ಉದಯವಾಣಿ ಹೆಸರು ದುರ್ಬಳಕೆ: ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು
Team Udayavani, May 11, 2018, 8:55 AM IST
ಮಣಿಪಾಲ: ಪತ್ರಿಕೆಯ ಹೆಸರು ಮತ್ತು ವಿನ್ಯಾಸದ ಕೆಲಭಾಗವನ್ನು ದುರ್ಬಳಕೆ ಮಾಡಿಕೊಂಡು ಕೆಲವು ಕಿಡಿಗೇಡಿಗಳು ಚುನಾವಣಾ ತಂತ್ರವಾಗಿ ಹಾಗೂ ರಾಜಕೀಯ ದುರುದ್ದೇಶದಿಂದ ಬಿಲ್ಲವ ಸಮುದಾಯದ ಬಗ್ಗೆ ನಕಲಿ ಸುದ್ದಿ ಸೃಷ್ಟಿಸಿ ಫೇಸ್ಬುಕ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟು ಪತ್ರಿಕೆಯ ಘನತೆಗೆ ಕುಂದು ತಂದಿರುವುದರ ವಿರುದ್ಧ ಉದಯವಾಣಿ ಪತ್ರಿಕಾ ಸಂಸ್ಥೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಒಂದು ನಿರ್ದಿಷ್ಟ ಸಮುದಾಯದ ಭಾವನೆಗೆ ಧಕ್ಕೆ ತರುವಂತೆ ರಾಜಕೀಯ ಮುಖಂಡರ ಹೇಳಿಕೆ ನೀಡಿ ನಿಂದಿಸಿದ್ದು, ಸುಳ್ಳು ಮಾಹಿತಿ ಮೂಲಕ ಜನರನ್ನು ದಾರಿ ತಪ್ಪಿಸಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ. ಇದು ಪತ್ರಿಕೆಯ ಹೆಸರನ್ನು ಕೆಡಿಸುವ ಪ್ರಯತ್ನ ಎಂದು ಉದಯವಾಣಿಯ ಕಾನೂನು ಘಟಕದ ಅಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ. ಹಾಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಕಠಿಣ ಕಾನೂನು ಕ್ರಮಕೈಗೊಳ್ಳುವ ಮೂಲಕ ಮುಂದೆ ಇಂಥ ಕೃತ್ಯಗಳು ಮರುಕಳಿಸದಂತೆ ತಡೆಯಬೇಕು ಎಂದು ಮನವಿ ಮಾಡಲಾಗಿದೆ. ಮೇ 9ರಂದು ಪತ್ರಿಕೆಯಲ್ಲಿ ವರದಿ ಬಂದ ಹಾಗೆ ನಕಲಿ ಸುದ್ದಿ ಸೃಷ್ಟಿಸಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಡಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.