ಪ್ರಶಾಂತ್ ತಾಯಿ ಇಂದು ಜರ್ಮನಿಗೆ
ಜರ್ಮನಿಯಲ್ಲಿ ಬಸ್ರೂರು ವ್ಯಕ್ತಿ ಕೊಲೆ ಪ್ರಕರಣ
Team Udayavani, Apr 2, 2019, 6:30 AM IST
ಕುಂದಾಪುರ: ಪ್ರಶಾಂತ್ ಬಸ್ರೂರು ಅವರ ತಾಯಿಗೆ ಜರ್ಮನಿಗೆ ತೆರಳಲು ಅನು ಕೂಲವಾಗುವ ನಿಟ್ಟಿನಲ್ಲಿ ಸೋಮವಾರ ತ್ವರಿ ತಗತಿಯಲ್ಲಿ ಪಾಸ್‌ಪೋರ್ಟ್ ನವೀಕರಣ ಮಾಡಿ ಕೊಡಲಾಗಿದೆ. ಇದರೊಂದಿಗೆ ತಾಯಿಗೆ ವಿದೇಶ ಪ್ರಯಾಣಕ್ಕೆ ತೆರಳಲು ಎದುರಾಗಿದ್ದ ತಾಂತ್ರಿಕ ಸಮಸ್ಯೆ ನಿವಾರಣೆಯಾಗಿದ್ದು, ಮಂಗಳವಾರ ಅವರು ಜರ್ಮನಿಗೆ ತೆರಳಲಿದ್ದಾರೆ.
ವಿನಯಾ ವೆಂಕಟರಾಮ್ ಅವರ ಪಾಸ್‌ಪೋರ್ಟ್‌ನ ಅವಧಿ ಎ. 14ಕ್ಕೆ ಮುಕ್ತಾಯವಾಗಲಿದ್ದು, ವಿದೇಶಕ್ಕೆ ತೆರಳಬೇಕಾದರೆ ಪಾಸ್‌ಪೋರ್ಟ್ ಅವಧಿ ಕನಿಷ್ಠ 6 ತಿಂಗಳು ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅವರು ಪಾಸ್‌ಪೋರ್ಟ್ ನವೀಕರಣಕ್ಕೆ ಸಹಕರಿಸುವಂತೆ ಮಾಜಿ ಸಂಸದ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಸಂಪರ್ಕಿಸಿದ್ದರು.
ರವಿವಾರ ರಾತ್ರಿಯೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಇ-ಮೇಲ್ ಮುಖಾಂತರ ಸಂದೇಶ ಕಳುಹಿಸಿದ್ದ ಹೆಗ್ಡೆಯವರು ಪಾಸ್‌ಪೋರ್ಟ್ ನವೀಕರಣಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ವಿನಂತಿಸಿದ್ದರು. ತತ್‌ಕ್ಷಣ ಸ್ಪಂದಿಸಿದ ಸಚಿವೆ ಪಾಸ್‌ಪೋರ್ಟ್ ನವೀಕರಣ ಅಷ್ಟೇ ಅಲ್ಲದೆ ಜರ್ಮನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ವೀಸಾ ಸಿದ್ಧಪಡಿಸಿಕೊಡುವಂತೆಯೂ ಸೂಚಿಸಿದ್ದರು.
45 ನಿಮಿಷಗಳಲ್ಲಿ
ಸೋಮವಾರ ವಿನಯಾ ಅವರು ಜಯಪ್ರಕಾಶ್ ಹೆಗ್ಡೆ ಜತೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ತೆರಳಿದಾಗ ಸೂಕ್ತವಾಗಿ ಸ್ಪಂದಿಸಿದ ಅಧಿಕಾರಿಗಳು ಕೇವಲ 45 ನಿಮಿಷಗಳ ಒಳಗಾಗಿ ಪಾಸ್‌ಪೋರ್ಟ್ ನವೀಕರಣ ಮಾಡಿಕೊಟ್ಟರು.
