ವಾಯುಸೇನಾ ರಾಡಾರ್ ಸ್ಥಾಪನೆಗೆ ತಯಾರಿ
Team Udayavani, Sep 14, 2019, 5:16 AM IST
ಸಾಂದರ್ಭಿಕ ಚಿತ್ರ ಬಳಸಲಾಗಿದೆ
ಪಡುಬಿದ್ರಿ: ಪಾದೆಬೆಟ್ಟು ಗ್ರಾಮದ ಕೆಐಎಡಿಬಿ ಜಾಗದಲ್ಲಿ ವಾಯುಸೇನಾ ರಾಡಾರ್ ಸ್ಟೇಶನ್ ಸ್ಥಾಪನೆಗೆ ಪೂರ್ವ ತಯಾರಿಗಳು ಪ್ರಾಥಮಿಕ ಹಂತದಲ್ಲಿವೆ.
ಎನ್‌ಟಿಪಿಸಿಯ ಅಪೂರ್ಣ ವಸತಿಗೃಹ ಕಟ್ಟಡಗಳಿರುವ ಪ್ರದೇಶದ ಸುಮಾರು 25 – 30ಎಕ್ರೆ ಜಾಗವನ್ನು ಕೆಐಎಡಿಬಿ ಅಧಿಕಾರಿಗಳು ಉಡುಪಿಯ ಹಿಂದಿನ ಜಿಲ್ಲಾಧಿಕಾರಿಯ ಬೇಡಿಕೆ ಪತ್ರದ ಮೇರೆಗೆ ಗುರುತಿಸಿ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ರವಾನಿಸಿದ್ದಾರೆ. ವಾಯುಸೇನಾ ಅಧಿಕಾರಿಗಳು ಪ್ರದೇಶವನ್ನು ವೀಕ್ಷಿಸಲಿದ್ದು, ಮುಂದೆ ಹಸ್ತಾಂತರ ಪ್ರಕ್ರಿಯೆ ಆಗಬೇಕಿದೆ ಎಂದು ಕೆಐಎಡಿಬಿ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಉಗ್ರರ ನುಸುಳುವಿಕೆಗೆ ಅಗತ್ಯ ಕ್ರಮ
ಕರಾವಳಿಗೆ ಉಗ್ರರ ನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಈ ರಾಡಾರ್ ಸ್ಥಾಪನೆ ಅತ್ಯಗತ್ಯ. ಕೇಂದ್ರ ಸ್ಥಾಪನೆಯಾದರೆ ಪಡುಬಿದ್ರಿ – ಪಾದೆಬೆಟ್ಟು ಗ್ರಾಮದ ಈ ಪ್ರದೇಶವು ಹೈ ಸೆಕ್ಯೂರಿಟಿ ಪ್ರದೇಶವಾಗಲಿದೆ. ನಂದಿಕೂರು ಭಾಗದಿಂದ ಈ ಪ್ರದೇಶಕ್ಕೆ ರಸ್ತೆ ಸಂಪರ್ಕವನ್ನೂ ಕಲ್ಪಿಸಬೇಕಾಗಿದೆ. ಇಲ್ಲಿ ಜನನಿಬಿಡ ಪ್ರದೇಶವಾಗಲೀ, ಹೆಚ್ಚು ಮನೆಗಳಾಗಲೀ ಇರದು ಎಂದೂ ಕೆಐಎಡಿಬಿ ಮೂಲಗಳು ತಿಳಿಸಿವೆ.
ಸೂಕ್ತ ನಿವೇಶನ ಹಂಚಿಕೆಯಾಗಲಿ
ರಾಡಾರ್ ಸ್ಥಾಪನೆಗೆ ಆಕ್ಷೇಪ ಇಲ್ಲ. ಆದರೆ ಇಲ್ಲಿನ ಮೂಲ ನಿವಾಸಿಗಳಿಗೆ ಸೂಕ್ತ ನಿವೇಶನಗಳನ್ನು ಗುರುತಿಸಿ ಸ್ಥಳಾಂತರಿಸಿದ ಬಳಿಕವಷ್ಟೇ ಭೂಸ್ವಾಧೀನಕ್ಕೆ ಮುಂದಾಗ ಬೇಕೆಂದು ಪಡುಬಿದ್ರಿ ಗ್ರಾ.ಪಂ. ಸದಸ್ಯ ಶ್ರೀನಿವಾಸ ಶರ್ಮ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.