ಪೊಲೀಸ್ ಚೆಕ್‌ಪೋಸ್ಟ್ ಸಾಸ್ತಾನಕ್ಕೆ ಸ್ಥಳಾಂತರ
Team Udayavani, Apr 7, 2018, 7:00 AM IST
ಕೋಟ: ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ವಾಹನಗಳ ತಪಾಸಾಣೆಗಾಗಿ ಈ ಹಿಂದೆ ತೆಕ್ಕಟ್ಟೆಯಲ್ಲಿ ಸ್ಥಾಪಿಸಿದ್ದ ಪೊಲೀಸ್ ತಪಾಸಣೆ ಕೇಂದ್ರ ಶುಕ್ರವಾರದಿಂದ ಸಾಸ್ತಾನಕ್ಕೆ ಸ್ಥಳಾಂತರಗೊಂಡಿದೆ. ತೆಕ್ಕಟ್ಟೆಯಲ್ಲಿ ಟ್ರಾಫಿಕ್, ಅಪಘಾತ ಮುಂತಾದ ಸಮಸ್ಯೆಗಳಾದ್ದರಿಂದ ಟೋಲ್‌ಗೇಟ್ ಬಳಿ ಚೆಕ್‌ಪೋಸ್ಟ್ ಸ್ಥಾಪಿಸಿದರೆ ಅನುಕೂಲವಾಗಲಿದೆ ಎನ್ನುವ ನಿರ್ಧಾರಕ್ಕೆ ಬರಲಾಗಿದೆ.
ಗುರುವಾರ ಸಂಜೆ ಕುಂದಾಪುರ ಕ್ಷೇತ್ರದ ಚುನಾವಣಾಧಿಕಾರಿ ಭೂಬಾಲನ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್‌ಚಂದ್ರ, ಕುಂದಾಪುರದ ಪೊಲೀಸ್ ಉಪಾಧೀಕ್ಷಕ ದಿನೇಶ್ ಕುಮಾರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ್, ಕೋಟ ಪೊಲೀಸ್ ಉಪ ನಿರೀಕ್ಷಕ ಸಂತೋಷ ಕಾಯ್ಕಿಣಿ ಮುಂತಾದವರು ಟೋಲ್‌ಗೇಟ್ ಬಳಿ ತಪಾಸಣೆ ನಡೆಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸ್ಥಳಾಂತರ ಗೊಳಿಸಿದ್ದಾರೆ.
ಕಟ್ಟುನಿಟ್ಟಿನ ತಪಾಸಣೆ
ತಪಾಸಣೆಗಾಗಿ 4 ಸಿ.ಆರ್. ಪಿ.ಎಫ್. ಯೋಧರು, ಮೂವರು ಪೊಲೀಸ್ ಸಿಬಂದಿಯನ್ನು ನೇಮಕ ಮಾಡಿದ್ದು, ಕುಂದಾಪುರ-ಉಡುಪಿ ಮಾರ್ಗವಾಗಿ ಸಂಚರಿಸುವ ಬಸ್ಸು, ಲಾರಿ, ಆ್ಯಂಬುಲೆನ್ಸ್ ಮುಂತಾದ ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಸಿಬಂದಿ 8 ಗಂಟೆಯ ಕಾಲ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹಲವು ಒಳ ದಾರಿಗಳು
ಸಾಸ್ತಾನ ಚೆಕ್‌ಪೋಸ್ಟ್ ಅಕ್ಕ-ಪಕ್ಕದಲ್ಲಿ ಕೋಟ-ಗೋಳಿಯಂಗಡಿ ರಸ್ತೆ, ಕಾರ್ಕಡ-ಕಾವಡಿ ರಸ್ತೆ ಮೂಲಕ ನೇರವಾಗಿ ಬ್ರಹ್ಮಾವರ ತಲುಪಬಹುದಾಗಿದೆ ಹಾಗೂ ಸಾಲಿಗ್ರಾಮ-ಪಾರಂಪಳ್ಳಿ ಕೋಡಿ ರಸ್ತೆಯ ಮೂಲಕ ಚೆಕ್‌ಪೋಸ್ಟ್ ತಪ್ಪಿಸಿ ರಾಷ್ಟ್ರೀಯ ಹೆದ್ದಾರಿ ತಲುಪಬಹುದಾಗಿದೆ. ಹೀಗಾಗಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಇದು ಸ್ವಲ್ಪ ತೊಡಕಾಗಬಹುದು ಎನ್ನುವ ಅಭಿಪ್ರಾಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.