ಪೋಸ್ಟ್ ಮಾರ್ಟಂ ವರದಿ ಅಂತಿಮವಲ್ಲ : ಎಸ್‌ಪಿ
Team Udayavani, Aug 4, 2018, 12:29 PM IST
ಉಡುಪಿ: ಶೀರೂರು ಶ್ರೀಗಳ ಅಸ್ವಾಭಾವಿಕ ಸಾವು ಪ್ರಕರಣದ ತನಿಖೆ 8 ಪೊಲೀಸ್ ಅಧಿಕಾರಿಗಳ ತಂಡದಿಂದ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಸಿಕ್ಕಿದ್ದರೂ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ವಿಧಿವಿಜ್ಞಾನ ವರದಿ ಮತ್ತು ಮರಣೋತ್ತರ ಪರೀಕ್ಷಾ ವರದಿಯನ್ನು ತಾಳೆ ನೋಡಿಯೇ ವೈದ್ಯರು ಅಂತಿಮ ವರದಿ ನೀಡಲಿದ್ದಾರೆ. ಪೋಸ್ಟ್ ಮಾರ್ಟಂ ವರದಿಯೇ ಅಂತಿಮವಲ್ಲ ಎಂದು ಎಸ್‌ಪಿ ಲಕ್ಷ್ಮಣ್ ಬಿ. ನಿಂಬರಗಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಎಫ್ಎಸ್‌ಎಲ್ ವರದಿ ಬಂದಿಲ್ಲ. ಸಿಸಿಟಿವಿ ಡಿವಿಆರ್ ನಲ್ಲಿರುವ ದೃಶ್ಯಗಳ ಮಾಹಿತಿ ದೊರೆತಿಲ್ಲ. ದೃಶ್ಯ ಡಿವಿಆರ್‌ನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಪೂಜಾ ಸಾಮಗ್ರಿ, ಇತರ ಪರಿಕರ ಗಳನ್ನು ಶೀರೂರು ಮಠದ ಉಸ್ತುವಾರಿಗಳು ಮತ್ತು ಸೋದೆ ಮಠದವರ ಸಮ್ಮುಖ ಸೋದೆ ಮಠಕ್ಕೆ ಹಸ್ತಾಂತರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ನೀಡುವ ಪ್ರಕ್ರಿಯೆ ನಡೆದಿದೆ. ಮಠವನ್ನು ಪೊಲೀಸ್ ಸುಪರ್ದಿಯಿಂದ ಬಿಟ್ಟುಕೊಡುವ ಕುರಿತು ಶೀಘ್ರ ತೀರ್ಮಾನಿಸಲಿದ್ದೇವೆ ಎಂದರು.
ಶೀಘ್ರ ಪಡೆಯಲು ಪ್ರಯತ್ನ
ಮಂಗಳೂರಿನ ಎಫ್ಎಸ್‌ಎಲ್ ಪ್ರಯೋಗಾಲಯದಲ್ಲಿ ಕಾರವಾರ, ಉಡುಪಿ, ದ.ಕ., ಮಡಿಕೇರಿ ಮತ್ತು ಚಿಕ್ಕ ಮಗಳೂರು ಜಿಲ್ಲೆಗಳ ಪ್ರಕರಣಗಳಿಗೆ ಸಂಬಂಧಿಸಿದ ಸ್ಯಾಂಪಲ್‌ಗಳ ಪರೀಕ್ಷೆಗಳು ಇರುತ್ತವೆ. ಅಲ್ಲಿ ಕಾರ್ಯದ ಒತ್ತಡ ಸಹಜವಾಗಿಯೇ ಇರುತ್ತದೆ. ಅದು ತಾಂತ್ರಿಕ ಪ್ರಕ್ರಿಯೆ. ನಾವು ಮಧ್ಯಪ್ರವೇಶಿಸಲು ಆಗದು. ಶೀರೂರು ಶ್ರೀಗಳ ಅಸ್ವಾಭಾವಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದ ಎಫ್ಎಸ್‌ಎಲ್ ವರದಿಯನ್ನು ಆದ್ಯತೆಯ ನೆಲೆಯಲ್ಲಿ ನೀಡುವಂತೆ ಮನವಿ ಮಾಡಿ ದ್ದೇವೆ. ಪೆರ್ಡೂರಿನಲ್ಲಿ 2018ರ ಮೇ 30ರಂದು ನಡೆ ದಿರುವ ಹಸನಬ್ಬ ಪ್ರಕರಣದ ಎಫ್ಎಸ್‌ಎಲ್ ವರದಿ ಕೂಡ ಇನ್ನೂ ಬಂದಿಲ್ಲ. ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿರುವುದರಿಂದ ಆ ವರದಿ ಸಿಐಡಿಗೆ ಹೋಗಲಿದೆ ಎಂದು ಎಸ್‌ಪಿ ತಿಳಿಸಿದರು.
