ವಿಕೋಪ ತಡೆಗಟ್ಟುವಿಕೆ ಪೂರ್ವ ಸಿದ್ಧತೆ -ಸ್ಪಂದನೆ: ಕಾರ್ಯಾಗಾರ
Team Udayavani, May 18, 2019, 6:05 AM IST
ಉಡುಪಿ: ಉಡುಪಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಯನ್ನು ಪರಿಷ್ಕರಿಸುವ ಸಲುವಾಗಿ ಆಡಳಿತ ತರಬೇತಿ ಸಂಸ್ಥೆಯ ರಾಜ್ಯ ವಿಕೋಪ ನಿರ್ವಹಣಾ ಕೇಂದ್ರ ವತಿಯಿಂದ ಜಿ.ಪಂ.ನಲ್ಲಿ ಗುರುವಾರ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ, ಜಿ.ಪಂ. ಸಿಇಒ ಸಿಂಧು ಬಿ. ರೂಪೇಶ್, ವಿಕೋಪ ನಿರ್ವಹಣೆಯಲ್ಲಿ ಪ್ರತೀ ಇಲಾಖೆಯ ಪಾತ್ರ ಬಹು ಮುಖ್ಯ. ಜಿಲ್ಲಾ ಮಟ್ಟದಲ್ಲಿ ವಿಕೋಪಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಯೋಜನೆ ಅತ್ಯಗತ್ಯ. ಜಿಲ್ಲಾ ಮಟ್ಟದ ಯೋಜನೆಯನ್ನು ಪ್ರತೀ ವರ್ಷ ಪರಿಷ್ಕರಣೆಗೊಳಿಸಬೇಕು. ವಿಕೋಪ ನಿರ್ವಹಣಾ ಕಾಯಿದೆ-2005ರಂತೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ವಿಕೋಪ ನಿರ್ವಹಣೆಯನ್ನು ನಿಭಾಹಿಸಬೇಕೆಂದರು.
ಅಪರ ಜಿಲ್ಲಾಧಿಕಾರಿ, ವಿದ್ಯಾ ಕುಮಾರಿ ಮಾತನಾಡಿ, ಎಲ್ಲ ಇಲಾಖೆಗಳ ವ್ಯವಸ್ಥಿತ ಮಾಹಿತಿಯನ್ನು ವಿಕೋಪ ನಿರ್ವಣೆಗಾಗಿ ಕ್ರೋಡೀಕರಿಸಿಕೊಳ್ಳಬೇಕು. ವಿಕೋಪ ಸಂದರ್ಭದಲ್ಲಿ ಸೂಕ್ತ ರೀತಿಯ ಸ್ಪಂದನೆ ನಿರ್ವಹಿಸಬೇಕು. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಇಲಾಖಾ ಮಟ್ಟದ ಸ್ಪಂದನಾ ಯೋಜನೆ ರೂಪಿಸಿ ಜಿಲ್ಲಾ ವಿಕೋಪ ನಿರ್ವಹಣೆ ಯೋಜನೆಯ ಪರಿಷ್ಕರಣೆಯಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.
ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ಬೋಧಕ ಡಾ| ಪರಮೇಶ್ ಜೆ.ಆರ್. ಅವರು 2 ದಿನಗಳ ಕಾರ್ಯಾಗಾರದ ಸಂಯೋಜಕರಾಗಿ ಮಾತನಾಡಿದರು. ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯಲ್ಲಿ ವಿಪತ್ತು ತಡೆಗಟ್ಟುವಿಕೆ, ವಿಪತ್ತು ಬಂದ ಸಂದರ್ಭದಲ್ಲಿ ಸೂಕ್ತ ಸ್ಪಂದನೆ, ಪುನರ್‌ವಸತಿ ಸಂದರ್ಭದಲ್ಲಿ ಯೋಜನೆ ಹೇಗೆ ಉಪಯುಕ್ತವಾಗುತ್ತದೆ, ಮಾಹಿತಿಗಳನ್ನು ಹೇಗೆ ಕ್ರೋಡೀಕರಿಸಬೇಕು ಎಂಬಿತ್ಯಾದಿ ಮಾಹಿತಿ ನೀಡಿದರು.
ವಿಪತ್ತು ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಪಾಯಗಳ, ಜಿಲ್ಲಾ ಮಟ್ಟದಲ್ಲಿ ಆಗಲಿರುವ ನಷ್ಟ, ಜಿಲ್ಲಾ ಮಟ್ಟದ ಸಾಮರ್ಥ್ಯ ಗುರುತಿಸಿಕೊಂಡು ಇವುಗಳ ಆಧಾರದ ಮೇಲೆ ತಡೆಗಟ್ಟುವಿಕೆ ಸ್ಪಂದನೆ, ಪುನರ್‌ವಸತಿ ಯೋಜನೆಗಳನ್ನು ರೂಪಿಸಬೇಕೆಂದರು.
ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರದವರು ವಿಪತ್ತು ನಿರ್ವಹಣಾ ಯೋಜನೆಗೆ ಸಿದ್ದಪಡಿಸಿರುವ ಮಾರ್ಗದರ್ಶಿ ಆಧಾರದ ಮೇಲೆ ಸೂಕ್ತ ನಮೂನೆ ಪರಿಚಯಿಸಿದರು. ಭೌಗೋಳಿಕ ಮಾಹಿತಿ ವ್ಯವಸ್ಥೆ, ಮಾಹಿತಿ ದೂರ ಸಂವೇದಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು ವಿಪತ್ತು ನಿರ್ವಹಣೆ ಯೋಜನೆಗೆ ಸಹಕಾರಿ ಎಂದರು.
ಜಿಲ್ಲಾ ಮಟ್ಟದ ಕಂದಾಯ, ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ, ಕರಾವಳಿ ಕಾವಲು ಪಡೆ, ಆರೋಗ್ಯ, ಗಣಿ ಮತ್ತು ಭೂ ವಿಜ್ಞಾನ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅರಣ್ಯ, ಗ್ರಾಮಿಣಾಭಿವೃದ್ಧಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ನೀರಾವರಿ ಇಲಾಖೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ. ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ, ವಿದ್ಯುತ್ಛಕ್ತಿ¤ ಮುಂತಾದ “ಎ’ ಮತ್ತು “ಬಿ’ ವೃಂದದ ಸುಮಾರು 45 ಅಧಿಕಾರಿಗಳು ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ವಿಕೋಪ ನಿರ್ವಹಣಾ ತಜ್ಞ ರವಿ ಓಜನಹಳ್ಳಿ ಅವರು ಪ್ರತಿ ಇಲಾಖೆಯ ಮಾಹಿತಿ, ಜವಾಬ್ದಾರಿ ಹಾಗೂ ಯೋಜನೆಗಳನ್ನು ಸಂಗ್ರಹಿಸಿ, ಕ್ರೋಡೀಕರಿಸಿ ಜಿಲ್ಲೆಯ ಪ್ರತೀ ಇಲಾಖೆ ಹಾಗೂ ಸರಕಾರೇತರ ಸಂಸ್ಥೆಗಳಿಗೆ ತಲುಪಿಸುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.