ಪ್ರಮೋದ್ ಮಧ್ವರಾಜ್ ಸಾಧನೆ ಮನೆಮನೆಗೆ: ಅಮೃತ್ ಶೆಣೈ
Team Udayavani, Jul 13, 2017, 3:45 AM IST
ಉಡುಪಿ ಕ್ಷೇತ್ರಕ್ಕೆ ಐತಿಹಾಸಿಕ 1,769 ಕೋ. ರೂ. ಅನುದಾನ
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು 1,769 ಕೋ.ರೂ. ಐತಿಹಾಸಿಕ ಅನುದಾನವನ್ನು ತಂದು ಉಡುಪಿಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸಿದ್ದಾರೆ. ಪ್ರಮೋದ್ ಮಧ್ವರಾಜ್ ಅವರ ಈ ಸಾಧನೆಯನ್ನು ಮನೆಮನೆಗೆ ತಲುಪಿಸುವುದೇ ನಮ್ಮ ಗುರಿ ಎಂದು ಉಡುಪಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪಿ. ಅಮೃತ್ ಶೆಣೈ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಲ್ಪೆ-ಪಡುಕರೆ ಸೇತುವೆಗೆ 16.91 ಕೋ.ರೂ, ಬ್ರಹ್ಮಾವರದಲ್ಲಿ ಮಹಾ ಕೃಷಿ ವಿದ್ಯಾಲಯ-4 ಕೋ.ರೂ., ಮೀನುಗಾರರಿಗೆ ಸಂಕಷ್ಟ ಪರಿಹಾರ 2ರಿಂದ 5 ಲ.ರೂ.ಗೆ ಏರಿಕೆ, ಹಿಂದುಳಿದ ವರ್ಗ ಅಭಿವೃದ್ಧಿಗೆ 12.75 ಕೋ.ರೂ., ಅಲ್ಪಸಂಖ್ಯಾಕ ಅಭಿವೃದ್ಧಿಗೆ 9.05 ಕೋ.ರೂ., ಹಿಂದೂ ಧಾರ್ಮಿಕ ಕ್ಷೇತ್ರ ಅಭಿವೃದ್ಧಿಗೆ 3.28 ಕೋ.ರೂ., ಬಡವರ ಸೂರಿಗೆ 24.718 ಕೋ.ರೂ., ಸೊÌàದ್ಯೋಗ, ಕೈಗಾರಿಕೆಗೆ 47.86 ಕೋ.ರೂ. ಆರೋಗ್ಯ ಸೌಲಭ್ಯಕ್ಕೆ 17.07 ಕೋ.ರೂ., ಮೀನುಗಾರಿಕೆಗೆ 284.71 ಕೋ.ರೂ., ರಾಜ್ಯ ಹೆದ್ದಾರಿಗೆ 9 ಕೋ.ರೂ., ಶಾಸಕರ ಪ್ರದೇಶಾಭಿವೃದ್ಧಿ ನಿಧಿ 8 ಕೋ.ರೂ. ಅನುದಾನ ನೀಡಲಾಗಿದೆ ಎಂದರು.
