ಉಂಡೆ ಚಕ್ಕುಲಿ ತಯಾರಿಕೆಗೆ ಚಾಲನೆ
Team Udayavani, Aug 31, 2018, 6:10 AM IST
ಉಡುಪಿ: ಪೊಡವವಿಗೊಡೆಯನ ನಾಡು ಉಡುಪಿಯಲ್ಲಿ ಸೆ. 2, 3ರಂದು ನಡೆಯುವ ಜನ್ಮಾಷ್ಟಮಿ ಉತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ರಥಬೀದಿಯಲ್ಲಿ ಗುರ್ಜಿ ನೆಡುವ ಕೆಲಸ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ರಥಬೀದಿ ಸುತ್ತ ಒಟ್ಟು 12 ಗುರ್ಜಿಗಳನ್ನು ನೆಡಲಾಗಿದೆ. ಇದರಲ್ಲಿ 7 ಗುರ್ಜಿ ಶ್ರೀಕೃಷ್ಣ ಮಠಕ್ಕೆ ಸೇರಿದ್ದಾದರೆ, ಇನ್ನುಳಿದ 6 ಗುರ್ಜಿಗಳು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇಗುಲಕ್ಕೆ ಸೇರಿದೆ. ರಥಬೀದಿಯ ತೆಂಕಪೇಟೆ, ಕನಕಗೋಪುರದ ಎದುರು ಬೃಹತ್ ಗುರ್ಜಿಗಳನ್ನು ನಿರ್ಮಿಸ ಲಾಗಿದೆ. ವಿಟ್ಲಪಿಂಡಿ ಉತ್ಸವದಂದು ಅನಂತೇಶ್ವರ, ಚಂದ್ರಮೌಳೇಶ್ವರ ಉತ್ಸವ ಮೂರ್ತಿಗಳೊಂದಿಗೆ ಶ್ರೀಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿ ಉತ್ಸವದಲ್ಲಿ ರಥಬೀದಿ ಸುತ್ತ ಪ್ರದಕ್ಷಿಣೆ ಬರುತ್ತದೆ. ಗುರ್ಜಿಗಳಲ್ಲಿ ನೆಟ್ಟ ಮೊಸರು ಕುಡಿಕೆಗಳನ್ನು ಮಠದ ಗೋವನ್ನು ನೋಡಿಕೊಳ್ಳುವ ಗೊಲ್ಲ ಸಮುದಾಯ ದವರು ನಿರ್ವಹಿಸುತ್ತಾರೆ.
ಭಿತ್ತಿ ಚಿತ್ರಗಳಿಗೆ ಬಣ್ಣ
ದೇವಸ್ಥಾನದ ಒಳಗಿನ ಭಿತ್ತಿ ಚಿತ್ರಗಳಿಗೆ ಪುನಃ ಬಣ್ಣ ನೀಡುವ ಮೂಲಕ ಚಿತ್ರಗಳಿಗೆ ಕಳೆ ನೀಡಲಾಗುತ್ತಿದೆ. ಕಲಾವಿದ ಸಚ್ಚಿದಾನಂದ ರಾವ್ ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಬಹಳ ಕಾಲದ ಬಳಿಕ ಚಿತ್ರಗಳಿಗೆ ಬಣ್ಣ ನೀಡುವ ಮೂಲಕ ಚಿತ್ರಗಳಿಗೆ ಮರುಜೀವ ನೀಡಲಾಗಿದೆ.
ಉಂಡೆ ಚಕ್ಕುಲಿ ತಯಾರಿಗೆ ಚಾಲನೆ
ಗುರುವಾರ ಮಠದ ಪಾಕಶಾಲೆಯಲ್ಲಿ ಚಕ್ಕುಲಿ ತಯಾರಿಕೆ ಆರಂಭಿಸಲಾಗಿದೆ.ವಿಟ್ಲಪಿಂಡಿಯಂದು ಹಂಚಲು ಮತ್ತು ಚಿಣ್ಣರ ಸಂತರ್ಪಣೆಯ ಶಾಲೆಗಳಿಗೆ ಹಂಚಲು ಸುಮಾರು 1ಲಕ್ಷ ಚಕ್ಕುಲಿಗಳನ್ನು ತಯಾರಿಸ ಲಾಗುತ್ತಿದೆ. ಶುಕ್ರವಾರ ಉಂಡೆ ತಯಾರಿಕೆಗೆ ಚಾಲನೆ ದೊರಕಲಿದೆ. ಒಟ್ಟು 9 ಬಗೆಯ ಉಂಡೆಗಳನ್ನು ತಯಾರಿಸಲಾಗುತ್ತಿದೆ. ಗುಂಡಿಟ್ಟು ಲಾಡು, ಅರಳುಂಡೆ, ನೆಲಗಡಲೆ ಉಂಡೆ,ಹೆಸರಿಟ್ಟು ಉಂಡೆ, ಕಡ್ಲೆ ಹಾಗೂ ಎಳ್ಳುಂಡೆ, ಒಣ ಶುಂಠಿ, ಗೋಡಂಬಿ ಉಂಡೆ, ರವೆ ಲಾಡು ತಯಾರಾಗಲಿದೆ. ಶಾಲೆಗಳಿಗೆ ಹಂಚುವ ನೆಲಗಡಲೆ ಮತ್ತು ಗುಂಡಿಟ್ಟು ಉಂಡೆಗಳನ್ನು ತಲಾ 40 ಸಾವಿರ ತಯಾರಿಸಲಾಗುತ್ತಿದ್ದು ಮತ್ತುಳಿದ ಉಂಡೆ ಗಳನ್ನು ತಲಾ 25 ಸಾವಿರದಂತೆ ತಯಾರಿಸಲಾಗುತ್ತಿದೆ. ಚಿಣ್ಣರ ಸಂತರ್ಪಣೆಗಾಗಿ ಶಾಲೆಗಳಿಗೆ ನೀಡುವ ಉಂಡೆ ಚಕ್ಕುಲಿಯ ಪೊಟ್ಟಣದಲ್ಲಿ ಎರಡು ಚಕ್ಕುಲಿ ಮತ್ತು ಒಂದು ನೆಲಗಡಲೆ ಮತ್ತು ಗುಂಡಿಟ್ಟು ಉಂಡೆಯನ್ನು ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.