16 ಸಾವಿರ ಮಂದಿಗಷ್ಟೇ ಪ್ರಧಾನಿ ಕಿಸಾನ್ ಸಮ್ಮಾನ್
ರಾಜ್ಯ ಸರಕಾರದ ನಿರಾಸಕ್ತಿಯ ಆರೋಪ ಕೇವಲ 16 ಸಾವಿರ ರೈತರಷ್ಟೇ ಶಿಫಾರಸು
Team Udayavani, May 17, 2019, 11:57 AM IST
ಕುಂದಾಪುರ: ಕೇಂದ್ರ ಸರಕಾರ ಡಿ. 1ರಿಂದ ಅನುಷ್ಠಾನ ಮಾಡಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲ ದೇಶದ 2.91 ಕೋಟಿ ರೈತರಿಗೆ ತಲುಪಿದೆ. ಆದರೆ ಈ ಪೈಕಿ ರಾಜ್ಯದ ರೈತರು ಕೇವಲ 16 ಸಾವಿರ ಮಂದಿ.
ರಾಜ್ಯ ಸರಕಾರದ ನಿರಾಸಕ್ತಿಯೇ ಇದಕ್ಕೆ ಕಾರಣ ಎಂಬ ಆಪಾದನೆ ಕೇಳಿಬಂದಿದೆ. ಆರಂಭದಲ್ಲಿ ಕೇವಲ 17 ಮಂದಿ ಮಾತ್ರ ಆಯ್ಕೆಯಾಗಿದ್ದರು ಎನ್ನಲಾಗಿದೆ. ಪ್ರಸ್ತುತ ಹೀಗಾಗಲು ಕಾರಣ ರಾಜ್ಯವೇ ಕೇಂದ್ರವೇ ಎಂಬುದು ಚಾಲ್ತಿಯಲ್ಲಿದೆ.
ರಾಜ್ಯಗಳಿಂದ ಶಿಫಾರಸು
ಮೇ 13ರಂತೆ ಉತ್ತರ ಪ್ರದೇಶ 1 ಕೋಟಿ, ಆಂಧ್ರಪ್ರದೇಶ 32 ಲಕ್ಷ, ಗುಜರಾತ್ 27 ಲಕ್ಷ, ತೆಲಂಗಾಣ 18 ಲಕ್ಷ, ತಮಿಳು ನಾಡು 19 ಲಕ್ಷ, ಮಹಾರಾಷ್ಟ್ರ, 14 ಲಕ್ಷ, ಪಂಜಾಬ್ 11, ಅಸ್ಸಾಂ, ಹರ್ಯಾಣ, ಕೇರಳ ತಲಾ 9 ಲಕ್ಷ, ಒರಿಸ್ಸಾ 8 ಲಕ್ಷ, ಜಾರ್ಖಂಡ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ತಲಾ 4 ಲಕ್ಷ, ಉತ್ತರಾಖಂಡದ ತಲಾ 3 ಲಕ್ಷ ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಕೇಂದ್ರದ ಈ ಮಾಹಿತಿಯಂತೆ ಕನಿಷ್ಠ ಸಂಖ್ಯೆಯ ರೈತರ ಹೆಸರು ಶಿಫಾರಸು ಆದದ್ದು ಕರ್ನಾಟಕದಿಂದ. ಆಗ ರಾಜ್ಯದ 17 ಮಂದಿಯ ಹೆಸರಷ್ಟೇ ಇತ್ತು. ಈಗಲೂ ದೊಡ್ಡ ರಾಜ್ಯಗಳ ಪೈಕಿ ಕನಿಷ್ಠ ರೈತರ ಸಂಖ್ಯೆ ಕರ್ನಾಟಕದ್ದು.
