ವರದಿ ಜಾರಿ ಬದಲು ಸಾಮೂಹಿಕವಾಗಿ ವಿಷ ನೀಡಿ: ಸತೀಶ ಶೆಟ್ಟಿ
Team Udayavani, Mar 10, 2017, 2:41 PM IST
ಹೆಬ್ರಿ: ಗ್ರಾಮೀಣ ಜನರ ಜೀವನಕ್ಕೆ ಮಾರಕವಾದ ಕಸ್ತೂರಿರಂಗನ್ ವರದಿಯ ಅನುಷ್ಠಾನದಿಂದ ಈ ಭಾಗದ ಜನತೆಗೆ ಭಯ ಹುಟ್ಟಿದೆ, ಈಗಾಗಲೇ ಮುಟ್ಲುಪಾಡಿಯಲ್ಲಿ 2 ಕುಟುಂಬಗಳು ಪುನರ್ವಸತಿ ಯೋಜನೆಯಡಿ ಪರಿಹಾರ ಪಡೆದು ಬೇರೆ ಊರಿಗೆ ಹೋಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆಸಿ ಜನಜೀವನಕ್ಕೆ ತೊಂದರೆಯಾದ ವರದಿ ಬೇಡ ಎಂದು ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗದೆ ಈಗ ವರದಿಯನ್ನು ಜಾರಿ ಮಾಡುವ ಬದಲು ನಮ್ಮನ್ನು ಸಾಮೂಹಿಕವಾಗಿ ವಿಷ ನೀಡಿ ಕೊಲ್ಲಿ ಎಂದು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ ಅವರು ಹೇಳಿದರು.
ಅವರು ಮಾ. 7ರಂದು ಮುಟ್ಲುಪಾಡಿ ಅರ್ಧ ನಾರೀಶ್ವರ ದೇವಸ್ಥಾನದಲ್ಲಿ ನಡೆದ ಕಸ್ತೂರಿರಂಗನ್ ವರದಿ ಅನುಷ್ಠಾನ ಮತ್ತು ಪುನರ್‌ವಸತಿ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಪರವಾಗಿ ಅಹವಾಲು ಸಲ್ಲಿಸಿ ಮಾತನಾಡಿದರು.
ತಪ್ಪು ಮಾಹಿತಿ ನೀಡಿದರೆ ಕ್ರಿಮಿನಲ್ ಕೇಸು ಹುಲಿ ಯೋಜನೆ ಮತ್ತು ಕಸ್ತೂರಿರಂಗನ್ ವರದಿಯ ಅನುಷ್ಠಾನದ ಕುರಿತು ಸರಕಾರದಿಂದ ಈ ಕ್ಷಣದ ವರೆಗೆ ಯಾವುದೇ ಅಧಿಸೂಚನೆ ಬಂದಿಲ್ಲ, ಕಸ್ತೂರಿರಂಗನ್ ವರದಿಯು ಪರಿಸರ ಮತ್ತು ಪಶ್ಚಿಮಘಟ್ಟದ ಸಂರಕ್ಷಣೆಗೆ ತಜ್ಞರ ಸಮಿತಿಯು ಸರ್ಕಾರಕ್ಕೆ ನೀಡಿದ ವರದಿ, ಇದರಿಂದ ಜನಜೀವನಕ್ಕೆ ಯಾವುದೇ ತೊಂದರೆ ಇಲ್ಲ, ಜನ ಭಯ ಪಡುವ ಅಗತ್ಯ ಇಲ್ಲ, ಜನ ಬಯಸಿದರೆ ಪುನರ್‌ವಸತಿ ನೀಡಿ ಪರಿಹಾರ ನೀಡುವ ಯೋಜನೆ ಸರಕಾರ ಮಾಡುತ್ತದೆ. ಆದರೆ ಜನತೆಗೆ ತಪ್ಪು ಮಾಹಿತಿ ನೀಡಿ, ಪರಿಹಾರ ನೀಡುತ್ತೇವೆ ಎಂದು ಮಧ್ಯಸ್ಥಿಕೆ ವಹಿಸಿ ಜನರಿಗೆ ಅನ್ಯಾಯ ಮಾಡುವುದು ಗಮನಕ್ಕೆ ಬಂದರೆ ಅಂಥವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದು ಕಾರ್ಕಳ ತಹಶೀಲ್ದಾರ್ ಟಿ.ಜೆ. ಗುರುಪ್ರಸಾದ್ ಎಚ್ಚರಿಕೆ ನೀಡಿದರು.
ಈ ಸಭೆಯಲ್ಲಿ ಅರಣ್ಯ ಇಲಾಖೆಯ ಎ.ಎ. ಗೋಪಾಲ್, ಕೃಷಿ ಇಲಾಖೆಯ ರೂಪಾ ಮಾಡ, ತೋಟಗಾರಿಕೆಯ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ವಿಜಯ ಕುಮಾರ್, ಕಂದಾಯ ನಿರೀಕ್ಷಕ ಮಂಜುನಾಥ ನಾಯಕ್, ಜಿ. ಪಂ. ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ವರಂಗ ಗ್ರಾ.ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ, ಸುದೀಪ ಅಜಿಲ, ಹರಿಶ್ಚಂದ್ರ ತೆಂಡೂಲ್ಕರ್, ಸಮೃದ್ಧಿ ಪ್ರಕಾಶ್ ಶೆಟ್ಟಿ, ರಾಜೇಶ ಮಡಿವಾಳ್, ಸುಂದರ ಶೆಟ್ಟಿ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ವೈದ್ಯಕೀಯ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚನೆ
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.