯೋಗಿ ಅಭಿಯಂತರರು
ಪರಿಶೀಲನೆ
ಸೇತುವೆ ಕೆಳಭಾಗದ ಪಿಲ್ಲರ್‌ಗಳ ಕಲ್ಲುಗಳು ಜಾರಿವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ ಸಲಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
-ರಾಜೇಂದ್ರ, ಪಿ.ಡಿ.ಒ .ಚಾರ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.