ಜಿಲ್ಲೆಯಲ್ಲಿ ಎಸೆಸೆಲ್ಸಿ  ಪರೀಕ್ಷೆ ಎದುರಿಸಲು ಸರ್ವ ತಯಾರಿ


Team Udayavani, Jun 11, 2021, 5:50 AM IST

ಜಿಲ್ಲೆಯಲ್ಲಿ ಎಸೆಸೆಲ್ಸಿ  ಪರೀಕ್ಷೆ ಎದುರಿಸಲು ಸರ್ವ ತಯಾರಿ

ಸಾಂದರ್ಭಿಕ ಚಿತ್ರ

ಉಡುಪಿ: ಲಾಕ್‌ಡೌನ್‌ ಹಾಗೂ ಕೋವಿಡ್‌ ನಡುವೆ ಎಸೆಸೆಲ್ಸಿ ಪರೀಕ್ಷೆ ಎದುರಿಸಲು ಜಿಲ್ಲೆಯ ವಿದ್ಯಾರ್ಥಿಗಳು ಸರ್ವ ತಯಾರಿ ನಡೆಸುತ್ತಿದ್ದಾರೆ.

ಬದಲಾದ ಪರೀಕ್ಷಾ ಪದ್ಧತಿಯಲ್ಲಿ ಜಿಲ್ಲೆಯಲ್ಲಿ 77 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ. ಈ ಮೊದಲು 51 ಕೇಂದ್ರಗಳಿದ್ದವು. ಈಗ 26 ಹೊಸ ಕೇಂದ್ರಗಳನ್ನು ರಚನೆ ಮಾಡಿದೆ. 289 ಪ್ರೌಢ ಶಾಲೆಗಳಿಂದ ಒಟ್ಟು 14,380 ಮಕ್ಕಳು ಬರೆಯಲಿದ್ದಾರೆ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತೀ ಕೇಂದ್ರದಲ್ಲಿ ಒಂದು ಮೀಸಲು ಕೊಠಡಿ ಇರುತ್ತದೆ.

ಹಮ್ಮಿಕೊಳ್ಳಲಾಗಿರುವ ಶೈಕ್ಷಣಿಕ ಕಾರ್ಯಕ್ರಮಗಳು :

ಶಾಲಾವಾರು, ವಿಷಯವಾರು ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳನ್ನು ಬದಲಾಗಿರುವ ಪರೀಕ್ಷಾ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗುತ್ತಿದೆ. ಈ ಮೂಲಕ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪ್ರಾಕ್ಟೀಸ್‌ ಮಾಡಿಸಲಾಗುತ್ತಿದೆ. ಬದಲಾಗಿರುವ ಪರೀಕ್ಷಾ ಪದ್ಧತಿ ಆಧರಿಸಿ ಆನ್‌ಲೈನ್‌ ಮೂಲಕ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ನಡೆಸಲಾಗುತ್ತದೆ. ಪ್ರತೀ ಎರಡು ದಿನಕ್ಕೆ ಒಂದು ದಿನ ವಿಷಯವಾರು ಗೂಗಲ್‌ ಮೀಟ್‌ ಮಾಡಿ ಅವರ ಕಲಿಕಾ ಪ್ರಗತಿಯನ್ನು ಪರಿಶೀಲನೆ ಮಾಡಲಾಗುತ್ತಿದೆ. ತಾಲೂಕು ಹಂತದಲ್ಲಿ ಗೂಗಲ್‌ ಮೀಟ್‌ ಮೂಲಕ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಮತ್ತು ಶಿಕ್ಷಕರಿಗೆ ಬದಲಾಗಿರುವ ಪರೀಕ್ಷಾ ಪದ್ಧತಿ ಕುರಿತು ತಿಳಿಸಲಾಗುತ್ತಿದೆ. ಜಿಲ್ಲಾ ಹಂತದಲ್ಲಿ ಡಿಡಿಪಿಐ ಹಾಗೂ ಎಲ್ಲ ಬಿಇಒ ಮತ್ತು ಮೇಲ್ವಿಚಾರಕ ಅಧಿಕಾರಿಗಳ ಗೂಗಲ್‌ ಮೀಟ್‌ ಮಾಡಿ ಬದಲಾಗಿರುವ ಪರೀûಾ ಪದ್ಧತಿ ಬಗ್ಗೆ ತಿಳಿಸಲಾಗಿದೆ.

