36 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಕೃಷಿಗೆ ಸಿದ್ಧತೆ
ಜಿಲ್ಲೆಯಲ್ಲಿ ಶೇ 80 ಮಳೆ ಕ್ಷೀಣ ; ಭತ್ತದ ಕೃಷಿಯಲ್ಲಿ ಗುರಿ ಕಡಿತ
Team Udayavani, Jun 8, 2019, 6:00 AM IST
ಉಡುಪಿ: ಕೃಷಿ ಇಲಾಖೆ ಪ್ರಸಕ್ತ ಸಾಲಿನ ಮುಂಗಾರು ಅವಧಿಗೆ ಒಟ್ಟು 36,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲು ಉದ್ದೇಶಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಕೆಲವೇ ದಿನದಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಜೂನ್ ಎರಡನೇ ವಾರದಿಂದ ಭತ್ತದ ಬೀಜ ಬಿತ್ತನೆ ಕಾರ್ಯ ನಡೆಯಲಿದೆ. ಈಗಾಗಲೇ ಕೆಲವೊಂದು ಪ್ರದೇಶದಲ್ಲಿ ಒಣ ಬೀಜ ಬಿತ್ತನೆ ಆರಂಭವಾಗಿದೆ.
ಕಡಿಮೆ ಬಿತ್ತನೆ ಗುರಿ
ಇಲಾಖೆಯು 2018-19ನೇ ಸಾಲಿನಲ್ಲಿ ಮುಂಗಾರಿನಲ್ಲಿ 44,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಸುವ ಗುರಿ ತಲುಪುವಲ್ಲಿ ವಿಫಲವಾಗಿದೆ.ಆದರಿಂದ ಈ ಬಾರಿಯಲ್ಲಿ ಗುರಿಯನ್ನು 8,000 ಹೆಕ್ಟೇರ್ ಪ್ರದೇಶ ಕಡಿತಗೊಳಿಸಲಾಗಿದೆ.ಪ್ರಸಕ್ತ ಉಡುಪಿ ತಾಲೂಕಿನಲ್ಲಿ 15,500 ಹೆಕ್ಟೇರ್, ಕುಂದಾಪುರ ತಾಲೂಕಿನಲ್ಲಿ 14,000 ಹೆಕ್ಟೇರ್ ಹಾಗೂ ಕಾರ್ಕಳ ತಾಲೂಕಿನಲ್ಲಿ 6,500 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದೆ.
ಎಂಓ4 ತಳಿಗೆ ಬೇಡಿಕೆ ಹೆಚ್ಚು
ಜಿಲ್ಲೆಯಲ್ಲಿ ಎಂಒ4 ತಳಿ ಹೆಚ್ಚಿನ ಬೇಡಿಕೆಯಿದೆ. ಇಲಾಖೆಯಿಂದ ಈಗಾಗಲೇ 1,900 ಕ್ವಿಂ., ಎಂ16 ತಳಿ 10 ಕ್ವಿಂ., ಜ್ಯೋತಿ ತಳಿ 20 ಕ್ವಿಂ., ಜಯ ತಳಿ 10 ಕ್ವಿಂ. ಸೇರಿದಂತೆ ಒಟ್ಟು 2,950 ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೇ ಒಟ್ಟು 1,528 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿರಿಸಲಾಗಿದೆ.
1,528.75 ಕ್ವಿಂ. ಭತ್ತದ ಬೀಜ ವಿತರಣೆ
ಈವರೆಗೆ 3,448 ಮಂದಿ ರೈತರಿಗೆ 1,528.75 ಕ್ವಿಂ. ಬಿತ್ತನೆ ಬೀಜ ವಿತರಿಸಲಾಗಿದೆ. ಸಾಮಾನ್ಯ ವರ್ಗದವರಿಗೆ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ 8 ರೂ. ಹಾಗೂ ಪ.ಜಾತಿ, ಪಂ.ಕ್ಕೆ 12 ರೂ. ಸಹಾಯಧನ ನೀಡಲಾಗುತ್ತದೆ.ರೈತರು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆಯಬಹುದು. ಎಕರೆಗೆ 25 ಕೆಜಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತದೆ.
ರಸಗೊಬ್ಬರ 8,500 ಟನ್ ಬೇಡಿಕೆ
ಜಿಲ್ಲೆಯಲ್ಲಿ ರಸಗೊಬ್ಬರಸ ದಾಸ್ತಾನು ಸಮರ್ಪಕವಾಗಿದೆ. 2019-20ನೇ ಸಾಲಿನಲ್ಲಿ 8,500 ಟನ್ ಬೇಡಿಕೆಯಿದೆ. ಮೇ ತಿಂಗಳಲ್ಲಿ 2,300 ಟನ್ ರಸಗೊಬ್ಬರ ದಾಸ್ತಾನಾಗಿದೆ. ಅದರಲ್ಲಿ 750 ಟನ್ ರಸಗೊಬ್ಬರ ವಿತರಿಸಲಾಗಿದೆ.
ಪರಿಷ್ಕೃತ ದರದಲ್ಲಿ ಖರೀದಿಸಿ
ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರಗಳು ಲಭ್ಯವಿದ್ದು, ಸಂಬಂಧಿತ ರೈತ ಸಂಪರ್ಕ ಕೇಂದ್ರದಲ್ಲಿ ಪಡೆಯಬಹುದು. ರೈತರು ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಖರೀದಿ ಮಾಡುವಾಗ ಪರಿಷ್ಕೃತ ದರದಲ್ಲಿ ರಸಗೊಬ್ಬರವನ್ನು ಮಾರಾಟ ಮಾಡಿರುವ ಕುರಿತು ಖಚಿತಪಡಿಕೊಳ್ಳಬೇಕು.
ವಾಡಿಕೆಗಿಂತ ಕಡಿಮೆ ಮಳೆ
ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜನವರಿಯಿಂದ ಮೇ 31 ವರೆಗೆ ಜಿಲ್ಲೆಯಲ್ಲಿ 201.6 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಕೇವಲ 20.6 ಮಿ.ಮೀ ಮಳೆಯಾಗಿದೆ. ಶೇ. 80ಮಳೆ ಕ್ಷೀಣಿಸಿದೆ.
ಉತ್ತಮ ಗುಣಮಟ್ಟದ ಬಿತ್ತನೆ
ರೈತರು ಸ್ವಂತ ಬಿತ್ತನೆ ಬೀಜ ಉಪಯೋಗಿಸುವ ಮೊದಲು 1 ಕೆಜಿ ಉಪ್ಪು ಹಾಗೂ 4 ಲೀ. ನೀರಿನ ಪ್ರಮಾಣದ ದ್ರಾವಣ ತಯಾರಿಸಿ, ಅದರಲ್ಲಿ ಬಿತ್ತನೆ ಬೀಜವನ್ನು ಅದ್ದಿ, ಶುದ್ಧ ನೀರಿನಿಂದ ತೊಳೆದು, ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ಆಯ್ಕೆ ಮಾಡಬೇಕು.
-ಸತೀಶ್ ಬಿ, ಕೃಷಿ ಅಧಿಕಾರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.