ರಾಜಕೀಯ ಸ್ವಾತಂತ್ರ್ಯದಿಂದ ರಾಮರಾಜ್ಯ, ಸ್ವರಾಜ್ಯದಿಂದ ಸುರಾಜ್ಯ: ಶ್ರೀರಾಜ್‌ ಗುಡಿ


Team Udayavani, Oct 3, 2019, 5:45 AM IST

0210UDKS1

ಉಡುಪಿ: ರಾಜಕೀಯ ಸ್ವಾತಂತ್ರ್ಯದಿಂದ ರಾಮರಾಜ್ಯವೂ, ಗಾಂಧೀಜಿಯವರ ಸ್ವರಾಜ್ಯ ಕಲ್ಪನೆ ಯಿಂದ ಗ್ರಾಮೀಣ ಬದುಕಿನ ಸುರಾಜ್ಯವೂ ಕೈಗೂಡುವಂತಾಗಬೇಕು ಎಂದು ಮಣಿಪಾಲದ ಸ್ಕೂಲ್‌ ಆಫ್ ಕಮ್ಯುನಿಕೇಶನ್‌ನ ಸಹಾಯಕ ಪ್ರಾಧ್ಯಾಪಕ ಶ್ರೀರಾಜ್‌ ಗುಡಿ ಆಶಯ ವ್ಯಕ್ತಪಡಿಸಿದರು.

ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದಿಂದ ಬುಧವಾರ ಆಯೋಜಿಸಿದ ಗಾಂಧಿ ಜಯಂತಿಯಂದು ಪ್ರಧಾನ ಉಪನ್ಯಾಸ ನೀಡಿದ ಅವರು ಪತ್ರಕರ್ತ, ರಾಜಕಾರಣಿ, ಮುತ್ಸದ್ದಿ, ಸಾಮಾಜಿಕ ಸುಧಾರಣೆಕಾರ, ಆರ್ಥಿಕ ತಜ್ಞ, ಪರಿಸರವಾದಿ, ಆರೋಗ್ಯದ ವಿಷಯದಲ್ಲಿ ವೈದ್ಯ ಹೀಗೆ ಅನೇಕಾನೇಕ ಬಗೆಗಳಲ್ಲಿ ಗಾಂಧಿಯವರನ್ನು ಅರ್ಥೈಸಬಹುದು, ಕಣ್ಣು ತೆರೆದು ನೋಡಿದರೆ ಬೇರೆ ಬೇರೆ ತೆರನಾದ ಗಾಂಧಿ ಕಾಣಿಸಿ ಕೊಳ್ಳುತ್ತಾರೆ ಎಂದರು.

ಗಾಂಧಿಯವರು ಸ್ವಾತಂತ್ರ್ಯ ಎನ್ನುವು ದನ್ನು ಸ್ವರಾಜ್ಯ (ಸೆಲ್ಫ್ ರೂಲ್‌) ಎಂದು ನೋಡಿದರು. ನಮಗೆ ನಾವೇ ಆಡಳಿತವನ್ನು ಮಾಡುವ ಬಗೆ ಇದು. ಈಗ ಸಿಕ್ಕಿದ ರಾಜಕೀಯ ಸ್ವಾತಂತ್ರ್ಯವನ್ನು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಲಿಕ್ಕಾಗಿ ಗಾಂಧಿ ಪರಿಗಣಿಸಿದರು. ಸ್ವರಾಜ್ಯವನ್ನು ರಾಜಕೀಯ ಶಾಸ್ತ್ರವಾಗಿ ನೋಡದೆ ವ್ಯಕ್ತಿಗತವಾಗಿ ನೋಡ ಬೇಕೆಂದು ಹೇಳುತ್ತಿದ್ದರು. ಕೆಲವು ಬಾರಿ ಪ್ರಜಾಪ್ರಭುತ್ವದಲ್ಲಿ ನಿರಂಕುಶತೆಯೂ ಬರಬಹುದು, ನಾವೇ ಚುನಾಯಿಸಿದ ವ್ಯಕ್ತಿಗಳಿಗೆ ಅಹಂಕಾರ ಬಂದಾಗ ಅವರನ್ನು ಪ್ರಶ್ನಿಸುವ ಆತ್ಮಾನುಶಾಸನ ವನ್ನು ಅಳವಡಿಸಿದರೆ ಪ್ರಶ್ನಿಸುವ ಅಧಿಕಾರ ಬರುತ್ತದೆ ಎಂದು ಗಾಂಧಿ ನಂಬಿದ್ದರು ಎಂದು ಗುಡಿ ಹೇಳಿದರು.