ಉಡುಪಿಗೆ ನಗರ ಮತ್ತು ಗ್ರಾಮೀಣ ಭಾಗಕ್ಕೆ ನರ್ಮ್ ಬಸ್, ಉಡುಪಿ ಕ್ಷೇತ್ರಕ್ಕೆ ನಿರಂತರ 24 ಗಂಟೆ ವಿದ್ಯುತ್, ಉಡುಪಿಯಲ್ಲಿ ಹೈಟೆಕ್ ಮೀನು ಮಾರುಕಟ್ಟೆ, ಮಲ್ಪೆಯಲ್ಲಿ ಮೀನುಗಾರಿಕಾ ಉಪನಿರ್ದೇಶಕರ ಕಚೇರಿ ಸ್ಥಾಪನೆ, ಬೀಡಿನಗುಡ್ಡೆ ರಂಗಮಂದಿರ, ಅಂಗನವಾಡಿ ಕಟ್ಟಡ, ಸ್ತ್ರೀಶಕ್ತಿ ಭವನ, ಹೀಗೆ ವಿವಿಧ ಯೋಜನೆಗಳ ಮೂಲಕ ಮಹಿಳಾ ಸಶಕ್ತೀಕರಣಕ್ಕೆ ಒಟ್ಟು 20.47 ಕೋ.ರೂ. ವಿನಿಯೋಗ, ಕ್ರೀಡಾ ಅಂಗಣಗಳ ಸಮಗ್ರ ಅಭಿವೃದ್ಧಿ, ಈಜುಕೊಳ, ಸಿಂಥೆಟಿಕ್ ಟ್ರ್ಯಾಕ್, ಸಿಂಥೆಟಿಕ್ ಲಾನ್ ಟೆನ್ನಿಸ್, ಶಟಲ್ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್ ಅಂಕಣ, ಮಣ್ಣಪಳ್ಳ ಕೆರೆ, ಮಲ್ಪೆಯಲ್ಲಿ ಜಲಸಾಹಸ ಕ್ರೀಡೆಗೆ ಹಣ ವಿನಿಯೋಗ, ಬ್ರಹ್ಮಾವರ ತಾಲೂಕು ಘೋಷಣೆ, ಕೊಡಂಕೂರಿನಲ್ಲಿ ನಿರಾಶ್ರಿತರಿಗೆ ಪ್ರಮೋದ್ ಮಧ್ವರಾಜ್ ಬಡಾವಣೆ ನಿರ್ಮಿತವಾದದ್ದು ರಾಜ್ಯಕ್ಕೇ ಮಾದರಿಯಾಗಿದೆ ಎಂದು ಅಮೃತ್ ಶೆಣೈ ತಿಳಿಸಿದರು.
ಪ್ರಚಾರ ಸಮಿತಿಯ ಅಣ್ಣಯ್ಯ ಶೇರಿಗಾರ್, ನಿತ್ಯಾನಂದ ಕೆಮ್ಮಣ್ಣು, ಡಾ| ಸುನೀತಾ ಶೆಟ್ಟಿ, ಪ್ರಭಾಕರ ನಾಯಕ್ ಅಮ್ಮುಂಜೆ, ರವಿರಾಜ ಹೆಗ್ಡೆ, ಜೋಯೆಲ್ ಸೋನ್ಸ್, ವಿಜಯ್ ಡಿ’ಸೋಜಾ, ಸಂಜಯ್, ನೀರಜ್ ಪಾಟೀಲ್, ಯಜ್ಞೆàಶ್ ಆಚಾರ್ಯ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.
ನರ್ಮ್: ಹೊಂದಾಣಿಕೆ ಅಗತ್ಯ
ನರ್ಮ್ ಬಸ್ ಸಂಚಾರಕ್ಕೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಮೃತ್ ಶೆಣೈ ಅವರು, ಖಾಸಗಿ ಬಸ್ ಮಾಲಕರ ನಡೆ ಸರಿಯಾದುದಲ್ಲ. ಖಾಸಗಿ ಮತ್ತು ಸರಕಾರಿ ಬಸ್ ಸೇವೆಗಳು ಹೊಂದಾಣಿಕೆಯಲ್ಲಿ ಮುಂದುವರಿದು ಕೊಂಡು ಹೋಗಬೇಕು. ಸೌಹಾರ್ದದಿಂದ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಮಾತುಕತೆಗೆ ಸ್ಪಂದನ ಸಿಕ್ಕಿಲ್ಲವೆಂದು ಅವರು ಹೇಳುತ್ತಾರೆ. ಆದರೆ ಸಚಿವರೊಂದಿಗೆ ಮನವಿ ಮಾಡಿಕೊಂಡು ಕೂತು ಚರ್ಚಿಸಿದ್ದರೆ ಈ ರೀತಿಯಾಗುತ್ತಿರಲಿಲ್ಲ. ಈಗ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಸಚಿವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅಮೃತ್ ಶೆಣೈ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.