ಪ್ರವಾಸಿ ವಿಮೆ ಹಾಗೂ ವಿಮಾನದ ಟಿಕೆಟ್ ಇಲ್ಲದೆ ಸಾಮಾನ್ಯವಾಗಿ ವೀಸಾ ಪ್ರಕ್ರಿಯೆಗಳು ನಡೆಯುವುದಿಲ್ಲ. ಆದರೆ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ವೀಸಾಕ್ಕೂ ವ್ಯವಸ್ಥೆ ಮಾಡಲಾಗಿದ್ದು, ಮಂಗಳವಾರ ಮುಂಜಾನೆ ವೀಸಾ ದೊರೆಯಲಿದೆ.
ಗೆಳೆಯನ ಜತೆ
ಪ್ರಶಾಂತ್ ಅವರ ಗೆಳೆಯ ಗಣೇಶ್ ಅವರು ರಜೆಯಲ್ಲಿ ಊರಿಗೆ ಬಂದಿದ್ದು, ವಿನಯಾ ಅವರನ್ನು ಕರೆದೊಯ್ಯುವ ಸಲುವಾಗಿ ತುರ್ತಾಗಿ ಮಂಗಳವಾರವೇ ಜರ್ಮನಿಗೆ ಪ್ರಯಾಣ ಬೆಳೆಸಲಿದ್ದಾರೆ.
ಟ್ವೀಟ್
ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯವರು ನವೀಕರಣ ಆದ ಕೂಡಲೇ ಸುಷ್ಮಾ ಸ್ವರಾಜ್ ಹಾಗೂ ಜಯಪ್ರಕಾಶ್ ಹೆಗ್ಡೆಯವರನ್ನು ಉಲ್ಲೇಖೀಸಿ, ಪ್ರಕ್ರಿಯೆ ಪೂರ್ಣಗೊಂಡ ಮಾಹಿತಿಯನ್ನು ತಿಳಿಸಿದರು. ಸುಷ್ಮಾ ಸ್ವರಾಜ್ ಈ ರೀತಿಯ ತ್ವರಿತ ಕಾರ್ಯ ತತ್ಪರತೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ಸಂಪರ್ಕ ಅಧಿಕಾರಿ ನಿಯೋಜನೆ
ಪ್ರಶಾಂತ್ ಅವರ ಕುಟುಂಬಕ್ಕೆ ಸಹಕಾರ ನೀಡಲು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿ ಅಂಬಿಕಾ ಅವರನ್ನು ಸಂಪರ್ಕ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದು, ವಿದೇಶಾಂಗ ಇಲಾಖೆಯ ಮೂಲಕ ಎಲ್ಲ ರೀತಿಯ ಅಗತ್ಯ ಸಹಕಾರ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ತತ್‌ಕ್ಷಣದ ಸ್ಪಂದನೆ
ವಿನಯಾ ಅವರಿಂದ ನನಗೆ ಕರೆ ಬಂದ ಬಳಿಕ ನಾನು ವಿದೇಶಾಂಗ ಸಚಿವರನ್ನು ಸಂಪರ್ಕಿಸಿದೆ. ವಿದೇಶಾಂಗ ಸಚಿವರು ಹಾಗೂ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿಗಳು ತತ್‌ಕ್ಷಣ ಸ್ಪಂದಿಸಿ ನವೀಕರಣ ಮಾಡಿಕೊಟ್ಟಿದ್ದಾರೆ. ಮಂಗಳವಾರ ವೀಸಾ ದೊರೆತ ಕೂಡಲೇ ವಿನಯಾ ಅವರು ಪ್ರಶಾಂತ್ ಸ್ನೇಹಿತ ಗಣೇಶ್ ಜತೆ ಜರ್ಮನಿಗೆ ತೆರಳಲಿದ್ದಾರೆ.
– ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.