ಪೊಲೀಸ್‌ ಇಲಾಖೆಗೆ  ಜನರ ಸಹಕಾರ ಅಗತ್ಯ: ಕೆ.ಟಿ. ಬಾಲಕೃಷ್ಣ

Team Udayavani, Jul 20, 2017, 6:00 AM IST

kt-balakrishna.jpg

ಕಾರ್ಕಳ: ಜನರ ಸಹಕಾರವಿಲ್ಲದೇ ಪೊಲೀಸ್‌ ಇಲಾಖೆ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ. ಪೊಲೀಸ್‌ ಬೀಟ್‌ ವ್ಯವಸ್ಥೆ ಜನರ ಸಹಕಾರದಿಂದಲೇ ಸತತವಾಗಿ ಮುನ್ನಡೆ ಯುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಕೆ.ಟಿ. ಬಾಲಕೃಷ್ಣ ಹೇಳಿದ್ದಾರೆ.

ಅವರು ಬುಧವಾರ ಗ್ಯಾಲಕ್ಸಿ ಸಭಾಭವನದಲ್ಲಿ ಜರಗಿದ ಕಾರ್ಕಳ ವೃತ್ತದ ಪೊಲೀಸ್‌ ಠಾಣೆಗಳ ಪರಿಷ್ಕೃತ ಉಪಗಸ್ತು, ನಾಗರಿಕ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವ್ಯಕ್ತಿಗತವಾಗಿ ಪೊಲೀಸ್‌ ಅಧಿಕಾರಿಯೊಬ್ಬ ವ್ಯವಸ್ಥೆಯನ್ನು ಮುನ್ನಡೆಯಲು ಸಾಧ್ಯವಿಲ್ಲ, ಪೊಲೀಸ್‌ ಸಿಬಂದಿ ಹಾಗೂ ಜನರಿಂದಲೇ ವ್ಯವಸ್ಥೆಗೆ ವೇಗ ಸಿಗುತ್ತದೆ. ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪೊಲೀಸ್‌ ಬೀಟ್‌ ವ್ಯವಸ್ಥೆಯನ್ನು ಆರಂಭಿಸಲಾಗಿದೆ.ಸಣ್ಣ ಪುಟ್ಟ ಊರುಗಳಲ್ಲಿ ಬೀಟ್‌ ಸದಸ್ಯರೇ ಸಮಸ್ಯೆಗಳನ್ನು ಪರಿಹರಿಸಿದ ಉದಾಹರಣೆ ಇದೆ. ಈ ನಿಟ್ಟಿನಲ್ಲಿ ಬೀಟ್‌ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ ಎಂದರು.

ಪೊಲೀಸ್‌ ಠಾಣೆಗಳ ಬಾಗಿಲು ಒಮ್ಮೆ ತೆರೆದುಕೊಂಡರೆ ಅದು ಮುಚ್ಚುವುದಿಲ್ಲ. ಇತರ ಸರಕಾರಿ ಕಚೇರಿಗಳ ಹಾಗೇ ಸಮಯವಾದ ಕೂಡಲೇ ಬಾಗಿಲು ಮುಚ್ಚಿ ಹೋಗುವ ಪರಿಸ್ಥಿತಿ ಠಾಣೆಗಳಿಗಿಲ್ಲ. ದಿನದ 24 ಗಂಟೆ ಸಾರ್ವಜನಿಕರ ಸೇವೆಯಾಗಿ ಠಾಣೆಗಳು ಸ್ಪಂದಿಸುತ್ತದೆ ಎಂದವರು ಹೇಳಿದರು.

ತಾಲೂಕು ಗ್ರಾಮಾಂತರ ಠಾಣೆಯ, ನಗರ ಠಾಣೆಯ ಅಧಿಕಾರಿಗಳು ಸಿಬಂದಿ ಉಪಸ್ಥಿತರಿದ್ದರು. ಡಿವೈಎಸ್ಪಿ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶುಭದ್‌ ರಾವ್‌, ಶೋಧನ್‌ ಶೆಟ್ಟಿ, ಪುಟ್ಟಣ್ಣ ಭಟ್‌ ಅನ್ನಿಸಿಕೆ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಬೀಟ್‌ ಸದಸ್ಯ ರೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸಂವಾದ,ನಾಗರಿಕ ಸಮಿತಿ ಸದಸ್ಯರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ನಡೆಯಿತು.

