ಪೊಲ್ಲಾರು ಕಿಂಡಿ ಅಣೆಕಟ್ಟು ಬೇಡಿಕೆ, ಅನುದಾನ ಕೊರತೆ
ಸಮೃದ್ಧ ನೀರಿದೆ; ಅಣೆಕಟ್ಟು ನಿರ್ಮಿಸುವವರು ಯಾರು?
Team Udayavani, Jan 28, 2021, 3:40 AM IST
ಕಾರ್ಕಳ: ಭೂ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಯ ದೃಷ್ಟಿಯಿಂದ ಪೊಳ್ಳಾರು ನದಿಗೆ ಅಡ್ಡಲಾಗಿ ಸಣ್ಣ ಕಿಂಡಿ ಅಣೆಕಟ್ಟು ನಿರ್ಮಾಣ ಬೇಡಿಕೆಯಿದೆ. ಅನುದಾನ ಕೊರತೆಯಿಂದ ಬೇಡಿಕೆ ಈಡೇರುತಿಲ್ಲ.
ಹಳ್ಳ ಹಿಡಿದಿದೆ ಯೋಜನೆ :
ಕಾರ್ಕಳ ತಾ|ನ ಕಸಬಾದ ಕುಂಬ್ರಪದವು ಎಂಬಲ್ಲಿ ಹರಿಯುವ ಪೊಲ್ಲಾರ್ ನದಿಗೆ ಅಡ್ಡಲಾಗಿ ಸಣ್ಣ ಕಿಂಡಿ ಅಣೆಕಟ್ಟು ನಿರ್ಮಿಸಬೇಕಿರುವುದು. ದಶಕಗಳಿಗೂ ಅಧಿಕ ವರ್ಷಗಳಿಂದ ಬೇಡಿಕೆಯಿದೆ. ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳಿಗೆ ಪತ್ರ ಮನವಿ ಮಾಡಿಕೊಳ್ಳುತ್ತ ಬಂದಿದ್ದರೂ ಸಾಧ್ಯವಾಗದೆ ಯೋಜನೆ ಹಳ್ಳ ಹಿಡಿದಿದೆ
ಕಲ್ಲುಗಳ ತಡೆಗೋಡೆ ಈಗಲೂ ಇದೆ :
ಇಲ್ಲಿಯವರು ಪೂರ್ವದಿಂದಲೂ ಕೃಷಿ, ಬೇಸಾಯ, ತೋಟಗಾರಿಕೆ, ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದವರು. ತೋಡಿಗೆ ಅಣೆಕಟ್ಟುಗಳನ್ನು ಸಾಂಪ್ರದಾಯಿಕವಾಗಿ ನಿರ್ಮಿಸಿಕೊಳ್ಳುತ್ತಿದ್ದರು. ಬೇಸಗೆಯ ನೀರಿನ ಅಭಾವ ನೀಗುತ್ತಿತ್ತು. ಹರಿವಿಗೆ ಅಡ್ಡಲಾಗಿ ಕಲ್ಲಿನ ತಡೆಗೋಡೆಗಳನ್ನು ಕಟ್ಟಿ ನೀರು ಇಂಗಿಸುತ್ತಿದ್ದುದಕ್ಕೆ ಆಧಾರವಾಗಿ ಕಲ್ಲಿನ ತಡೆಗೋಡೆಗಳು ಈಗಲೂ ಅಲ್ಲಿವೆ.
ಆರಣ್ಯವಾಗುವ ಪೂರ್ವದಲ್ಲೇ ಇತ್ತು :
ಮೀಸಲು ಅರಣ್ಯ ಆಗುವ ಪೂರ್ವದಲ್ಲೇ ಪೊಲ್ಲಾರು ತೋಡಿಗೆ ಕಲ್ಲು ಮತ್ತು ಮಣ್ಣಿನಿಂದ ಚೆಕ್ ಡ್ಯಾಮ್ ನಿರ್ಮಾಣ ಮಾಡುತ್ತಿದ್ದರು. 100ಕ್ಕೂ ಅಧಿಕ ವರ್ಷಗಳಿಮದ ನಡೆಯುತ್ತಿತ್ತು. ನೀರು ಸಂಗ್ರಹವಾಗಿ, ಅಂತರ್ಜಲ ಹೆಚ್ಚಳವಾಗುತ್ತಿತ್ತು. ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಸಿಗುತ್ತಿತ್ತು. ವ್ಯವಸಾಯಕ್ಕೆ ಅನುಕೂಲವಾಗುತ್ತಿತ್ತು.
ಪತ್ರಗಳ ಮೇಲೆ ಪತ್ರಗಳ ರವಾನೆ :
ಅಣೆಕಟ್ಟು ನಿರ್ಮಿಸುವಂತೆ ಸ್ಥಳಿಯ ನಿವಾಸಿ ಮೈಪಾಲ ಸಂತೋಷ್ ವಿ. ಕೋಟ್ಯಾನ್ ಅವರು ಪ್ರಧಾನ ಮಂತ್ರಿ, ಮಖ್ಯ ಮಂತ್ರಿ, ಅರಣ್ಯ ಮಂತ್ರಿ, ಜಿಲ್ಲಾಧಿಕಾರಿ, ಪುರಸಭೆ, ಸಂಸದೆ, ಸಹಿತ ಎಲ್ಲ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದರು. ಅವರು ಮಾಡಿರುವ ಮನವಿಗೆ ಲೆಕ್ಕವೇ ಇಲ್ಲ. 2017ರಲ್ಲಿ ಬರೆದ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸರಕಾರದ ಮುಖ್ಯ ಕಾರ್ಯ ದ ರ್ಶಿಗೆ ಕೂಡಲೇ ಕ್ರಮಕ್ಕೆ ಸೂಚನೆಯು ಬಂದಿತ್ತು. ಅರಣ್ಯ ಇಲಾಖೆ, ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದರು. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೇ ಇದಕ್ಕೆ ಕಾರಣ ಎನ್ನುತ್ತಾರೆ ಮನವಿದಾರರು.