ಫೋನ್‌ ಇನ್‌ ಕಾರ್ಯಕ್ರಮ :

ಜೂ. 1ರಿಂದ 14ರ ವರೆಗೆ ತಾಲೂಕು ಹಂತದ ಮುಖ್ಯ ಶಿಕ್ಷಕರ ಗೂಗಲ್‌ ಮೀಟ್‌ ಅನ್ನು ಡಿಡಿಪಿಐ, ಬಿಇಒ ನಡೆಸುತ್ತಿದ್ದಾರೆ. ಪ್ರತೀ ಶಾಲೆಯ ವಿಷಯ ಶಿಕ್ಷಕರು  ತಮ್ಮ ಶಾಲೆಯ ಮಕ್ಕಳಿಗೆ ಬದಲಾದ ಪರೀಕ್ಷಾ ಪದ್ಧತಿಯ ಕುರಿತು ಹಾಗೂ ಕಲಿಕಾ ವಿಧಾನದ ಬಗ್ಗೆ ತಿಳಿಸುತ್ತಿದ್ದಾರೆ. ಜೂ. 15ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಡಿಡಿಪಿಐ ಅಧ್ಯಕ್ಷತೆಯಲ್ಲಿ ಫೋನ್‌ ಇನ್‌ ಕಾರ್ಯಕ್ರಮ ನಡೆಸಿ ಪಾಲಕರಿಗೆ, ಮಕ್ಕಳಿಗೆ ಈ ಪರೀಕ್ಷೆಯ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಆನ್‌ಲೈನ್‌ ಕಲಿಕೆ :

2021-22ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಯಿಂದ 10ನೇ ತರಗತಿಗಳಿಗೆ ಆನ್‌ಲೈನ್‌ ಮೂಲಕ ಕಲಿಕೆಯನ್ನು ಮಾಡುವ ವಿಧಾನವನ್ನು ವಿಷಯವಾರು ಆನ್‌ಲೈನ್‌ ವಿಧಾನದ ಬೋಧನೆಗೆ ಆನ್‌ಲೈನ್‌ ಚಟುವಟಿಕೆಗಳ ಮೂಲಕ ಕಲಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೂ.15ರಿಂದ ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಶಿಕ್ಷಕರು ಬೋಧನೆಗೆ ಸಿದ್ಧತೆ ಮಾಡುತ್ತಿದ್ದಾರೆ. ಜು.1ರಿಂದ ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಬೋಧನಾ ಕಾರ್ಯ ಆರಂಭವಾಗಲಿದೆ.

ಜಿಲ್ಲೆಯಲ್ಲಿನ ಹೊಸ ಪರೀಕ್ಷಾ ಕೇಂದ್ರಗಳು :

ಬ್ರಹ್ಮಾವರ :

ನಿರ್ಮಲಾ ಪ್ರೌಢ ಶಾಲೆ, ಬ್ರಹ್ಮಾವರ

ಮೌಂಟ್‌ ರೋಸರಿ ಆಂಗ್ಲ ಮಾಧ್ಯಮ ಶಾಲೆ, ಕಲ್ಯಾಣಪುರ

ಕರ್ನಾಟಕ ಪಬ್ಲಿಕ್‌ ಶಾಲೆ, ಕೊಕ್ಕರ್ಣೆ

ಬೈಂದೂರು :

