ವಂದೇ ಮಾತರಂ: “ಪ್ಲಾಸ್ಟಿಕ್’ ಮಹಾಮಾರಿಯ ವಿರುದ್ಧದ ಯುದ್ಧ ಕಥನ
Team Udayavani, Sep 30, 2019, 5:10 AM IST
ಕುಂದಾಪುರ: ವಿಫ್‌ಎಕ್ಸ್ ತಾಂತ್ರಿಕತೆ ಉಪಯೋಗಿಸಿ, ಹೊಸತೊಂದು ಪ್ರಯೋಗ ಕುಂದಾಪುರದ ಯುವಜನತೆಯಿಂದಾಗಿದೆ. ಇದು ಅ. 2ರ ಪ್ಲಾಸ್ಟಿಕ್ ವಿರುದ್ಧದ ಸಮರದ ಕಥೆ. ಗಾಂಧಿ ಜಯಂತಿಯಂದು ದೇಶಾದ್ಯಂತ ಸ್ವಚ್ಛ ಭಾರತ ಜಾಗೃತಿ ಅಭಿಯಾನ ನಡೆದಂತೆ ಈ ವರ್ಷ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಲಿದೆ ಇಡೀ ದೇಶ. ಕುಂದಾಪುರದಲ್ಲೂ ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್ ಮುಕ್ತ ವಾತಾವರಣ ಅಭಿಯಾನ ನಡೆಯುತ್ತಿದೆ.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನವರು ಸಮುದ್ರ ತೀರ ಸ್ವಚ್ಛಗೊಳಿಸುವ ಜತೆಗೆ ಪ್ಲಾಸ್ಟಿಕ್ ಸ್ವಚ್ಛತಾ ಜಾಗೃತಿ ಮೂಡಿಸಲು ಅಣಿಯಾಗಿದ್ದಾರೆ.
“ದಿ ಟೇಲ್ ಆಫ್ ವಂದೇ ಮಾತರಂ’ ಈ ಒಂದು ಹೆಸರಿನಲ್ಲಿ ಲೈಫ್ಲೈಕ್ ಪ್ರೊಡಕ್ಷನ್ ಯು ಟ್ಯೂಬ್ ಚಾನಲ್‌ನಲ್ಲಿ ವಂದೇ ಮಾತರಂ ಎಂಬ ಹಾಡಿನೊಂದಿಗೆ ಅ. 1ರಂದು ಸಂಜೆ ಸಾರ್ವಜನಿಕ ಹಿತಾಸಕ್ತಿಯ ಪ್ರಯುಕ್ತ ಬಿಡುಗಡೆಗೊಳ್ಳಲಿದೆ ಒಂದು ಸುಂದರ ಸಂಗೀತ ಸಿನೆಮಾ.
ಕಥಾ ಸಾರಾಂಶ
ಕಥೆಯ ಹಂದರದಲ್ಲಿ ಒಂದಷ್ಟು ಹೊಸತನದ ಗಾಳಿ ಸುಳಿದಾಡುತ್ತದೆ. ಭೂಮಿ (ಕಥೆಯಲ್ಲಿನ ನಾಯಕಿ) ಖಳನಾಯಕ ಪ್ಲಾಸ್ಟಿಕ್ ಎಂಬ ಹೊಸ ಜೀವಿಯ ಕೃತ್ಯಗಳಿಗೆ ಬಲಿಯಾಗಿ, ತನ್ನತನವನ್ನು ಕಳೆದುಕೊಳ್ಳುತ್ತಾ, ರೋಗಿಯಾಗಿ ಬಿಡಿಸಿಕೊಳ್ಳಲು ಒದ್ದಾಡುತ್ತಿರುತ್ತಾಳೆ. ಭೂಮಿ ಕಾಯುವ ದೈವ (ನಮ್ಮ ತಳುನಾಡ ದೈವದಂತೆ) ವಂದೇ ಮಾತರಂ ಹಾಡಿನಲ್ಲಿ ಬರುವ ಸುಂದರ ಭೂಮಿಯ ಜತೆಗಿನ ತನ್ನ ಉತ್ತಮ ಸಮಯವನ್ನು ನೆನಪಿಸಿಕೊಳ್ಳುತಾ , ಈಗ ಕಾಣೆಯಾಗಿ ಹೋದ ತನ್ನ ಸುಂದರಿಯನ್ನು ಊರೆಲ್ಲಾ ಹುಡುಕಾಡುತ್ತದೆ. ಪ್ಲಾಸ್ಟಿಕ್ ಅನ್ನುವ ರಕ್ಕಸ ಮನೆಗಳಿಂದ ಹೊರಬಂದು ಮನುಷ್ಯನ ಕೈ ಮತ್ತು ಕಣ್ಣುಗಳೆದುರೇ ಕಡಲ ಪಾಲಾಗುತ್ತದೆ.
