ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ
Team Udayavani, Sep 7, 2019, 5:24 AM IST
ತೆಕ್ಕಟ್ಟೆ: ಕಳೆದ ಒಂದೂವರೆ ವರುಷಗಳಿಂದ ಕುಂಭಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ನಿವಾಸಿ ಉದಯ ಅವರ ಪುತ್ರಿ ಶ್ರಾವ್ಯಾ(9) ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ತರಗತಿಯಲ್ಲಿ ಕುಳಿತು ತನ್ನ ಸಹಪಾಠಿಗಳೊಂದಿಗೆ ಆಟಪಾಠಗಳಲ್ಲಿ ಭಾಗಿಯಾಗಬೇಕಿದ್ದ ಕಂದಮ್ಮ ಆಸ್ಪತ್ರೆಯ ಹಾಸಿಗೆಯಲ್ಲಿ ದಿನ ಕಳೆಯುತ್ತಿದ್ದಾಳೆ.
ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯದ ಮುಜುಂದಾರ್ ಶಾ ಮೆಡಿಕಲ್ ಸೆಂಟರ್‌ನ ವೈದ್ಯರು ಹೇಳುವಂತೆ ಚಿಕಿತ್ಸಾ ವೆಚ್ಚ ಸರಿ ಸುಮಾರು ಮೂವತ್ತೆರಡು ಲಕ್ಷ ರೂ. ತಗಲುತ್ತದೆ.
ಶ್ರಾವ್ಯಾಳ ತಂದೆ ಉದಯ ಅವರು ಕೊರವಡಿ ಕ್ರಾಸಿನಲ್ಲೊಂದು ಬೀಡಾ ಅಂಗಡಿಯನ್ನು ನಡೆಸುತ್ತಿದ್ದು ಚಿಕಿತ್ಸೆಗೆ ತಗಲುವ ಮೊತ್ತವನ್ನು ಹೊಂದಿಸಲಾಗದೆ ಮಣಿಪಾಲ ಆಸ್ಪತ್ರೆ ಹಾಗೂ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಅಲೆದು ಅಸಹಾಯಕ ಸ್ಥಿತಿಗೆ ಬಂದು ತಲುಪಿದ್ದಾರೆ. ಪ್ರಸ್ತುತ ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯದ ಮುಜುಂದಾರ್ ಶಾ ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಮನ ಮಿಡಿಯುವ ಕೈಂಕರ್ಯದ ನೊಗಹೊತ್ತಿದ್ದು ಈ ಬಡ ಕುಟುಂಬ ಮಾನವೀಯ ಸ್ಪಂದನದ ನಿರೀಕ್ಷೆಯಲ್ಲಿದೆ . Name:Udaya, Account : 54058193367, Ifsc:SBIN0041032,SBI tekkatte.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangolli: ಪಿಸ್ತೂಲ್ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು
Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್.ಎಸ್.ಬಲ್ಲಾಳ್
Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್ ಸಿ. ಡಿ’ಸೋಜಾ ಇನ್ನಿಲ್ಲ
Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ
Kollur: ವಿಷ ಹಾಕಿ 12 ಕೋಳಿಗಳ ಹನನ; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.