ಎಚ್‌.ಎಂ.ಎಂ.ಎಂ.ಎಸ್‌. ಆಂಗ್ಲ ಮಾಧ್ಯಮ ಶಾಲೆ, ಬೈಂದೂರು

ತೌಹೀದ ಆಂಗ್ಲ ಮಾಧ್ಯಮ ಶಾಲೆ, ಶಿರೂರು

ಸಂದೀಪನ್‌ ಅಂಗ್ಲ ಮಾಧ್ಯಮ ಶಾಲೆ, ಕಂಬದಕೋಣೆ

ಶ್ರೀ ಮೂಕಾಂಬಿಕಾ ಪ್ರೌಢ ಶಾಲೆ, ಮಾವಿನಕಟ್ಟೆ

ಗ್ರೆಗರಿ ಪ್ರೌಢ ಶಾಲೆ, ನಾಡ

ಕಾರ್ಕಳ :

ಜೇಸಿಸ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕಾರ್ಕಳ

ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ, ಗಣಿತನಗರ ಕುಕ್ಕುಂದೂರು

ಕರ್ನಾಟಕ ಪಬ್ಲಿಕ್‌ ಶಾಲೆ, ಹೊಸಮಾರು

ಸಂತ ಜೋಸೆಫ್ ಪ್ರೌಢ ಶಾಲೆ, ಬೆಳ್ಮಣ್‌

ಜ್ಯೋತಿ ಪ್ರೌಢ ಶಾಲೆ, ಅಜೆಕಾರು

ಸರಕಾರಿ ಪದವಿ ಕಾಲೇಜು ಹೆಬ್ರಿ

ಕುಂದಾಪುರ :

ಸರಕಾರಿ ಪದವಿಪೂರ್ವ

ಕಾಲೇಜು ತೆಕ್ಕಟ್ಟೆ

ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಸಿದ್ದಾಪುರ

ಮದರ್‌ತೆರೆಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಶಂಕರನಾರಾಯಣ

ಶಾರದಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬಸ್ರೂರು

ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಂದಾಪುರ (ಖಾಸಗಿ ಅಭ್ಯರ್ಥಿ ಕೇಂದ್ರ)

ಉಡುಪಿ :

ಸರಕಾರಿ ಪ.ಪೂ.ಕಾಲೇಜು, ಉಡುಪಿ

ಮಹಿಳೆಯರ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು

ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಂಜಿಬೆಟ್ಟು

ಅಲ್‌ ಇಹ್ಸಾನ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಮೂಳೂರು

ದಂಡತೀರ್ಥ ಆಂಗ್ಲ ಮಾಧ್ಯಯ ಪ್ರೌಢ ಶಾಲೆ, ಉಳಿಯಾರಗೋಳಿ, ಕಾಪು

ಸೈಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಉದ್ಯಾವರ

ಸೈಂಟ್‌ ಜೋನ್ಸ್‌ ಪ್ರೌಢ ಶಾಲೆ, ಶಂಕರಪುರ

ಜುಲೈ 3ನೇ ವಾರದಿಂದ ಪರೀಕ್ಷೆ ಆರಂಭ ವಾಗುವ ಸಾಧ್ಯತೆ ಇದೆ. ಈಗಾಗಲೇ ಪ್ರತೀ ಶಾಲಾವಾರು ಗೂಗಲ್‌ ಮೀಟ್‌ ಮಾಡಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮಾಹಿತಿ ನೀಡಲಾಗುತ್ತಿದೆ. ಕೋವಿಡ್‌ ಕಾರಣ ದಿಂದಾಗಿ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ 26 ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಕಳೆದ ಬಾರಿ 51 ಪರೀಕ್ಷಾ ಕೇಂದ್ರಗಳಿತ್ತು. ಈ ಬಾರಿ 77 ಪರೀಕ್ಷಾ ಕೇಂದ್ರಗಳಿವೆ. -ಎನ್‌.ಎಚ್‌. ನಾಗೂರ,  ಡಿಡಿಪಿಐ ಉಡುಪಿ

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.