ಒಪ್ಪಿಗೆ ಇದೆ ಅನುದಾನವಿಲ್ಲ :
ಪ್ರಸ್ತಾವಿತ ಜಾಗವು ಕುಂಬ್ರ ಪದವು ಬ್ಲಾಕಿನ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದೆ. ಕರಾವಳಿ ಪ್ರಾಧಿ ಕಾರದ ಕ್ರಿಯಾ ಯೋಜನೆ ಸಹಿತ ಇತರೆ ಯಾವುದೇ ಯೋಜನೆಯಡಿ ಪ್ರಸ್ತಾವಿತ ಕಿಂಡಿ ಅಣೆಕಟ್ಟು ಸೇರ್ಪಡೆಗೊಂಡಿಲ್ಲ. ಅರಣ್ಯ ಇಲಾಖೆಯಿಂದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಒಪ್ಪಿಗೆಯಿದೆ. ಆದರೇ ಅನುದಾನವಿಲ್ಲ. 2019-20ರಲ್ಲಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ಸದ್ರಿ ಸ್ಥಳದಲ್ಲಿ ಡ್ಯಾಂ ನಿರ್ಮಾಣ ಮಾಡುವುದರಿಂದ ಅರಣ್ಯಕ್ಕೆ ಯಾವುದೇ ಹಾನಿ ಇಲ್ಲ ಎನ್ನುವ ಅಂಶವನ್ನು ಸ್ಪಷ್ಟ ಪಡಿಸಿದ್ದಾರೆ. ಅರಣ್ಯಾ ಇಲಾಖೆಗೆ 6.25 ಲಕ್ಷ ರೂ. ಅನುದಾನವನ್ನು ಯಾವುದಾದರೂ ಯೋಜನೆಯಲ್ಲಿ ನೀಡಿದಲ್ಲಿ ಅಣೆಕಟ್ಟು ನಿರ್ಮಿಸಲು ಅದು ಸಿದ್ಧವಿದೆ.
ನಿರ್ಮಾಣವಾದರೆ ಏನೆಲ್ಲ ಲಾಭ? :
ಅಣೆಕಟ್ಟು ನಿರ್ಮಾಣಗೊಂಡಲ್ಲಿ ಪರಿಸರದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಪರಿಸರದ 60-70 ಮನೆಗಳ ಬಾವಿಗಳಲ್ಲಿ ನೀರಿನ ಮಟ್ಟ ಏರುತ್ತದೆ. ಬೇಸಗೆಯಲ್ಲಿ ಬಟ್ಟೆ ಒಗೆಯಲು, ಜಾನುವಾರು ಮತ್ತು ಕಾಡು ಪ್ರಾಣಿಗಳಿಗೆ ನೀರಿನ ಆಶ್ರಯವಾಗಿ ಬಹು ಉಪಯೋಗವಿದೆ. ಕೃಷಿ, ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಅಣೆಕಟ್ಟು ನಿರ್ಮಾಣಗೊಂಡಲ್ಲಿ ನೀರಿನ ತಾಪತ್ರಯಕ್ಕೂ ಪರಿಹಾರ ಸಿಗುತ್ತದೆ.
ವಾರ್ಷಿಕವಾಗಿ ಎರಡು ವ್ಯವಸಾಯಕ್ಕೆ ಸಾಕಾಗುವಷ್ಟು ನೀರು ಸಿಗುತ್ತಿತ್ತು. ನಮ್ಮ ಹಿರಿಯರು ಇಲ್ಲಿ ಕಟ್ಟ ಕಟ್ಟಿ ನೀರು ಇಂಗಿಸುತ್ತಿದ್ದರು. ಇಲ್ಲಿ ಅಣೆಕಟ್ಟು ನಿರ್ಮಾಣವಾದಲ್ಲಿ 60ಕ್ಕೂ ಅಧಿಕ ಮನೆಗಳಿಗೆ ಲಾಭವಿದೆ. -ವಿಟ್ಠಲ ಶೆಟ್ಟಿ ಪೊಳ್ಳಾರು, ಸ್ಥಳೀಯ ಕೃಷಿಕ
ವಾರ್ಷಿಕವಾಗಿ ಎರಡು ವ್ಯವಸಾಯಕ್ಕೆ ಸಾಕಾಗುವಷ್ಟು ನೀರು ಸಿಗುತ್ತಿತ್ತು. ನಮ್ಮ ಹಿರಿಯರು ಇಲ್ಲಿ ಕಟ್ಟ ಕಟ್ಟಿ ನೀರು ಇಂಗಿಸುತ್ತಿದ್ದರು. ಇಲ್ಲಿ ಅಣೆಕಟ್ಟು ನಿರ್ಮಾಣವಾದಲ್ಲಿ 60ಕ್ಕೂ ಅಧಿಕ ಮನೆಗಳಿಗೆ ಲಾಭವಿದೆ. -ವಿಟuಲ ಶೆಟ್ಟಿ ಪೊಳ್ಳಾರು, ಸ್ಥಳಿಯ ಕೃಷಿಕ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಿದ್ಧವಿದೆ. ಯಾವುದೇ ಯೋಜನೆಯಲ್ಲಿ ಹಣ ನೀಡಿದರೂ ನಿರ್ಮಿಸಿ ಕೊಡುತ್ತೇವೆ. -ದಿನೇಶ್ ಆರ್‌ಎಫ್ಒ, ಕಾರ್ಕಳ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.