ಬಂತು ಪ್ಲಾಸ್ಟಿಕ್
ಕಡಲಿಂದ ಪ್ಲಾಸ್ಟಿಕ್ ಉಕ್ಕಿ ಹರಿಯುತ್ತಾ, ನಾಯಕಿ ಭೂಮಿಯನ್ನೇ ಪೂರ್ತಿಯಾಗಿ ಕಬಳಿಸಿ ಬಿಡುತ್ತದೆ. ಪ್ರತಿ ಕೈಕಣ್ಣುಗಳು ಪ್ಲಾಸ್ಟಿಕ್ ಎಂಬ ರಕ್ಕಸ ಭಾಗವಾಗಿ ಭೂಮಿಯನ್ನೇ ಮುಳುಗಿಸುವಲ್ಲಿ ಕಾರಣೀಭೂತವಾಗುತ್ತದೆ. ತನ್ನ ಭೂಮಿ ಸಿಗದೆ ಅಳುವ ಭೂಮಿ ಕಾಯುವ ದೆ„ವ ಕೊನೆಯಲ್ಲಿ ಕಾಣುವುದು ಪ್ಲಾಸ್ಟಿಕ್ ಆವೃತ ಭೂಮಿಯನ್ನು. ಅದರ ವಿರುದ್ಧ ಯುದ್ಧ ಸಾರುತ್ತದೆ ಭೂಮಿ ಕಾಯುವ ದೆ„ವ. ದೆ„ವದೊಂದಿಗೆ ಕೈ ಜೋಡಿಸಲು ಪ್ರಾರ್ಥಿಸುವಲ್ಲಿ ಸಂಗೀತ ಸಿನೆಮಾ ಮುಗಿಯುತ್ತದೆ.
ಇಲ್ಲಿ ದೇಶಭಕ್ತಿ ಅನ್ನುವುದು ಭೂಮಿ ಭಕ್ತಿ, ಪ್ರೀತಿ ಆಗಿ ಹೊರಹೊಮ್ಮುತ್ತದೆ. ಅದರ ಸಾಂಕೇತಿಕವಾಗಿ ವಂದೇ ಮಾತರಂ ಹಾಡಿನ ಇನ್ನೊಂದು ರೂಪ ನಿಮ್ಮ ಮುಂದೆ ಬರುತ್ತದೆ. ಇದರಲ್ಲಿ ಡೇನಿಯಲ್ ಮತ್ತು ಸುಹಿತ್ ಸಂಗೀತ ಸಂಕಲನ ಮಾಡಿದ್ದು, ಅಕ್ಷತಾ ಹಾಡಿಗೆ ಧ್ವನಿಯಾಗಿದ್ದಾರೆ. ನಿರ್ದೇಶನ ಯತೀಶ್ ರೈ ಅವರದ್ದಾಗಿದ್ದು ಕಲಾವಿದರಾಗಿ ಶ್ರುತಿ ಜೈನ್ ರೆಂಜಾಳ, ಸತ್ಯನಾರಾಯಣ ಮಂಜ ಅವರು ಭಾಗವಹಿಸಿದ್ದಾರೆ.
ವಿನೂತನ ಪ್ರಯತ್ನ
ಭರತ್ ಕುಂದರ್ ನೇತೃತ್ವದಲ್ಲಿ ಹತ್ತಾರು ವೃತ್ತಿಯಲ್ಲಿರುವ ಸ್ವಯಂಸೇವಕರು ಒಟ್ಟಾಗಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಎಂಬ ಜನಾಂದೋಲನ ಆರಮಭಿಸಿದರು. ಇದು ಸಮುದ್ರ ತಟವನ್ನ ಚೊಕ್ಕಗೊಳಿಸುವಲ್ಲಿ ಹಾಗೂ ಪ್ಲಾಸ್ಟಿಕ್ ವಿರೋಧಿಯಾಗಿ ಕೆಲಸ ಮಾಡುತ್ತಿರುವ ಆಂದೋಲನ. ಇವರು ಲೈಫ್ ಲೈಕ್ ಪ್ರೊಡಕ್ಷನ್ಸ್ ಜತೆ ಸೇರಿ ಈ ವಿಡಿಯೊವನ್ನು ಹೊರತರುತ್ತಿದ್ದಾರೆ. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಪ್ರತಿ ರವಿವಾರ ಸಮುದ್ರ ತೀರದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛತಾ ಆಂದೋಲನ ನಡೆಸುತ್ತಿದೆ.
ಪ್ಲಾಸ್ಟಿಕ್ ವಿರೋಧಿ
ಕುಂದಾಪುರದ ನಾಗರಿಕರ ಸಹಕಾರದಿಂದ ಇಂತಹದೊಂದು ಪ್ರಪಂಚದಾದ್ಯಂತ ಸಾಮಾಜಿಕ ಕಳಕಳಿಯ ಸಣ್ಣ ಪ್ರಯತ್ನ ಮಾಡುತ್ತಿದೆ. ಯುವಕರ ಪ್ರಯತ್ನ ಕಳಕಳಿಗೆ ಹಾಗೂ ಪ್ರಯೋಗದ ಹಿಂದಿನ ಉದ್ದೇಶ ನಿಜಕ್ಕೂ ಅನುಕರಣೀಯ.
-ಡಾ| ರಶ್ಮಿ ಕುಂದಾಪುರ,
ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಸ್ವಯಂಸೇವಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.