ಹೊಂಡಮಯವಾದ ಮುಡಾರು-ಮುಡ್ರಾಲು ರಸ್ತೆ
Team Udayavani, Feb 26, 2019, 1:00 AM IST
ಮುಡಾರು: ಬಜಗೋಳಿ ಯಿಂದ ಕೆರ್ವಾಶೆಗೆ ಹೋಗುವ ಮುಡ್ರಾಲು-ಮುಡಾರು ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ.
ದಿನನಿತ್ಯ ಶಾಲಾ ಮಕ್ಕಳೂ ಸೇರಿದಂತೆ ಅನೇಕರು ಇದೇ ಹಾದಿಯನ್ನು ಬಳಸಬೇಕಾಗಿದ್ದು, ರಸ್ತೆ ಅವ್ಯವಸ್ತೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಮುಡ್ರಾಲಿನ ಗ್ರಾಮಸ್ಥರಿಗೆ ಇದನ್ನು ಬಿಟ್ಟರೆ ಪರ್ಯಾಯ ರಸ್ತೆ ಇಲ್ಲದೇ ಇರುವುದರಿಂದ ನಿತ್ಯ ಸಂಚಾರಕ್ಕೆ ಇದನ್ನೇ ಬಳಸಬೇಕಾದ ಅನಿವಾರ್ಯತೆ ಇದೆ.
ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಸುಮಾರು 4 ಕಿ.ಮೀ ಇರುವ ಈ ರಸ್ತೆ ಕೆರ್ವಾಶೆ ಹಾಗೂ ಹಡ್ಯಾಲು ಪ್ರದೇಶವನ್ನು ಸಂಪರ್ಕಿಸುತ್ತದೆ.
ಹತ್ತು ವರ್ಷಗಳ ಹಿಂದೆ ಡಾಮರೀಕಣ ನಡೆದಿದ್ದು, ಎರಡು ವರ್ಷಗಳ ಹಿಂದೆ ರಸ್ತೆಯ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸ ಮಾಡಲಾಗಿದೆ. ಮಳೆಗಾಲಕ್ಕೆ ಮುನ್ನವೆ ಡಾಮರು ಹಾಗೂ ಜಲ್ಲಿಕಲ್ಲುಗಳು ಕಿತ್ತು ಬಂದಿದ್ದು, ಮಳೆಗಾಲದಲ್ಲಿ ಸಂಪೂರ್ಣ ಕೆಸರುಗದ್ದೆಯಾಗುವುದರಲ್ಲಿ ಅನುಮಾನವಿಲ್ಲ. ಬಹುತೇಕ ಭಾಗಗಳಲ್ಲಿ ಗುಂಡಿಗಳು ನಿರ್ಮಾಣಗೊಂಡು ಮಳೆಗಾಲದಲ್ಲಿ ರಸ್ತೆಯಲ್ಲಿಯೇ ನೀರು ನಿಲ್ಲುವುದರಿಂದ ಸಂಚಾರ ಕಷ್ಟಸಾಧ್ಯವೆನಿಸಿದೆ. ರಿಕ್ಷಾ ಚಾಲಕರೂ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಾರೆ ಎಂಬುದು ಸ್ಥಳೀಯರ ಅಳಲು.
ಕಿರಿದಾದ ರಸ್ತೆ
ಘನವಾಹನಗಳ ಸಂಚಾರ ಅತ್ಯಧಿಕವಾಗಿದೆ. ಒಂದಕ್ಕಿಂತ ಹೆಚ್ಚು ವಾಹನಗಳು ಬಂದಲ್ಲಿ ಪಾದಾಚಾರಿಗಳು ಚರಂಡಿಗೆ ಬೀಳಬೇಕಾದ ಪರಿಸ್ಥಿತಿ ಇಲ್ಲಿ ಸರ್ವೇಸಾಮಾನ್ಯ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಕೊಟ್ಟಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ತ್ವರಿತ ಕ್ರಮ
ಮುಡ್ರಾಲು, ಮುಡಾರು , ಪೊಸಲಾಯಿ ರಸ್ತೆಗೆ 1.75 ಕೋಟಿ ರೂ. ಮಂಜೂರಾಗಿದ್ದು, ತ್ವರಿತವಾಗಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು.
– ಗೀತಾ ಪಾಟ್ಕರ್ ಗ್ರಾ.ಪಂ. ಅಧ್ಯಕ್ಷರು, ಮುಡಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.