ಇದಕ್ಕಾಗಿ ಅರ್ಜಿ ಸಲ್ಲಿಸಲು ಹಗಲು ರಾತ್ರಿ ಎನ್ನದೇ ರೈತರು ಆರ್‌ಟಿಸಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಕನಿಷ್ಠ ಎಂದರೂ ಕೆಲವು ಕೋಟಿ ಅರ್ಜಿ ಸಲ್ಲಿಕೆಯಾಗಿದೆ ಎನ್ನಲಾಗಿದೆ. ರಾಜ್ಯ ಸರಕಾರ 60 ಸಾವಿರ ರೈತರ ಹೆಸರು ಕಳುಹಿಸಿದೆ. ಎ. 24ರಂದು ವೆಬ್‌ಸೈಟ್ ಪರಿಶೀಲಿಸಿದಾಗ ಎರಡನೆ ಹಂತದ್ದು ಸೇರಿಸಿ ದೇಶದ 2.91 ಕೋಟಿ ರೈತರು ಫಲಾನುಭವಿಗಳಾಗಿದ್ದು, ಕರ್ನಾಟಕದ 16,522 ಮಂದಿ ಆಯ್ಕೆಯಾಗಿದ್ದಾರೆ. ಇವರಲ್ಲಿ ದ.ಕ.ದ 148, ಉಡುಪಿಯ 412, ಚಿಕ್ಕಮಗಳೂರಿನ 226, ಮಡಿಕೇರಿಯ 34, ಶಿವಮೊಗ್ಗದ 717 ಮಂದಿ ಇದ್ದಾರೆ. ಹಾಸನ, ತುಮಕೂರಿನಿಂದ ಅತಿಹೆಚ್ಚು ರೈತರಿದ್ದಾರೆ.
ಕೊನೆಯ ದಿನಾಂಕ
ಡಿ.1ರಿಂದ ಫೆ.1ರ ನಡುವೆ ಅರ್ಜಿ ಸಲ್ಲಿಸಿದ ರೈತರ ಹೆಸರನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿ ಕಳುಹಿಸಬೇಕಿತ್ತು. ವರ್ಷಕ್ಕೆ 6 ಸಾವಿರ ರೂ.ಗಳನ್ನು ರೈತರ ಖಾತೆಗಳಿಗೆ ಕೇಂದ್ರ ಹಂತಹಂತವಾಗಿ ಜಮೆ ಮಾಡಲಿದೆ. ಮಾ.31ಕ್ಕೆ ಮೊದಲ ಹಂತದ ಪಾವತಿ ಗಡುವಾಗಿದ್ದು, 2 ಸಾವಿರ ರೂ. ಪಾವತಿಯಾಗಿದೆ. ಜನರು ಮೈಲುದ್ದ ನಿಂತಾಗಲೂ ಭೂಮಿ ಸರ್ವರ್ ನ ಮಂದಗತಿಯ ಕಾರಣದಿಂದ ಆರ್‌ಟಿಸಿ ಸಿಗದಂತಾಗಿತ್ತು ಎಂಬ ದೂರು ವ್ಯಕ್ತವಾಗಿದೆ.
ಜೇಟ್ಲಿ ಟ್ವೀಟ್
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಟ್ವಿಟರ್‌ನಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ದಿಲ್ಲಿ, ಪ.ಬಂಗಾಲ ಮತ್ತು ಕರ್ನಾಟಕ ಸರಕಾರಗಳು ರೈತರ ಹೆಸರು ನೀಡದೆ ಯೋಜನೆಗೆ ಅಸಹಕಾರ ನೀಡಿವೆ. ಯೋಜನೆ ಇದರಿಂದಾಗಿ ಈ ರಾಜ್ಯಗಳ ಜನರಿಗೆ ತಲುಪದಂತಾಗಿದೆ ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು. ಕರ್ನಾಟಕ 60 ಸಾವಿರ ರೈತರ ಹೆಸರು ಕಳುಹಿಸಿದೆ, ಮಧ್ಯಪ್ರದೇಶ 298 ರೈತರ ಹೆಸರು ಕಳುಹಿಸಿದ್ದರೆ, ಪ. ಬಂಗಾಲ ಹೆಸರು ಕಳುಹಿಸಿಲ್ಲ ಎಂಬ ಟ್ವೀಟ್ ಇದೆ.
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.