ಪರೀಕ್ಷೆ ಸಮಯದಲ್ಲೂ ಕೊಲ್ಲೂರಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ
ಪೂರ್ಣಗೊಳ್ಳದ ಹಾಲ್ಕಲ್ ಸಬ್‌ಸ್ಟೇಶನ್ ಕಾಮಗಾರಿ
Team Udayavani, Mar 6, 2020, 5:55 AM IST
ಕೊಲ್ಲೂರು: ದ್ವಿತೀಯ ಪಿ.ಯು.ಸಿ.ವಿದ್ಯಾರ್ಥಿಗಳಿಗೆ ಬುಧವಾರದಿಂದ ಪರೀಕ್ಷೆ ಆರಂಭಗೊಂಡಿದೆ ಬಹುತೇಕ ವಿದ್ಯಾರ್ಥಿಗಳು ನಡು ರಾತ್ರಿಯ ವರೆಗೆ ಪರೀಕ್ಷೆಯ ತಯಾ ರಿಗಾಗಿ ಸಿದ್ಧತೆ ನಡೆಸುತ್ತಾರೆ. ಆದರೆ ಕೊಲ್ಲೂರು ಭಾಗದಲ್ಲಿ ವಿದ್ಯುತ್ ಕಣ್ಣಮುಚ್ಚಾಲೆ ಹಾಗೂ ಲೋ ವೋಲ್ಟೆಜ್ ಸಮಸ್ಯೆ ಎದುರಾಗಿರುವುದು ಮಕ್ಕಳಿಗೆ ಕಿರಿಕಿರಿ ಉಂಟುಮಾಡಿದೆ.
ವೋಲ್ಟೆಜ್, ವಿದ್ಯುತ್ ಕಣ್ಣಾ ಮುಚ್ಚಾಲೆ ಕೊಲ್ಲೂರು ಗ್ರಾಮ ವಲ್ಲದೇ ಹಾಲ್ಕಲ್, ಮುದೂರು, ಜಡ್ಕಲ್ ನಲ್ಲಿ ಕಳೆದ ಹಲವು ವರ್ಷ ಗಳಿಂದ ನಿತ್ಯವೂ ಇದೆ. ಈ ಬಗ್ಗೆ ಜನರು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಕಡಿಮೆ ವೋಲ್ಟೆಜ್
ಕೊಲ್ಲೂರಿನಲ್ಲಿ ಸಂಜೆಯಾದಂತೆ ವಿದ್ಯುತ್ ವೋಲ್ಟೆàಜ್ ಕಡಿಮೆಯಾಗುತ್ತದೆ. ಇದರಿಂದ ಅಂಗಡಿ ಮುಂಗಟ್ಟು, ಬ್ಯಾಂಕ್‌ನವರು ಜನರೇಟರ್ ಮೊರೆ ಹೋಗುವುಂತೆ ಮಾಡಿದೆ. ನಿವಾಸಿಗಳು ಪರಿಹಾರ ಕಾಣದೆ ಪರಿತಪಿಸುವಂತಾಗಿದೆ.
ಹಾಲ್ಕಲ್ ಸಬ್ ಸ್ಟೇಶನ್‌ಪೂರ್ಣಗೊಳ್ಳುವುದೇ?
ಹಾಲ್ಕಲ್ ಬಳಿ ಸಬ್ ಸ್ಟೇಶನ್ ನಿರ್ಮಿ ಸುವುದರ ಮೂಲಕ ಕೊಲ್ಲೂರು, ಜಡ್ಕಲ್, ಮುದೂರು, ಈ ಭಾಗದ ನಿವಾಸಿಗಳಿಗೆ ಲೊವೋಲ್ಟೆàಜ್ ಸಮಸ್ಯೆ ಪರಿಹಾರ ವಾಗುವುದೆಂಬ ಭರವಸೆ ಇತ್ತು. ಆದರೆ ಈವರೆಗೂ ಬೇಡಿಕೆ ಈಡೇರಿಲ್ಲ.
ಅರಣ್ಯ ಹಾಗೂ ಮೆಸ್ಕಾಂ ಇಲಾಖೆ ನಡುವಿನ ತಾಂತ್ರಿಕ ಸಮಸ್ಯೆಗಳು ಜನರ ಆಶೋತ್ತರವನ್ನು ವಿಳಂಬಗೊಳಿಸಲು ಕಾರಣವಾಗಿದೆ.
ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಹಾಲ್ಕಲ್ ಸಬ್ ಸ್ಟೇಶನ್ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಇಲಾಖೆಯ ಅ ಧಿಕಾರಿಗಳೊಡನೆ ಮಾತುಕತೆ ನಡೆಸಿದ್ದೇನೆ. ತಾಂತ್ರಿಕ ದೋಷ ನಿಭಾಯಿಸುವಂತೆ ಅರಣ್ಯ ಹಾಗೂ ಮೆಸ್ಕಾಂ ಇಲಾಖೆಯ ಅ ಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನೂ ವಿಳಂಬವಾದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಉನ್ನತ ಅ ಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು
-ಬಿ.ಎಂ.ಸುಕುಮಾರ ಶೆಟ್ಟಿ, ,
ಶಾಸಕರು ಬೈಂದೂರು ಕ್ಷೇತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.