ರಾಜ್ಯ ಹೆದ್ದಾರಿಯಲ್ಲೇ ಹೊಂಡ
Team Udayavani, Oct 22, 2019, 5:42 AM IST
ಬಸ್ರೂರು: ಕುಂದಾಪುರ- ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದು ಹೋಗುವ ಕೋಣಿ ಎಚ್.ಎಂ.ಟಿ. ತಿರುವಿನಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡ ಸೃಷ್ಟಿಯಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ರಸ್ತೆಯ ಅಡಿಯಲ್ಲಿ ನೀರಿನ ಪೈಪ್ ಅಳವಡಿಸುವ ಸಂದರ್ಭದಲ್ಲಿ ಅಗೆದು ಹಾಕಿದ್ದರಿಂದ ಈ ಹೊಂಡ ಸೃಷ್ಟಿಯಾಗಿದೆ. ಪೈಪ್ ಅಳವಡಿಸಿದ ಅನಂತರ ಅದನ್ನು ಸರಿಯಾಗಿ ಮುಚ್ಚಿ, ಡಾಮರೀಕರಣ ಮಾಡದ ಕಾರಣ ಹೊಂಡ ಮತ್ತಷ್ಟು ದೊಡ್ಡದಾಗಿದೆ. ಹೊಂಡದಲ್ಲಿ ಮಳೆ ನೀರು ತುಂಬಿ ಅನೇಕ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿದ ನಿದರ್ಶನಗಳೂ ಇವೆ.
ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.