ಬದುಕಿಗೊಂದು ಮೌಲ್ಯದ ಮುನ್ನುಡಿ: ಬಿ.ಸಿ. ರಾವ್
Team Udayavani, Feb 24, 2019, 1:00 AM IST
ಹೆಬ್ರಿ: ಮಾನವೀಯ ಮೌಲ್ಯಗಳು, ಸಂಸ್ಕೃತಿಯನ್ನು ದೇಶಾದ್ಯಂತ ಸುಮಾರು 5000ಕ್ಕೂ ಮಿಕ್ಕಿ ಹರಿಕಥೆ ಮೂಲಕ ಸಾರಿದ ನನಗೆ ಹೆಬ್ರಿ ತಾಲೂಕಾಗಿ ಘೋಷಣೆಯಾದ ಬಳಿಕ ಮೊದಲ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ ದಕ್ಕಿರುವುದು ಬದುಕಿಗೊಂದು ಮೌಲ್ಯದ ಮುನ್ನುಡಿ ದೊರೆತಂತಾಗಿದೆ ಎಂದು ಹರಿದಾಸ ಬಿ.ಸಿ. ರಾವ್ ಶಿವಪುರ ಹೇಳಿದರು.
ಫೆ.22ರಂದು ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ನಡೆದ ಹೆಬ್ರಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜಮುಖೀ ಕೆಲಸ
ಸಾಹಿತಿ ಸೋಮೇಶ್ವರ ಶ್ರೀನಿವಾಸ ಶೆಟ್ಟಿ ಅವರು ಸಮಾರೋಪ ಭಾಷಣದಲ್ಲಿ ಮಾತನಾಡಿ, ಹೆಬ್ರಿ ಸಾಹಿತ್ಯ ಸಮ್ಮೇಳನವು ಜಿಲ್ಲಾ ಸಮ್ಮೇಳನದಂತೆ ವಿಶೇಷ ಮೆರುಗು ತಂದಿದ್ದು ,ಸಮ್ಮೇಳನ ಅಧ್ಯಕ್ಷರ ಸಮಾಜಮುಖೀ ಕೆಲಸದಿಂದ ಹೆಬ್ರಿ ಘಟಕಕ್ಕೆ ಇನ್ನಷ್ಟು ಗೌರವ ಹೆಚ್ಚಿದೆ ಎಂದರು.
ಬಿ.ಸಿ. ಸಮಾಜದ ಆಸ್ತಿ
ಮಾಜಿ ಶಾಸಕ ಎಚ್. ಗೋಪಾಲ್ ಭಂಡಾರಿ ಮಾತನಾಡಿ, ಹರಿಕಥೆ ಮೂಲಕ ನಮ್ಮ ಸಂಸ್ಕಾರವನ್ನು ಎಚ್ಚರಿಸುತ್ತಾ ಮೂಲಕ ಕನ್ನಡ ಕೆಲಸ ಮಾಡುತ್ತಿರುವ ಬಿ.ಸಿ.ರಾವ್ ಅವರು ಸಮಾಜದ ಆಸ್ತಿ ಎಂದರು.
ಹೆಬ್ರಿ ತಾಲೂಕು ಘಟಕ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪಿ.ವಿ. ಆನಂದ ಸಾಲಿಗ್ರಾಮ ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್, ಕಬ್ಬಿನಾಲೆ ವಸಂತ್ ಭಾರದ್ವಾಜ್, ಉಡುಪಿ ಜಿಲ್ಲಾ ಘಟಕ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಉದ್ಯಮಿ ಸತೀಶ್ ಕಿಣಿ ಬೆಳ್ವೆ, ತಾ.ಪಂ.Ó ದಸ್ಯ ರಮೇಶ ಕುಮಾರ್, ನಾರಾಯಣ ಶೆಣೈ, ಡಾ| ಸುಬ್ರಹ್ಮಣ್ಯ ಭಟ್, ಪುಂಡಲೀಕ ಮರಾಠೆ, ಉದ್ಯಮಿ ಗೋಪಿನಾಥ ಬಟ್, ಬಲ್ಲಾಡಿ ಚಂದ್ರಶೇಖರ ಭಟ್ ಉಪಸ್ಥಿತರಿದ್ದರು.
ಸಾಧಕರಿಗೆ ಸಮ್ಮಾನ
ವಿವಿಧ ಕÒೇತ್ರದಲ್ಲಿ ಸಾಧನೆಗೈದ ಹೆಬ್ರಿ ಬಾಲಕೃಷ್ಣ ಮಲ್ಯ, ಶಿವಪುರ ರವಿಶಂಕರ ರಾವ್, ವರಂಗ ಗೋಪಿನಾಥ್ ಭಟ್, ಮಡಾಮಕ್ಕಿ ದಿನೇಶ್ ಶೆಟ್ಟಿ, ಬೆಳ್ವೆ ಪುಟ್ಟಿ ಬಾೖ, ಎಚ್.ಕೆ. ಶ್ರೀಧರ ಶೆಟ್ಟಿ, ಚಾರ ಮಿಥುನ್ ಶೆಟ್ಟಿ, ನಾಡಾ³ಲು ಶ್ರೀಧರ್ ಹೆಗ್ಡೆ, ಕುಚ್ಚಾರು ಕಾವ್ಯಾ ಅವರನ್ನು ಸಮ್ಮಾನಿಸಲಾಯಿತು.
ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಭಾಸ್ಕರ ಜೋಯಿಸ್ ಸ್ವಾಗತಿಸಿ, ಶಶಿಧರ ಶೆಟ್ಟಿ ಮತ್ತು ಅನಿತಾ ಎಸ್. ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಕುಮಾರ್ ಎಸ್. ವಂದಿಸಿದರು. ಬಳಿಕ ತೆಂಕು ಹಾಗೂ ಬಡಗು ತಿಟ್ಟಿನ ದ್ವಂದ್ವ ಯಕ್ಷ-ಗಾನ ವೈಭವ ನಡೆಯಿತು.
ಠರಾವು ಮಂಡನೆ
ಹೆಬ್ರಿ ತಾಲೂಕು ಎಂದು ಘೋಷಣೆಯಾಗಿ ವರ್ಷ ಕಳೆದರೂ ಇನ್ನೂ ಯಾವುದೇ ಅಧಿಕಾರಿ ಬರದೇ ಇರುವ ಬಗ್ಗೆ ಖಂಡನೆ ವ್ಯಕ್ತಪಡಿಸಿ ಶೀಘ್ರ ತಾಲೂಕು ಕಚೇರಿ ಕಾರ್ಯಾರಂಭವಾಗಲಿ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರಕಾರದಿಂದ ಉದ್ಯೋಗಾವಕಾಶ ಸಿಗಲಿ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತನ್ನದೇ ಆದ ಧ್ವಜ ಅಥವಾ ಶಾಲು ಸಿಗಲಿ ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಠರಾವು ಮಂಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.