ಹೊಸ ತಾಲೂಕು ರಚನೆ ಪೂರ್ವಭಾವಿ ಸಭೆ
Team Udayavani, Jul 16, 2017, 2:50 AM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಹೊಸ ತಾಲೂಕು ರಚನೆ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.
ಬೈಂದೂರು, ಕಾಪು, ಬ್ರಹ್ಮಾವರದಿಂದ ತಾಲೂಕು ರಚನೆ ಸಂಬಂಧಿಸಿ ಶಾಸಕರಾದ ಪ್ರತಾಪ್ ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ತಾಲೂಕಿಗೆ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೊದಲು ಗ್ರಾಮಸಭೆ ನಡೆಸಿ, ತಾಲೂಕು ರಚನೆ ಸಂಬಂಧ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಎಂದು ಜನಪ್ರತಿನಿಧಿಗಳು ಹೇಳಿದರು.
ಶಾಸಕರು ಲಿಖೀತವಾಗಿ ತಮ್ಮ ಅಭಿಪ್ರಾಯ ವಿವರಿಸಿದ್ದು, ಗ್ರಾಮಗಳ ಸೇರ್ಪಡೆ ವೇಳೆ ಗಡಿ ಗ್ರಾಮಗಳ ಜನರ ಅಭಿಪ್ರಾಯಕ್ಕೂ ಪ್ರಾಮ್ಯುಖತೆ ನೀಡಿ ಎಂದು ಹೇಳಿದರು.
ವಿಶೇಷ ಗ್ರಾಮಸಭೆ ನಡೆಸಿ ನಡಾವಳಿ ಕಳುಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ತಾಲೂಕು ಕಚೇರಿ ಗಳನ್ನೊಳಗೊಂಡಂತೆ ತಾಲೂಕಿಗೆ ಅಗತ್ಯವಾಗಿರುವ ಮೂಲ ಸೌಕರ್ಯ ಕಲ್ಪಿಸಲು ಜಾಗ ಮತ್ತು ಸಿಬಂದಿ ಸಂಬಂಧ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಅನುರಾಧಾ, ಸಹಾಯಕ ಆಯುಕ್ತೆ ಶಿಲ್ಪಾ$ ನಾಗ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.