ಶೇಡಿಮನೆ – ಕೊಂಜಾಡಿ ರಸ್ತೆಯುದ್ದಕ್ಕೂ ಹೊಂಡ

ಹದಗೆಟ್ಟ ರಸ್ತೆಯಿಂದಾಗಿ 2 ವರ್ಷದ ಹಿಂದೆ ಬಸ್‌ ಸಂಚಾರವೇ ಸ್ಥಗಿತ; ರಸ್ತೆ ದುರಸ್ತಿಗೆ ಆಗ್ರಹ

Team Udayavani, Jan 12, 2020, 4:15 AM IST

n-29

ಗೋಳಿಯಂಗಡಿ: ಈ ರಸ್ತೆಯುದ್ದಕ್ಕೂ ಹೊಂಡಗಳದ್ದೆ ಕಾರುಬಾರು. ರಸ್ತೆ ಹೀಗಿರುವುದರಿಂದ 2 ವರ್ಷಗಳ ಹಿಂದೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ ಕೂಡ ಈಗ ಬರುತ್ತಿಲ್ಲ. ಇದು ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಶೇಡಿಮನೆಯಿಂದ ಕೊಂಜಾಡಿಗೆ ಸಂಪರ್ಕಿಸುವ ಮುಖ್ಯ ರಸ್ತೆಯ ದುಃಸ್ಥಿತಿ. ಸುಮಾರು 3 ಕಿ.ಮೀ. ಉದ್ದದ ಈ ರಸ್ತೆಯ ಬಹುಭಾಗ ಹೊಂಡ – ಗುಂಡಿಗಳೇ ಇವೆ. ಈ ರಸ್ತೆ ದುರಸ್ತಿಯಾಗದೇ 4-5 ವರ್ಷಗಳೇ ಕಳೆದಿವೆ. ಅಲ್ಲಿಂದ ಈವರೆಗೆ ಈ ರಸ್ತೆಯ ಅಭಿವೃದ್ಧಿ ಬಗ್ಗೆ ಯಾರೂ ಕೂಡ ಗಮನವೇ ಹರಿಸಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ಯಾವೆಲ್ಲ ಊರುಗಳು?
ಶೇಡಿಮನೆಯಿಂದ ಆರಂಭವಾಗುವ ಈ ರಸ್ತೆಯೂ ಕೊಂಜಾಡಿಗೆ ಸಂಚರಿಸುವ ಪ್ರಮುಖ ರಸ್ತೆಯಾಗಿದ್ದರೂ, ಆರ್ಡಿ, ಅಮಾಸೆಬೈಲು, ಮಾಂಡಿ ಮೂರುಕೈ, ಮಾಯಾ ಬಜಾರ್‌, ಹೆಬ್ರಿ, ಸಿದ್ದಾಪುರ ಮತ್ತಿತರ ಪ್ರಮುಖ ಊರುಗಳಿಗೆ ಸಂಪರ್ಕ ಕೊಂಡಿ ಇದಾಗಿದೆ. ಹೆಂಗವಳ್ಳಿ, ತೊಂಭತ್ತುವಿಗೂ ಈ ರಸ್ತೆಯ ಮೂಲಕ ಸಂಚರಿಸಬಹುದು.

ಈಗಂತೂ ಬೇಸಗೆ ಕಾಲ. ರಸ್ತೆಯಲ್ಲಿ ಹೊಂಡ – ಗುಂಡಿಗಳಿದ್ದರೂ, ಹೇಗೋ ಜನ ಪ್ರಯಾಸಪಟ್ಟು ಸಂಚರಿಸುತ್ತಾರೆ. ಆದರೆ ಮಳೆಗಾಲದಲ್ಲಂತೂ ಇಲ್ಲೆಲ್ಲ ನೀರು ನಿಂತು ವಾಹನ ಸವಾರರಿಗೆ ಗುಂಡಿಯೇ ಕಾಣದಿರುವ ಸ್ಥಿತಿ ಇಲ್ಲಿನದು.

