ಪ್ರಸಾದ್ ನೇತ್ರಾಲಯ ನಾಳೆ ಡ್ರೈ ಐ ಕ್ಲಿನಿಕ್ ಉದ್ಘಾಟನೆ
Team Udayavani, Mar 30, 2019, 6:00 AM IST
ಉಡುಪಿ: ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಡ್ರೈ ಐ ಕ್ಲಿನಿಕ್ ಉದ್ಘಾಟನೆ, ಎನ್‌ಎಬಿಎಚ್ ಮಾನ್ಯತಾ ಪ್ರಮಾಣ
ಪತ್ರ ಅನಾವರಣ, ಆ್ಯಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮವು ಅಲಂಕಾರ್ ಟಾಕೀಸ್ ಹಿಂದಿನ ಎ.ಜೆ. ಅಲ್ಸೆ ರಸ್ತೆಯಲ್ಲಿರುವ ಪ್ರಸಾದ್ ನೇತ್ರಾಲಯದಲ್ಲಿ ಮಾ. 31ರ ಪೂರ್ವಾಹ್ನ 11ಕ್ಕೆ ನಡೆಯಲಿದೆ.
2002ರಂದು ಪ್ರಾರಂಭಗೊಂಡು 18ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಪ್ರಸಾದ್ ನೇತ್ರಾಲಯವು ಪ್ರಸ್ತುತ 26ಕ್ಕೂ ಮಿಕ್ಕಿ ಕಣ್ಣಿನ ತಜ್ಞರನ್ನು ಒಳಗೊಂಡು 24 x 7 ಸೇವೆ ನೀಡುವ ಕರಾವಳಿ ಕರ್ನಾಟಕದ ಅತೀ ದೊಡ್ಡ ಕಣ್ಣಿನ ಆಸ್ಪತ್ರೆ. ಈಗಾಗಲೇ ಕಣ್ಣಿನ ಲೇಸರ್ ಚಿಕಿತ್ಸೆ, ಡಯಾಬಿಟಿಸ್ ಕಣ್ಣಿನ ಚಿಕಿತ್ಸೆ, ಮೆಳ್ಳೆಗಣ್ಣು ಚಿಕಿತ್ಸೆ, ಕಣ್ಣಿನ ರೆಟಿನಾ ಚಿಕಿತ್ಸೆ ಮುಂತಾದ ವಿಶೇಷ ಚಿಕಿತ್ಸೆಗಳನ್ನು ನೀಡುವ ಈ ಆಸ್ಪತ್ರೆ ಇದೀಗ ಪ್ರಥಮ ಬಾರಿಗೆ ಕರಾವಳಿ ಜಿಲ್ಲೆಯಲ್ಲಿ ಕಣ್ಣಿನ ಡ್ರೈ ಐ ಕ್ಲಿನಿಕ್ (ಕಣ್ಣಿನ ಒಣಗುವಿಕೆ ಚಿಕಿತ್ಸಾ ವಿಭಾಗ) ಆರಂಭಿಸಲಿದೆ.
ಮಾನ್ಯತಾಪತ್ರ
ಆಸ್ಪತ್ರೆಯು ಗುಣಮಟ್ಟದ ಸೇವೆಗಾಗಿ ಎನ್‌ಎಬಿಎಚ್ ಮಾನ್ಯತೆ ಪಡೆದಿದ್ದು, ಮಾನ್ಯತಾ ಪತ್ರದ ಅನಾವರಣ ಈ ಸಂದರ್ಭ ನಡೆಯಲಿದೆ.
ಶೇ. 25 ಶುಲ್ಕ ರಿಯಾಯಿತಿ
ವಿವಿಧ ಬಗೆಯ ದರಗಳನ್ನೊಳಗೊಂಡ ಕಣ್ಣಿನ ಚಿಕಿತ್ಸೆ ಆಸ್ಪತ್ರೆಯಲ್ಲಿವೆ. 5 ಸಾವಿರದಿಂದ ಹಿಡಿದು 1 ಲ.ರೂ. ವೆರೆಗೆ ಬೆಲೆಬಾಳುವ ವಿವಿಧ ಬಗೆಯ ಲೆನ್ಸ್‌ಗಳು ಲಭ್ಯವಿವೆ. ಶಸ್ತ್ರಚಿಕಿತ್ಸೆಗೆ ಶೇ. 25ರಷ್ಟು ಶುಲ್ಕ ರಿಯಾಯಿತಿ ಇರಲಿದೆ. ಅನುಭವಿ ವೈದ್ಯರ ತಂಡ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಪೊರೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ.
– ಡಾ| ಕೃಷ್ಣಪ್ರಸಾದ್ ಕೆ., ವೈದ್ಯಕೀಯ ನಿರ್ದೇಶಕರು, ಪ್ರಸಾದ್ ನೇತ್ರಾಲಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.