ನಗರ ಠಾಣೆಯಲ್ಲಿ ಸಿಬಂದಿಯ ಕೊರತೆ ಇರುವುದು ಕಂಡುಬರುತ್ತಿದೆ. ಜಾತ್ರಾ ಸಮಯ ದಲ್ಲಿ ಇದರಿಂದ ಸಾರ್ವಜನಿಕ ಭದ್ರತೆಗೆ ತ್ರಾಸವಾಗುತ್ತದೆ.ಈ ಕುರಿತು ಕ್ರಮ ಕ್ರಮ ಗೊಳ್ಳುವಂತೆ ಗಿರಿಧರ್‌ ನಾಯಕ್‌ ಹೇಳಿದರು.

ಬಜಗೋಳಿಯಲ್ಲಿ ಠಾಣೆಗೆ ಮನವಿ
ಮುಡಾರು, ಮಾಳ, ಹೊಸ್ಮಾರು ಪ್ರದೇಶ ವನ್ನು ಸಂದಿಸುವ ಮುಖ್ಯ ಪೇಟೆಯಾದ ಬಜಗೋಳಿಯಲ್ಲಿ ಪೊಲೀಸ್‌ ಠಾಣೆಯನ್ನು ಆರಂಭಿಸುವಂತೆ ಮುಡಾರು ಗ್ರಾ.ಪಂ. ಹಾಗೂ ಸಾರ್ವಜನಿಕರ ಪರವಾಗಿ ಅಧೀಕ್ಷಕರಾದ ಕೆ.ಟಿ. ಬಾಲಕೃಷ್ಣ ಅವರಿಗೆ ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಮನವಿ ಸಲ್ಲಿಸಿದರು.
ಕೃಷ್ಣಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.ಕಾರ್ಕಳ ನಗರ ಠಾಣಾಧಿಕಾರಿ ರವಿ ವಂದಿಸಿದರು. 

ನಕಲಿ ಗೋರಕ್ಷಕರನ್ನು ಹಿಡಿಯುವ ಕಾರ್ಯ ಪೊಲೀಸರೇ ಮಾಡಲಿ
ಗ್ರಾಮಂತರ ಪ್ರದೇಶದಲ್ಲಿ  ನಕಲಿ ಗೋರಕ್ಷರನ್ನು ಹಿಡಿಯುವ ಕೆಲಸವನ್ನು ಪೊಲೀಸರೇ ಮಾಡಬೇಕು. ಇದಕ್ಕೋಸ್ಕರ ರಾತ್ರಿ ಗಸ್ತು ಹಾಗೂ ನಾಕಾಬಂಧಿ ನಡೆಸಬೇಕು. ಈ ಜವಾಬ್ದಾರಿಯನ್ನು ನಾಗರಿಕ ಸದಸ್ಯರಿಗೆ ಕೊಡುವುದು ಬೇಡ ನಾಗರಿಕ ಚೀಟಿಯನ್ನು ತೋರಿಸಿ ಕೆಲವು ಸದಸ್ಯರು ತಾವೂ ಪೊಲೀಸ್‌ ಇಲಾಖೆಗೆ ಸೇರಿದವರು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ನೀರೆ ಕೃಷ್ಣ ಶೆಟ್ಟಿ ಸಾರ್ವಜನಿಕ ಸಂವಾದದಲ್ಲಿ ಪ್ರಶ್ನಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಟಿ. ಬಾಲಕೃಷ್ಣ ಅವರು, ಗುರುತಿನ ಚೀಟಿ ಅಜೀವ ಸದಸ್ಯತ್ವ ಹೊಂದಿಲ್ಲ. ಗುರುತಿನ ಚೀಟಿ ಲೈಸೆನ್ಸ್‌ ತರ ಕೆಲಸ ಮಾಡುವುದಿಲ್ಲ. ಇದೊಂದು ತಾತ್ಕಾಲಿಕ ಹಕ್ಕು ಹೊರತು ಅಧಿಕಾರ ದುರ್ಬಳಕೆಗೆ ಕೊಡುವ ಸೌಲಭ್ಯವಲ್ಲ. ಆ ರೀತಿ ಮಾಡಿದರೆ ಗುರುತಿನ ಚೀಟಿಯನ್ನು ರದ್ದುಗೊಳಿಸುವ ಹಕ್ಕು ಇಲಾಖೆಗಿದೆ ಎಂದರು.

ಟಾಪ್ ನ್ಯೂಸ್

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Suilla

Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

missing

Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.