ಇಮೋಷನಲ್ ಅಲ್ಲ , ಪ್ರೊಫೆಷನಲ್
ಇಮೋಷನಲ್ (ಭಾವನಾತ್ಮಕ) ಅಂಶಗಳ ಆಧಾರ ದಲ್ಲಿ ತನಿಖೆ ಸಾಧ್ಯವಾಗದು. ಲಾಜಿಕ್ ಮತ್ತು ಪ್ರೊಫೆಶನಲ್ ಆಗಿ ತನಿಖೆ ನಡೆಯುತ್ತದೆ. ಒಬ್ಬರು ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್‌ಗಳು ಹಾಗೂ ಮೂವರು ಪಿಎಸ್‌ಐಗಳ ತಂಡ ಹಗಲು ರಾತ್ರಿಯೆನ್ನದೆ ತನಿಖೆ ಯಲ್ಲಿ ನಿರತವಾಗಿದೆ. ಮಣಿಪಾಲದಲ್ಲಿ ರಿಕ್ರಿ ಯೇಷನ್ ಕ್ಲಬ್ ನಡೆಸುತ್ತಿದ್ದ ಗುರುಪ್ರಸಾದ್ ಭಟ್ ಕೊಲೆ ಪ್ರಕರಣದಲ್ಲಿ ಘಟನೆ ನಡೆದ 6 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ್ದೇವೆ. ಎಲ್ಲ ಪ್ರಕರಣ ಗಳಲ್ಲಿಯೂ ಹೀಗೆಯೇ ಆಗದು. ಏನಾದರೂ ಸಾಕ್ಷಾ é ಧಾರ ಗಳು ಬೇಕು. ಯಾರೋ ಹೇಳಿದರೆಂದು ಯಾರನ್ನೋ ತಂದು ಇವರೇ ಅಪರಾಧಿ ಎನ್ನಲಾಗದು ಎಂದು ಎಸ್‌ಪಿ ಪ್ರತಿಕ್ರಿಯಿಸಿದರು.
ಉನ್ನತ ತನಿಖೆಗೆ ಬೇಡಿಕೆ ಬಂದಿಲ್ಲ : ಡಿಸಿ
ಉಡುಪಿ: ಶೀರೂರು ಶ್ರೀಗಳ ನಿಧನದ ಬಗ್ಗೆ ಉನ್ನತ ಸ್ತರದ ತನಿಖೆಗೆ ಯಾರಿಂದಲೂ ಜಿಲ್ಲಾಡಳಿತಕ್ಕೆ ಬೇಡಿಕೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಜಿಲ್ಲಾಡಳಿತ ಅಥವಾ ಇನ್ನಾವುದರ ಮೂಲಕವಾದರೂ ಬೇಡಿಕೆ ಬಂದಲ್ಲಿ ಉನ್ನತ ಸ್ತರದ ತನಿಖೆ ನಡೆಸಲಾಗುವುದು ಸಚಿವ ಯು.ಟಿ. ಖಾದರ್ ಹೇಳಿರುವುದನ್ನು ಪತ್ರಕರ್ತರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಾಗ ಯಾರಿಂದಲೂ ಬೇಡಿಕೆ ಬಂದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.