ಕುಂಭದ್ರೋಣ ಮಳೆ: ವ್ಯಾಪಾರಕ್ಕೆ ಕುತ್ತಾಗಿರುವ ಸರ್ವಿಸ್ ರಸ್ತೆ ಅವಾಂತರ
Team Udayavani, Jun 4, 2018, 7:00 AM IST
ಪಡುಬಿದ್ರಿ: ವಾಯುಭಾರ ಕುಸಿತದಿಂದ ಸುರಿದ ಭಾರೀ ಕುಂಭದ್ರೋಣ ಮಳೆಗೆ ಇಳೆಯು ತತ್ತರಿಸಿದ ಬಳಿಕ ಇದೀಗ ಹೆದ್ದಾರಿ ಚತುಷ್ಪತ ನವಯುಗ ಕಾಮಗಾರಿಗಳಿಂದಾಗಿ ಪಡುಬಿದ್ರಿಯಲ್ಲಿ ಎಚ್‌ಪಿ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಒಂದು ಭಾಗದ ವ್ಯಾಪಾರಿಗಳ, ಉದ್ಯಮಿಗಳ ವ್ಯಾಪಾರಕ್ಕೆ ಕುತ್ತಾಗಿರುವ ಅವಾಂತರವು ಸಂಭವಿಸಿದೆ.
ಹೆದ್ದಾರಿಯ ಈ ಭಾಗದಲ್ಲಿ ಸರ್ವಿಸ್ ರಸ್ತೆಯು ಬರುತ್ತಿದೆ. ಈ ರಸ್ತೆ ಪಕ್ಕದಲ್ಲಿ ಹಿಂದೂಸ್ತಾನ್ ಯುನಿಲೀವರ್‌ನ ಪ್ರಮುಖ ಡೀಲರ್ ಒಬ್ಬರಿದ್ದಾರೆ. ಸಿಮೆಂಟ್ ವ್ಯಾಪಾರಿ ಆಟೋಟ ಸಾಮಾಗ್ರಿಗಳ ಮಳಿಗೆ ಸಹಿತ ವಿವಿಧ ವ್ಯವಹಾರ ಸಂಸ್ಥೆಗಳಿದ್ದು ಇದೀಗ ಈ ಭಾಗವು ಉತ್ತು ಬಿತ್ತಿದ ಗದ್ದೆಯಂತಾಗಿದೆ. ಘನ ವಾಹನಗಳನ್ನು ಇಲ್ಲಿಗೆ ತರಲಾಗುತ್ತಿಲ್ಲ. ಇಲ್ಲಿಂದ ಘನ ವಾಹನಗಳಾಗಲೀ, ಕಾರು ಸಹಿತ ಯಾವುದೇ ದ್ವಿಚಕ್ರ ವಾಹನಗಳು ಹೊರ ಹೋಗದ ಸ್ಥಿತಿ ತಲುಪಿದೆ. ಮಳೆಯ ಸಂದರ್ಭದಲ್ಲಂತೂ ಹೂತು ಹೋದ ಲಾರಿಯನ್ನು ಎರಡು ದಿನಗಳು ಶ್ರಮಪಟ್ಟು ಹೊರತೆಗೆಯಲಾಗಿದೆ.
ಮಳೆ ನೀರು ಹರಿಯಲು ತೋಡುಗಳೂ ಇಲ್ಲದೇ ಮಳೆಗಾಲಕ್ಕೆ ಮತ್ತಷ್ಟು ತೊಂದರೆ ಗಳನ್ನು ಅನುಭವಿಸಲಿರುವ ಈ ಭಾಗದ ಜನತೆಯ ನೆರವಿಗಾಗಿ ಜಿಲ್ಲಾಡಳಿತವು ತುರ್ತಾಗಿ ನವಯುಗ ನಿರ್ಮಾಣ ಕಂಪೆನಿಗೇ ಮುನ್ನೆಚ್ಚರಿಕೆಯನ್ನು ನೀಡಿ ಕೆಲಸ ಕಾರ್ಯವನ್ನು ಮಾಡಿಸಬೇಕಿದೆ ಎಂದು ಈ ಭಾಗದ ಉದ್ಯಮಿಗಳ ಅಭಿಮತವಾಗಿದೆ.
ಈ ರಸ್ತೆಯ ಪಕ್ಕದಲ್ಲೇ ಪಾದೆಬೆಟ್ಟು ಪದ್ರಕ್ಕೆ ಹೋಗುವ ಹಳ್ಳಿ ರಸ್ತೆಯೊಂದಿದ್ದು ಇಲ್ಲಿಂದ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಪ್ರತಿದಿನವೂ ತೊಂದರೆಯನ್ನೀಗ ಅನುಭವಿಸುತ್ತಿದ್ದಾರೆ. ಮುಂಗಾರು ಕರ್ನಾಟಕದ ಕರಾವಳಿ ಭಾಗಕ್ಕೆ ಕಾಲಿಡಲಿಡುವ ಒಳಗಾದರೂ ಈ ಮಣ್ಣು ತುಂಃಬಿದ ರಸ್ತೆಗೆ ನವಯುಗ ನಿರ್ಮಾಣ ಕಂಪೆನಿ ಮುಕ್ತಿಯನ್ನು ಕಾಣಿಸಬೇಕಿದೆ.
ಜಿಲ್ಲಾಡಳಿತ ಮುತುವರ್ಜಿ ವಹಿಸಲಿ
ದಿನಕ್ಕೊಂದು ಲಕ್ಷ ರೂ.ಗಳಷ್ಟು ಜಿಎಸ್‌ಟಿ ಪಾವತಿ ಮಾಡುವ ಉದ್ದಿಮೆಯು ತನ್ನದಾಗಿದ್ದು ಹೊರಗಡೆ ಮಾರುಕಟ್ಟೆಗೆ ತಾನು ಸರಬರಾಜು ಮಾಡಬೇಕಾದ ದಿನೋಪಯೋಗಿ ಲಿಫ್ಟಿಕ್ ಸಹಿತ ಟೂತ್ ಪೇಸ್ಟ್, ಸೋಪು, ಶ್ಯಾಂಪು ಮುಂತಾದವುಗಳನ್ನು ಸಾಗಿಸಲು ಇದೀಗ ತಾನು ಹರ ಸಾಹಸ ಪಡಬೇಕಾಗಿದೆ. ಅಭಿವೃದ್ಧಿಯ ಹೆಸರಲ್ಲಿ ತೆರಿಗೆ ಪಾವತಿದಾರರ ಸಂಕಷ್ಟಗಳಿಗೆ ಸ್ಪಂದಿಸುವವರಿಲ್ಲವೆನ್ನುವ ನೋವನ್ನೂ ಉದ್ದಿಮೆದಾರ ಅರವಿಂದ ಕಾಮತ್ ಉದಯವಾಣಿ’ಯೊಂದಿಗೆ ತೋಡಿಕೊಂಡಿದ್ದಾರೆ. ಈ ರಸ್ತೆಯನ್ನು ಘನವಾಹನಗಳ ಸಂಚಾರಕ್ಕೆ ಅನುವಾಗುವಂತೆ ಸಿಮೆಂಟ್, ಜೆಲ್ಲಿ ಮಿಕ್ಸ್ ಮೂಲಕವಾದರೂ ಜಿಲ್ಲಾಡಳಿತವು ಮುತುವರ್ಜಿ ವಹಿಸಿ ಸಂಚಾರ ಯೋಗ್ಯವನ್ನಾಗಿಸಬೇಕಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.