ಗ್ರಾಮೀಣ ಭಾಗದ ಸುರಾಜ್ಯ ಸ್ಥಾಪನೆಯಾಗಬೇಕಾದರೆ ಅಲ್ಲಲ್ಲಿ ಸ್ಥಳೀಯವಾಗಿ ಉದ್ಯೋಗ ದೊರಕ ಬೇಕೆಂಬ ಕಲ್ಪನೆ ಅವರಿಗಿತ್ತು. ಉದಾಹರಣೆಗೆ ಇಲ್ಲಿನ ನೇಕಾರಿಕೆ ನಶಿಸುತ್ತಿದೆ. ನಾವು ನಿತ್ಯ ಖಾದಿಧಾರಿ ಗಳಾಗದಿದ್ದರೂ ವರ್ಷಕ್ಕೊಮ್ಮೆ ಸ್ಥಳೀಯವಾಗಿ ತಯಾರಾದ ಬಟ್ಟೆ ಖರೀದಿಸಿದರೂ ಸಾಕು. ಸ್ವಾತಂತ್ರ್ಯ, ಸ್ವರಾಜ್ಯ, ಸುರಾಜ್ಯವೆಂದರೆ ನನ್ನ ಸಮಾಜ, ನನ್ನ ಊರಿನ ಜನರಿಗೆ ಉದ್ಯೋಗ ಸಿಗುವಂತಹ ಮಾನಸಿಕತೆ ಬೆಳೆಯಬೇಕು. ದೂರದ ಅಮೆರಿಕಕ್ಕೆ ಹೋಗುವ ಬದಲು ಗ್ರಾಮಗಳಲ್ಲಿ ಅದನ್ನೇ ಕಾಣುವ ದಿನಗಳು ಬರಬೇಕಾಗಿದೆ ಎಂದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ, ಪ.ಪೂ.ಕಾ. ಪ್ರಾಂಶುಪಾಲೆ ಮಾಲತಿದೇವಿ ಉಪಸ್ಥಿತರಿದ್ದರು. ಗಾಂಧಿ ಅಧ್ಯಯನ ಕೇಂದ್ರದ ಸಂಶೋಧಕ ಯು. ವಿನೀತ್‌ ರಾವ್‌ ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು.

ಅಮೆರಿಕಕ್ಕೆ ಹೋಗದ ಗಾಂಧಿಗೆ ಈಗಲ್ಲಿ ಅಧ್ಯಯನ
ಈಗ ಗಾಂಧಿಯವರ 150ನೇ ಜನ್ಮಜಯಂತಿ ಸಂದರ್ಭ ಅಮೆರಿಕಕ್ಕೆ ಹೋಗದ ಗಾಂಧಿ ಕುರಿತು ಅಲ್ಲಿ ಅಧ್ಯಯನ ನಡೆಯುತ್ತಿದೆ. ಅವರನ್ನು ವಿರೋಧಿಸಿದ ಐರೋಪ್ಯ ರಾಷ್ಟ್ರಗಳಲ್ಲಿ ಈಗ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಆಗುತ್ತಿದೆ. ಈಗಲೂ ಗಾಂಧಿ ವಿಚಾರ ಯಶಸ್ಸಾಗುತ್ತಿದೆ ಎನ್ನುವುದಕ್ಕೆ ಅಣ್ಣಾ ಹಜಾರೆ, ನರ್ಮದಾ ಬಚಾವೋ ಆಂದೋಲನ ಸಾಕ್ಷಿ. ದಿಲ್ಲಿಯಲ್ಲಿ ಶಿಕ್ಷಣ ಸಚಿವರು ಸರಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣವನ್ನು ಜಾರಿಗೊಳಿಸುವ ಮೂಲಕ ಯಶಸ್ಸು ಕಾಣುತ್ತಿದ್ದಾರೆ. ಈಗ ಗಾಂಧಿ ಇರುತ್ತಿದ್ದರೆ ಇಂಟರ್‌ನೆಟ್‌ ತಂತ್ರಜ್ಞಾನವನ್ನೂ ಒಪ್ಪಿಕೊಳ್ಳುತ್ತಿದ್ದರು ಎಂದು ಶ್ರೀರಾಜ್‌ ಗುಡಿ ಹೇಳಿದರು.

ಟಾಪ್ ನ್ಯೂಸ್

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

fraud-2

ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್‌ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ

Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

2

Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ

balli

Padubidri: ನೇಣು ಬಿಗಿದು ವ್ಯಕ್ತಿ ಆತ್ಮಹ*ತ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.