ಮರವಂತೆ-ತ್ರಾಸಿ ಕಡಲ್ಕೊರೆತ ತಡೆಗೆ ಪೈಲಟ್ ಯೋಜನೆ
Team Udayavani, Apr 27, 2018, 6:45 AM IST
ಮರವಂತೆ: ಮರವಂತೆಯಲ್ಲಿ ಕಡಲ್ಕೊರೆತಕ್ಕೆ ತಡೆ ಹಾಕುವ ಕಲ್ಲುಗಳು ಜೋಡಣೆ ಕಾರ್ಯ ದಶಕದಿಂದ ಚಾಲ್ತಿಯಲ್ಲಿದೆ. ಆದರೆ ಇದಕ್ಕೆ ನಿರೀಕ್ಷಿತ ಯಶಸ್ಸು ಸಿಗದೇ ಇರುವುದರಿಂದ ಸುಸ್ಥಿರ ಕರಾವಳಿ ತೀರ ಸಂರಕ್ಷಣೆ ಮತ್ತು ನಿರ್ವಹಣೆ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಶಾಶ್ವತ ಪರಿಹಾರವಾಗಿ ಮರವಂತೆ- ತ್ರಾಸಿಯಲ್ಲಿ ಹಾದುಹೋಗುವ ಹೆದ್ದಾರಿಯ ರಕ್ಷಣೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ನೆರವಿನಿಂದ 3.50 ಕಿ.ಮೀ. ಉದ್ದ ಕಡಲ ತೀರದಲ್ಲಿ 88 ಕೋ.ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಒಟ್ಟು 24 ಗ್ರೋಯಿನ್
ಮರವಂತೆ-ತ್ರಾಸಿಯಲ್ಲಿ ಒಟ್ಟು 24 ಗ್ರೋಯಿನ್‌ಗಳು ನಿರ್ಮಾಣವಾಗುತ್ತಿವೆ. 85-90 ಮೀ. ಅಂತರದಲ್ಲಿ ಸಮುದ್ರಕ್ಕೆ ಚಾಚಿಕೊಂಡಂತೆ ನಿರ್ಮಾಣವಾಗಲಿವೆ. ಇವು ಅಲೆಗಳ ಶಕ್ತಿಗುಂದಿಸುವ ಮೂಲಕ ದಂಡೆಯನ್ನು ರಕ್ಷಿಸುತ್ತವೆ. ಜತೆಗೆ ದಂಡೆಗುಂಟ ಮರಳು ಶೇಖರಣೆಯಾಗುವಂತೆ ಮಾಡುತ್ತವೆ.
ಕಲ್ಲುಗಳಿಂದ ಪರಿಹಾರವಿಲ್ಲ!
ಕರಾವಳಿಯಲ್ಲಿ ಕಡಲ್ಕೊರೆತ ಸಾಮಾನ್ಯ ವೆಂಬಂತೆ ಇದೆ. ತ್ರಾಸಿ- ಮರವಂತೆ ಕಡಲ ತೀರ ಹೊರತಾಗಿಲ್ಲ. ಇದಕ್ಕಾಗಿ ದೊಡ್ಡ ಗಾತ್ರದ ಕಲ್ಲುಗಳನ್ನು ಹಾಕಿ ಕಡಲ್ಕೊರೆತ ತಡೆಗೆ ಯತ್ನಿಸಲಾಗುತ್ತಿತ್ತು. ಆದರೆ ಇದು ಹೆಚ್ಚು ಪ್ರಯೋಜನಕಾರಿಯಾಗಿಲ್ಲ. ಕಡಲಿನ ಅಬ್ಬರಕ್ಕೆ ಕಲ್ಲುಗಳು ಪ್ರತಿ ವರ್ಷವೂ ಸಮುದ್ರ ಪಾಲಾಗುತ್ತಿರುವುದು ಮುಂದುವರಿದಿದೆ.
ಗ್ರೋಯಿನ್ (ತಡೆಗೋಡೆ) ವಿಧಾನ
ಇಲ್ಲಿ ಸಮುದ್ರದುದ್ದಕ್ಕೂ ಕಲ್ಲುಗಳನ್ನು ಹಾಕುವ ಬದಲಾಗಿ, ಸಮುದ್ರಕ್ಕೆದುರಾಗಿ ಲಂಬವಾಗಿ ಕಲ್ಲುಗಳನ್ನು ಅಥವಾ ಗೋಡೆಗಳನ್ನು/ವಿಶೇಷವಾದ ಕಾಂಕ್ರೀಟ್ ಸಂರಚನೆಗಳನ್ನು ಹಾಕಲಾಗುತ್ತದೆ. ಇದು ತೀರ ಪ್ರದೇಶಗಳಲ್ಲಿ ಸವಕಳಿ ತಡೆಯುತ್ತದೆ. ಈ ವಿಧಾನ ಮುಂದುವರಿದ ದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಇದರಿಂದ ಮರಳಿನ ದಂಡೆ ವಿಸ್ತಾರಗೊಳ್ಳುತ್ತವೆ ಇದು ಬೀಚ್ ಸೌಂದರ್ಯವನ್ನೂ ವೃದ್ಧಿಸುತ್ತದೆ. ಇಲ್ಲೀಗ ಈ ಮಾದರಿಯ ಕಾಮಗಾರಿ ಶೇ. 30 ಮುಗಿದಿದ್ದು, ಡಿಸೆಂಬರ್ ಅಂತ್ಯಕ್ಕೆ ಯೋಜನೆ ಪೂರ್ಣಗೊಳ್ಳಲಿದೆ.
ಕಾಮಗಾರಿಗೆ ತೊಂದರೆ
ಮರವಂತೆಯ ಕಾಮಗಾರಿ ಕರಾರು ಪ್ರಕಾರ ಮಾರ್ಚ್ ಅಂತ್ಯಕ್ಕೆ ಮುಗಿÓ ಬೇಕಿತ್ತು. ಆದರೆ ಮಳೆಗಾಲದಲ್ಲಿ ಹಾಗೂ ನಂತರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಯೋಜನೆಯಿದೆ.
– ಕಿಶೋರ್ ಕುಮಾರ್,
ಪೈಲಟ್ ಕಾಮಗಾರಿಯ ಡಿಜಿಎಂ
– ಕೃಷ್ಣ ಬಿಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.