ಬಸ್‌ ಸಂಚಾರವೇ ಸ್ಥಗಿತ
ಈ ಹಿಂದೆ ಈ ಮಾರ್ಗವಾಗಿ ಸರಕಾರಿ ಬಸ್‌ವೊಂದು ಸಂಚರಿಸುತ್ತಿತ್ತು. ಪ್ರತಿ ದಿನ ಬೆಳಗ್ಗೆ 10.30ಕ್ಕೆ ಮಾಂಡಿ ಮೂರುಕೈ, ಶೇಡಿಮನೆ, ಕೊಂಜಾಡಿ ಆಗಿ ಹೆಬ್ರಿಗೆ ತೆರಳುತ್ತಿತ್ತು. ಆದರೆ ಕಳೆದ 2 ವರ್ಷಗಳಿಂದ ಈ ಹದಗೆಟ್ಟ ರಸ್ತೆಯಿಂದಾಗಿ ಆ ಬಸ್‌ ಕೂಡ ಸ್ಥಗಿತಗೊಂಡಿದೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ.

ಸುತ್ತು ಬಳಸಿ ಪ್ರಯಾಣ
ಹದಗೆಟ್ಟ ರಸ್ತೆಯಿಂದಾಗಿ ಈಗ ಈ ಭಾಗದ ಹೆಚ್ಚಿನ ಜನರು ಶೇಡಿಮನೆ- ಕೊಂಜಾಡಿ ರಸ್ತೆಯಲ್ಲಿ ಬರುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಸುತ್ತು ಬಳಸಿ ಪ್ರಯಾಣಿಸುತ್ತಿದ್ದಾರೆ. ಇದು ಗೋಳಿಯಂಗಡಿ ಅಥವಾ ಶೇಡಿಮನೆಯಿಂದ ಅಮಾಸೆಬೈಲುವಿಗೆ ಹತ್ತಿರದ ಮಾರ್ಗವಾಗಿದ್ದರೂ, ರಸ್ತೆ ಸರಿ ಇಲ್ಲದ ಕಾರಣ ಮಾಂಡಿ ಮೂರುಕೈ, ಆರ್ಡಿಯಾಗಿ ಸಂಚರಿಸಬೇಕಾದ ಅನಿವಾರ್ಯತೆ ಜನರದ್ದಾಗಿದೆ. ಕೇವಲ 3-4 ಕಿ.ಮೀ. ಅಂತರವಿರುವ ಈ ರಸ್ತೆಯ ದುಸ್ಥಿತಿಯಿಂದಾಗಿ 7-8 ಕಿ.ಮೀ. ಕ್ರಮಿಸುವಂತಾಗಿದೆ.

ದುರಸ್ತಿಗೆ ಪ್ರಯತ್ನ
ಶೇಡಿಮನೆ – ಕೊಂಜಾಡಿ ರಸ್ತೆ ದುರಸ್ತಿಗೆ ಕಳೆದ ವರ್ಷ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು 50 ಲಕ್ಷ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದರು. ಆದರೆ ನಬಾರ್ಡ್‌ ಅನುದಾನ ಬಿಡುಗಡೆಯಾಗಿಲ್ಲದ ಕಾರಣ ವಿಳಂಬವಾಗಿದೆ. ಮತ್ತೆ ರಸ್ತೆ ದುರಸ್ತಿಗೆ ಪ್ರಯತ್ನಿಸಲಾಗುವುದು.
-ಸುಪ್ರೀತಾ ಉದಯ ಕುಲಾಲ್‌, ಜಿ.ಪಂ. ಸದಸ್ಯರು

ಹಲವು ವರ್ಷಗಳೇ ಕಳೆದಿವೆ
ಈ ರಸ್ತೆ ರಿಪೇರಿಯಾಗಿ ಹಲವು ವರ್ಷಗಳೇ ಕಳೆದಿವೆ. ಪ್ರತಿ ಮಳೆಗಾಲದಲ್ಲೂ ನಾವು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದೇವೆ. ಕೆಲ ವರ್ಷಗಳ ಹಿಂದೆ ತೇಪೆ ಹಾಕಿದ್ದು, ಬಿಟ್ಟರೆ ಈ ರಸ್ತೆಯ ಅಭಿವೃದ್ಧಿ ಬಗ್ಗೆ ಯಾರೂ ಕೂಡ ಗಮನವೇ ಹರಿಸಿಲ್ಲ. ಈ ಬಾರಿಯಾದರೂ ಮಳೆಗಾಲಕ್ಕೆ ಮುಂಚೆ ರಸ್ತೆ ಅಭಿವೃದ್ಧಿಯಾಗಿ ಈ ಭಾಗದ ಅನೇಕ ಮನೆಗಳಿಗೆ ಅನುಕೂಲವಾಗಲಿ. – ಗಣಪತಿ ಆರ್ಡಿ, ಸ್ಥಳೀಯರು

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

Kundapura: ರಿಕ್ಷಾದಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

Kundapura: ರಿಕ್ಷಾದಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.