Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು
Team Udayavani, Mar 28, 2024, 7:43 PM IST
ಉಡುಪಿ: ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಕರೆಮಾಡಿ ಜೀವಬೆದರಿಕೆ ಹಾಕಿರುವುದು ಹಾಗೂ ಹಲ್ಲೆ ನಡೆಸಿದ ಕಾರಣಕ್ಕೆ ಆರೋಪಿಯ ವಿರುದ್ಧ ಉಡುಪಿ ನಗರ ಠಾಣೆ ಹಾಗೂ ಕೋಟ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಮರಿಗೌಡ ಮಾ. 24ರಂದು ರಾತ್ರಿ ಠಾಣಾ ಪ್ರಭಾರ ಕರ್ತವ್ಯದಲ್ಲಿರುವಾಗ ಉಡುಪಿ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಕಲ್ಸಂಕ ಕಡೆಗೆ ಹೋಗುವ ಆಮ್ನಿ ಕಾರೊಂದರಲ್ಲಿ ಸುಮಾರು 4 ಜನರು ಸಿಟಿ ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಶಾಪ್‌ವೊಂದರ ಎದುರು ರಸ್ತೆ ಬದಿಯಲ್ಲಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಬಿಯರ್ ಬಾಟಲಿ ಹಾಗೂ ರಾಡ್‌ಗಳನ್ನು ಎಸೆದು ಹೋಗಿದ್ದಾರೆ. ಅಲ್ಲದೆ ಇದೇ ವಠಾರದಲ್ಲಿ 2-3 ಬಾರೀ ಸುತ್ತಾಡುತ್ತಿದ್ದ ಬಗ್ಗೆ ಲಭಿಸಿದ ಮಾಹಿತಿ ಮೇರೆಗೆ ಆ ವಾಹನ ಮಾಲಕನಲ್ಲಿ ವಿಚಾರಿಸಲಾಗಿತ್ತು. ಬಳಿಕ ಆರೋಪಿ ಆದಮ್ ಎಂಬಾತ ಮರಿಗೌಡ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅದೇ ಫೋನ್‌ನಲ್ಲಿ ಮತ್ತೂರ್ವ ಆರೋಪಿ ಕೂಡ ಬೆದರಿಕೆ ಹಾಕಿದ್ದಾನೆ. ಬಳಿಕ ಮಾ. 25ಹಾಗೂ 26ರಂದು ಆರೋಪಿ ಅದಮ್ ಪುನಃ ಕರೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮರಿಗೌಡ ಅವರು ಉಡುಪಿನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನೋಟಿಸ್ ನೀಡಲು ಹೋದಾಗ ಹಲ್ಲೆ:
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 27ರಂದು ಆರೋಪಿಗೆ ನೋಟಿಸ್ ನೀಡಲು ಹೋದಾಗ ಹಲ್ಲೆ ನಡೆಸಿದ್ದಾನೆ. ಆರೋಪಿಯು ಕೋಟ ಠಾಣೆ ವ್ಯಾಪ್ತಿಯವನಾಗಿದ್ದು, ಸಾಲಿಗ್ರಾಮದ ಬಳಿ ಹೊಟೇಲೊಂದರಲ್ಲಿದ್ದಾನೆ. ಉಡುಪಿ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ಮಾಹಿತಿ ತಿಳಿಸಿದಾಗ ಆರೋಪಿಯು ನೋಟಿಸನ್ನು ತಿರಸ್ಕರಿಸಿ ಮರಿಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿ ಒಮ್ಮೆಲೆ ಕೈಯಿಂದ ಹೊಟ್ಟೆಗೆ ಹಾಗೂ ಬಲ ಕೆನ್ನೆಗೆ ಹೊಡೆದು ದೂಡಿದ್ದಾನೆ. ಬಿಡಿಸಲು ಹೋದ ಸಿಬಂದಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಓಡಿಹೋಗಿದ್ದಾನೆ. ಆರೋಪಿಯ ಈ ಕೃತ್ಯಕ್ಕೆ ಹೊಟೇಲ್‌ನಲ್ಲಿದ್ದ ಇಮ್ತಿಯಾಝ್ ಎಂಬಾತನೂ ಸಹಕರಿಸಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗೆ ಡ್ರಗ್ಸ್ ನಂಟು?:
ಘಟನೆ ನಡೆದ ದಿನದಂದು ಆತ ಬೇರೊಬ್ಬರ ವಾಹನ ಪಡೆದುಕೊಂಡು ಮಲ್ಪೆಗೆ ಹೋಗುವುದಾಗಿ ತಿಳಿಸಿದ್ದಾನೆ. ಅಲ್ಲಿಂದ ಮದ್ಯ ಹಾಗೂ ಅಮಲು ಪದಾರ್ಥ ಸೇವಿಸಿಕೊಂಡು ನಗರದಲ್ಲಿ ದಾಂಧಲೆ ನಡೆಸಿದ್ದಲ್ಲದೆ ಪೊಲೀಸರಿಗೂ ಬೆದರಿಕೆ ಹಾಕಿದ್ದಾನೆ. ವಾಹನದಲ್ಲಿ ಹಲವಾರು ಮದ್ಯದ ಬಾಟಲಿಗಳೂ ಇತ್ತೆಂದು ಹೇಳಲಾಗುತ್ತಿದೆ. ಅಲ್ಲದೆ ಆರೋಪಿಯು ಮಾದಕ ದ್ರವ್ಯ ಸೇವಿಸಿದ್ದಾನೆಯೇ ಎಂಬ ಬಗ್ಗೆ ತಪಾಸಣೆ ನಡೆಸಲು ಉದ್ದೇಶಿಸಲಾಗಿದೆ. ಪರಾರಿಯಾಗಿರುವ ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.